ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರಾಗಿ ಡಿ. ಮುರಗೇಶನ ನೇಮಕ : ಕರವೇ ಮನವಿ

0
44

ವಿಜಾಪುರ : ಕರ್ನಾಟಕ ಮಾನವ ಹಕ್ಕುಗಳ ಆಯೋಗದ

ಅದ್ಯಕ್ಷರಾಗಿ ನ್ಯಾಯಮೂರ್ತಿ ಡಿ.ಮುರಗೇಶನ್ ಇವರನ್ನು ನೇಮಕ

ಮಾಡಿದ್ದು ಈ ಆದೇಶಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯಿಂದ

ಜಿಲ್ಲಾಧಿಕಾರಿಗಳು,ವಿಜಾಪುರ ಇವರ ಮುಖಾಂತರ ಮಾನ್ಯ

ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಕುರಿತು ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಎಂ.ಸಿ.

ಮುಲ್ಲಾ ರವರು ಮಾತನಾಡಿ, ಕರ್ನಾಟಕದಲ್ಲಿ ಅನೇಕ ಕನ್ನಡಬಲ್ಲ

ನ್ಯಾಯಮುರ್ತಿಗಳಿದ್ದರೂ ಕನ್ನಡ ಬಾಷೆ ಬಾರದ ಅನ್ಯ ರಾಜ್ಯದ

ನ್ಯಾಯಮೂರ್ತಿಗಳನ್ನು ಮಾನವ ಹಕ್ಕುಗಳ ಆಯೋಗದ

ಅದ್ಯಕ್ಷರನ್ನಾಗಿ ನೇಮಿಸಿದ್ದು, ಇದರಿಂದ ಕನ್ನಡಿಗರಿಗೆ ಮಾಡಿದ

ಅನ್ಯಾಯವಾಗಿದೆ. ಸರಕಾರದ ಈ ಕ್ರಮವು ಸರಿಯಾದುದಲ್ಲ

ಎಂದರು. ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಸಂತೋಷ

ಪಾಟೀಲ ಮಾತನಾಡಿ, ಈ ನೇಮಕದಿಂದ ನಾಡಿನ ಜನತೆಗೆ

ಅವಮಾನ ಮಾಡಿದಂತಾಗಿದೆ. ಮತ್ತು ನಾಡಿನ ಜನತೆಯ ಕುಂದು

ಕೊರತೆಗಳನ್ನು ಹಾಗೂ ಸಮಸ್ಯೆಗಳನ್ನು

ತೋಡಿಕೊಳ್ಳಲು ಕಷ್ಟವಾಗುತ್ತದೆ.

ಹಾಗಾಗಿ ನಾಡಿನ ಜನತೆಯ

ಸಮಸ್ಯೆಗಳನ್ನು ಈಡೇರಿಸುವುದು

ಸಾಧ್ಯವಾಗುವದಿಲ್ಲ. ಮಾನವ ಹಕ್ಕುಗಳಲ್ಲಿ

ನಾಡಿನ ಜನತೆಯ ಸಾಕಷ್ಟು ವಿಷಯಗಳು

ಈ ಆಯೋಗದಲ್ಲಿ ಬರುವದರಿಂದ

ಕನ್ನಡವೇ ಬಾರದ ನ್ಯಾಯಮೂರ್ತಿ

ಡಿ.ಮುರಗೇಶನ್ ರವರಿಗೆ ಸ್ಪಂದಿಸಲು

ಕಷ್ಟವಾಗುತ್ತದೆ. ಕರವೇ ಜಿಲ್ಲಾ

ಸಂಚಾಲಕರಾದ ಎಸ್.ಎಂ. ಮಡಿವಾಳರ

ಮಾತನಾಡಿ, ಕೂಡಲೇ ರಾಜ್ಯ ಸರಕಾರ

ನ್ಯಾಯಮೂರ್ತಿ ಡಿ.ಮುರಗೇಶನ್

ನೇಮಕವನ್ನು ರದ್ದುಗೊಳಿಸಿ ಕನ್ನಡಿಗ

ನ್ಯಾಯಮೂರ್ತಿಯವರನ್ನು ಈ ಆಯೋಗಕ್ಕೆ ಅದ್ಯಕ್ಷರನ್ನಾಗಿ ನೇಮಕ

ಮಾಡಲು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷರು

ಶ್ರೀಮತಿ ರೇಷ್ಮಾ ಪಡೇಕನೂರ, ಜಿಲ್ಲಾ ಕಾರ್ಯದರ್ಶಿಗಳಾದ ದಸ್ತಗೀರ

ಸಾಲೋಟಗಿ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ರಾವಜಿ, ತಾಲೂಕಾಧ್ಯಕ್ಷ

ಕಾಂತು ಇಂಚಗೇರಿ, ಅಡಿವೆಪ್ಪ ಸಾಲಗಲ್, ಸಂಜಯ ಮುದ್ದೇಬಿಹಾಳ,

ದಾದಾಪೀರ ಬಡಕಲ್, ಫಯಾಜ ಕಲಾದಗಿ, ಎಸ್.ಎಂ. ಮಡಿವಾಳರ,

ಅಬ್ದುಲ ಹಮೀದ ಲೋಣಿ, ರಾಜೇಂದ್ರಸಿಂಗ ಹಜೇರಿ, ಅಶೋಕ

ಪಾಟೀಲ, ಹುಸೇನಬಾಶ್ಯಾ ಶೇಖ, ಭರತ ಕೋಳಿ, ದಯಾನಂದ

ಸಾವಳಗಿ, ರಜಾಕ ಕಾಖಂಡಕಿ, ಮಲ್ಲು ಮಡಿವಾಳರ, ಸಿದ್ದು ಬುಳ್ಳಾ,

ಎಂ. ಶಿರಬೂರ, ಶಹಾಜಾನ ಖಾದ್ರಿ, ಅಲ್ತಾಪ ಲಕ್ಕುಂಡಿ, ಲಾಲಅಹ್ಮದ

ಬೇಪಾರಿ, ಜಾವೀದ ಜಮಖಾನೆ, ಇನ್ನಿತರ ಕರವೇ ಪದಾಧಿಕಾರಿಗಳು

ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here