ಯದುವಂಶದ ಕೊನೆಯ ಮಹಾರಾಜ ಶ್ರೀಕಂಠದತ್ತ ಒಡೆಯರ್ ಇನ್ನಿಲ್ಲ

0
47

ಬೆಂಗಳೂರು, ಡಿ.10- ಯಧು ವಂಶದ

ಕೊಂಡಿ, ಮೈಸೂರು ಮಹಾರಾಜ ಶ್ರೀಕಂಠದತ್ತ

ನರಸಿಂಹರಾಜ ಒಡೆಯರ್ ಇಂದು

ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ

ನಿಧನರಾಗಿದ್ದಾರೆ.

ಮೈಸೂರು ರಾಜಮನೆತನದ ಕೊನೆಯ

ಕುಡಿಯಾಗಿದ್ದ ಶ್ರೀಕಂಠದತ್ತ ಒಡೆಯರ್ ಅವರ

ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿ

ಶೋಕ ಮಡುಗಟ್ಟಿತ್ತು. ನಾಡಿನಾದ್ಯಂತ

ಶ್ರದ್ದಾಂಜಲಿ ಸಭೆಗಳು ನಡೆದವು. ಗಣ್ಯಾತೀಗಣ್ಯರು

ಕಂಬನಿ ಮಿಡಿದರು. ಕರ್ನಾಟಕ ರಾಜ್ಯ ಕ್ರಿಕೆಟ್

ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ

ಒಡೆಯರ್ ಅವರು ರಾಜಕಾರಣ, ಫ್ಯಾಷನ್

ಲೋಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು

ತೋಡಗಿಸಿಕೊಂಡಿದ್ದರು.

ಅನಾರೋಗ್ಯ ನಿಮಿತ್ತ ವಾರದ ಹಿಂದೆ

ಆಸದಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ

ಅವರು, ಇಂದು ಬೆಳಗ್ಗೆ ಎದಡ ನೋವಿನಿಂದ

ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು.

ತೀವ್ರ ಹೃದಯಾಘಾತದಿಂದ ಮಧ್ಯಾಹ್ನ 3.30ಕ್ಕೆ

ನಿಧನರಾಗಿರುವುದಾಗಿ ಘೋಷಿಸಲಾಗಿದೆ.

ಪತ್ನಿ ಮಹಾರಾಣಿ ಪ್ರಮೋದಾ ದೇವಿ ಹಾಗೂ

ಸಹೋದರಿಯರು ಸೇರಿದಂತೆ ಅನೇಕ ಬಂಧು

ಮಿತ್ರರನ್ನು ಒಡೆಯರ್ ಅಗಲಿದ್ದಾರೆ. ಯಾವುದೇ

ಸರ್ಕಾರವಿದ್ದರು ಒಡೆಯರ್ ಬಗ್ಗೆ ಮೈಸೂರು

ಭಾಗದಲ್ಲಿ ಇಂದಿಗೂ ಪೂಜ್ಯಭಾವನೆಯಿತ್ತು.

loading...

LEAVE A REPLY

Please enter your comment!
Please enter your name here