೧೫ ಲಕ್ಷರೂ. ಮೌಲ್ಯದ ಕಬ್ಬಿಣದ ಜಾಯಿಂಟ್ ಜಾಕ್‌ಗಳ ಕಳ್ಳತನ

0
3

ನರಗುಂದ: ಪಟ್ಟಣದ ಮದಗುಣಕಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸರ್ಕಾರಿ ಇಂಜನೀಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ತೆಗೆದಿರಿಸಿದ್ದ ೧೫ ಲಕ್ಷರೂ ಮೌಲ್ಯದ ಕಬ್ಬಿಣದ ಜಾಯಿಂಟ್ ಜಾಕ್‌ಗಳು ಮೇ ೧೦ ರಂದು ಕಳ್ಳತನವಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಂಜನೀಯರಿಂಗ್ ಕಾಲೇಜು ಕಟ್ಟಡದ ಕಾಮಗಾರಿ ಶೇ.೮೦ ರಷ್ಟು ಪೂರ್ಣಗೊಂಡಿದೆ. ಕಾಲೇಜು ಹಿಂಬದಿಯಲ್ಲಿ ಸಿಬ್ಬಂಧಿಗಳಿಗೆ ವಸತಿ ಕೊಠಡಿಗಳನ್ನು ನಿರ್ಮಿಸುವ ಕಾಮಗಾರಿ ನಡೆದಿದೆ. ಈ ಕಟ್ಟಡದ ಮೇಲ್ಬಾವಣೆ ಕೆಲಸಕ್ಕೆ ಬೇಕಾದ ಕಬ್ಬಿಣದ ಜಾಯಿಂಟ್ ಜಾಕ್‌ಗಳನ್ನು ಕಳ್ಳರು ರಾತ್ರಿ ಹೊತ್ತಿನಲ್ಲಿ ಕಾಲೇಜು ಹಿಂಬದಿಯಲ್ಲಿರುವ ಜಮೀನಿನಲ್ಲಿ ಟ್ರಾö್ಯಕ್ಟರ್ ಮೂಲಕ ಬಂದು ಹೊತ್ತೊಯ್ದಿದ್ದಾರೆ.

ಕಳ್ಳರ ಹಾವಳಿಯಿಂದ ಕಳೆದೊಂದು ತಿಂಗಳಿನಿಂದ ನರಗುಂದ ತಾಲೂಕಿನ ಜನರು ನಿದ್ದೆ ಗೇಡುವಂತಾಗಿದೆ. ಕಳೆದ ಏಪ್ರಿÃಲ್ ೩ ರಂದು ಪಟ್ಟಣದ ಸರಸ್ವತಿ ನಗರದ ಚನ್ನವೀರಯ್ಯ ಹಿರೇಮಠ ಎಂಬುವರ ಮನೆಯ ಬೀಗವನ್ನು ಹಾಡಹಗಲೇ ಮುರಿದು ಮನೆಯ ಕಪಾಟಿನಲ್ಲಿಟ್ಟಿದ್ದ ೪ ತೊಲೆ ಬಂಗಾರದ ಆಭರಣಗಳು ಮತ್ತು ೩೫ ಸಾವಿರ ರೂ, ನಗದು ಎಗರಿಸಿ ಪರಾರಿಯಾಗಿದ್ದಾರೆ.
ಕಳೆದ ೧೫ ದಿನಗಳ ಹಿಂದೆ ಸಸರಸ್ವತಿ ನಗರದಲ್ಲಿಯೇ ಎನ್.ಸಿ.ಹಿರೇಮಠ ಮತ್ತು ತ್ರಿಮೂರ್ತಿ ಹಿರೇಹೊಳಿ, ವ್ಹಿ.ಎಂ.ಕ್ಯಾಡದ ಎಂಬುವರ ಮನೆಗಳ ಕಳ್ಳತನವಾಗಿದೆ. ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ಮನೆಯ ನಿರ್ಮಾಣಕ್ಕಾಗಿ ಮಕ್ತುಂ ಕುಂದಗೋಳ ಎಂಬುವರು ತಂದಿದ್ದ ೫೦ ಚೀಲ ಸಿಮೇಂಟ್ ಚೀಲಗಳನ್ನು ಕಳ್ಳರು ಎಗರಿಸಿದ್ದಾರೆ. ಅದೇ ಬಡಾವಣೆ ಪಕ್ಕದಲ್ಲಿರುವ ಯಲಿಗಾರ ಕಾಲೋನಿ ಚರಂಡಿ ನಿರ್ಮಾಣಕ್ಕೆ ತಂದಿಟ್ಟಿದ್ದ ೫೦ ಕ್ವಿಂಟಾಲ್‌ನಷ್ಟು ಕಬ್ಬಿಣ ಮತ್ತು ಕಿಡಕಿ ಬಾಗಿಲುಗಳನ್ನು ಸಹ ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದಾರೆ.

ಮೇ ೧೯ ರಂದು ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಮಕ್ತುಂಬಿ ಎಲಿಗಾರ ಎಂಬುವರ ತಮ್ಮ ಅಂಗಡಿಯ ಮುಂದೆ ಇಟ್ಟಿದ್ದ ೧೦ ರಿಂದ ೧೫ ಸಾವಿರ ರೂ, ಮೌಲ್ಯದ ಎಲೆಯ ಅಂಡಿಗೆಯನ್ನು ದುಷ್ಕರ್ಮಿಗಳು ನಸುಕಿನ ಜಾವ ಎಗರಿಸಿ ಪರಾರಿಯಾಗಿದ್ದಾರೆ.
ಈ ಕುರಿತು ನರಗುಂದ ಠಾಣೆಗೆ ಇವರೆಲ್ಲರೂ ದೂರನ್ನು ನೀಡಿದ್ದಾರೆ. ಆದರೆ, ಪೋಲಿಸರು ಮಾತ್ರ ಇದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ನಿಮ್ಮ ವಸ್ತು ನಿಮಗೆ ಕಾಳಜಿಯಿರಬೇಕು. ಕಳ್ಳತನವಾದರೆ ನಾವೇನು ಮಾಡೋಣ ಎಂದು ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರಂತೆ. ಕೆಲವರಿಗೆ ಇನ್ನು ಪರಿಶೀಲನೆ ಮಾಡುತ್ತಿರುವುದಾಗಿಯೂ ತಿಳಿಸುತ್ತಿದ್ದಾರೆ.

ಈ ಕುರಿತು ಸಿಪಿಐ ಸುಧಿರಕುಮಾರ ಬೆಂಕಿ ಮಾತನಾಡಿ, ಸರಸ್ವತಿ ನಗರದಲ್ಲಿ ಕಳೆದೊಂದು ತಿಂಗಳ ಅವಧಿಯಲ್ಲಿ ಕೆಲವು ಮನೆಗಳ ಸರಣಿ ಕಳ್ಳತನವಾಗಿರುವ ಕುರಿತು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಕಳ್ಳರ ಹಾವಳಿ ನಿಯಂತ್ರಿಸಲು ರಾತ್ರಿ ಹೊತ್ತಿನಲ್ಲಿ ಪೋಲಿಸರ ನೈಟ್ ರೌಂಡ್ಸ್ಗಳನ್ನು ಹೆಚ್ಚಿಸಲಾಗಿದೆ. ಪಟ್ಟಣದಲ್ಲಿ ಒಟ್ಟು ೧೧೦ ಪಾಯಿಂಟ್ಸ್ ಬುಕ್ಕಗಳನ್ನು ಮಾಡಿದ್ದು, ಅದರಲ್ಲಿ ೨೫ ಪಾಯಿಂಟ್ಸ್ಗಳನ್ನು ಸರಸ್ವತಿ ನಗರದಲ್ಲಿಯೇ ಹಾಕಿ ಭದ್ರತೆ ಒದಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಇಂಜನೀಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ೧೫ ಲಕ್ಷರೂ, ಕಬ್ಬಿಣದ ಜಾಯಿಂಟ್ ಜಾಕ್‌ಗಳು ಕಳ್ಳತನವಾಗಿರುವ ಮಾಹಿತಿ ಇದೆ. ಈ ಎಲ್ಲ ಕಳ್ಳತನ ಪ್ರಕರಣಗಳ ಕುರಿತು ಸರಿಯಾದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

loading...