೭೮.೪೦ ಲಕ್ಷ ರೂ. ವೆಚ್ಚದಲ್ಲಿ ನೀರು ಯೋಜನೆ ಜಾರಿ: ಶಾಸಕಿ ಹೆಬ್ಬಾಳಕರ್ 

0
13

೭೮.೪೦ ಲಕ್ಷ ರೂ. ವೆಚ್ಚದಲ್ಲಿ ನೀರು ಯೋಜನೆ ಜಾರಿ: ಶಾಸಕಿ ಹೆಬ್ಬಾಳಕರ್ 

ಬೆಳಗಾವಿ:
ಕರ್ನಾಟಕ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೋದಗಾ ಗ್ರಾಮದಲ್ಲಿ ಮನೆ ಮನೆಗೆ ನಲ್ಲಿ ನೀರು ಪೂರೈಸುವ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು.
ಶಾಸಕಿ ಲಕ್ಷಿ÷್ಮ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಯೋಜನೆ ಮಂಜೂರಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಕಾಮಗಾರಿಗೆ ಚಾಲನೆ ನೀಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಯೋಜನೆಗೆ ೭೮.೪೦ ಲಕ್ಷ ರೂ. ಮಂಜೂರಾಗಿದೆ. ಪ್ರತಿ ಮನೆಗೆ ಪೈಪ್ ಲೈನ್ ಮೂಲಕ ನೀರು ಪೂರೈಸುವ ಯೋಜನೆ ಇದಾಗಿದೆ. ಪಿಕೆಪಿಎಸ್ ನ ಅಧ್ಯಕ್ಷ ಗಂಗಣ್ಣ ಕಲ್ಲೂರ, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಪಿಕೆಪಿಎಸ್ ನ ಸದಸ್ಯರೆಲ್ಲರೂ ಸೇರಿ ಭೂಮಿ ಪೂಜೆಯ ಮೂಲಕ ಕಾಮಗಾರಿಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ತಾಲೂಕ ಪಂಚಾಯತ್ ಸದಸ್ಯರಾದ ಯರಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

 

loading...