ಪ್ರಭುತ್ವ ಸಾಧಿಸಲು ಸಿದ್ದು ಪಣ : ಸೋನಿಯಾ ಹೇಳಿದರೆ ಮಾತ್ರ ಸಂಪುಟ ವಿಸ್ತರಣೆ

0
23

ಬೆಂಗಳೂರು, ಡಿ.19- ಎಐಸಿಸಿ ಅಧ್ಯ-

ಕ್ಷೆ ಸೋನಿಯಾಗಾಂಧಿ, ಅನುಮತಿಯಿಲ್ಲದೆ

ಸಚಿವ ಸಂಪುಟ ವಿಸ್ತರಣೆ ಮಾಡಿದಿರಲು

ತೀರ್ಮಾನಿಸಿರುವ ಮುಖ್ಯಮಂತ್ರಿ

ಸಿದ್ದರಾಮಯ್ಯನವರು ಯಾವುದೇ ಒತ್ತಡಕ್ಕೆ

ಮಣಿಯದೇ ಪಕ್ಷದಲ್ಲಿ ತಮ್ಮ ಪ್ರಭುತ್ವ ಸಾಧಿಸಲು

ಪಣ ತೊಟ್ಟಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ದೆಹಲಿ

ನಾಯಕರಿಂದ ಪರೋಕ್ಷವಾಗಿ ಒತ್ತಡ

ಹಾಕುತ್ತಿರುವ ಆಕಾಂಕ್ಷಿಗಳಿಗೆ ತಾವು ಏನು

ಎಂಬುದನ್ನು ತೋರಿಸಿ ಪಕ್ಷದೊಳಗೆ ತಮ್ಮ

ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ಸಂಪುಟ ವಿಸ್ತರಣೆಗೆ ಕಾಲ ಕೂಡಿ

ಬಂದಿಲ್ಲ ಎಂದು ಕಾರಣ ಹೇಳಿದರೂ

ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸಿ

ತಮ್ಮನ್ನು ದೆಹಲಿಯಲ್ಲಿ ಖಳನಾಯಕನಂತೆ

ಬಿಂಬಿಸುತ್ತಿರುವುದರಿಂದ ಸಹಜವಾಗಿ

ಸಿದ್ದರಾಮಯ್ಯನವರ ಕಣ್ಣು ಕೆಂಪಾಗುವಂತೆ

ಮಾಡಿದೆ.

ಇದನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ

ಅವರು, ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷರ ಅನುಮತಿ

ಇಲ್ಲದೆ ಸಚಿವ ಸಂಪುಟ ವಿಸ್ತರಣೆ ಮಾಡಲು

ಸಾಧ್ಯವೇ ಇಲ್ಲ ಎಂಬ ಕಠೋರ ಸಂದೇಶವನ್ನು

ರವಾನಿಸಿದ್ದಾರೆ.

ರಾಜ್ಯ ಉಸ್ತುವಾರಿ ದಿಗ್ವಯಜಸಿಂಗ್,

ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ,

ಸೇರಿದಂತೆ ಈ ವರೆಗೂ ಸಂಪುಟ ವಿಸ್ತರಣೆ

ಮಾಡುವಂತೆ ಸೂಚನೆ ಕೊಟ್ಟಿಲ್ಲ.

 

loading...

LEAVE A REPLY

Please enter your comment!
Please enter your name here