ಪಟ್ಟಣ ಪಂಚಾಯತಿ ಆಢಳಿತ ನಡೆಸುತ್ತಿರುವ ಕಾಂಗ್ರೇಸ್ ಪಕ್ಷ ಸಂಪೂರ್ಣ ವಿಫಲ -ಸುರೇಶಗೌಡ ಆರೋಪ

0
64

ಯಲಬುರ್ಗಾ,,1-ಪಟ್ಟಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯತಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್  ಪಕ್ಷ ಸಂಪೂರ್ಣ ವಿಫಲವಾಗಿದೆ.ಅಧಿಕಾರಕ್ಕೆ ಬಂದು ಮೂರು ತಿಂಗಳವಾದರೂ ಕೂಡಾ .ಹಿಂದಿನ ಕೆಲಸಗಳನ್ನು ಮುಂದುವರಿಸುವಾದಗಲಿ,ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವದಾಗಲಿ ಮಾಡುತ್ತಿಲ್ಲ.ಪಟ್ಟಣದ ಅಭಿವೃದ್ದಿಗಾಗಿ ಕ್ಷೇತ್ರದ ಶಾಸಕರು ಆಸಕ್ತಿ ತೋರುತ್ತಿಲ್ಲ ಎಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ ಆರೋಪಿಸಿದರು.ಪಟ್ಟಣದ ಸರ್ಕಿಟ್ ಹೌಸಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ಹಿಂದೆ 2012,13ನೇ ಸಾಲಿನ ವೈಯಕ್ತಿಕ ಶೌಚಾಯಲಗಳನ್ನು ನಿರ್ಮಿಸಿಕೊಂಡವರಿಗೆ ಸಹಾಯಧನ ಚೆಕ್ಕನ್ನು ವಿತರಿಸುವಲ್ಲಿ ಫಲಾನುಭವಿಗಳಿಗೆ ವಿನಾಕಾರಣ ಹೇಳಿ ಚೆಕ್ಕನ್ನು ನೀಡುತ್ತಿಲ್ಲಾ.ಈ ಹಿಂದೆ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಸುಮಾರು ಐದು ಎಕರೆ ಜಮೀನನ್ನು ಖರಿದಿಸಲಾಗಿತ್ತು.ಅಲ್ಲದೇ ಫಲಾನುಭವಿಗಳನ್ನು ಕೂಡಾ ಆಯ್ಕೆ ಮಾಡಲಾಗಿತ್ತು.ಆದರೆ ಅಧಿಕಾರವಧಿ ಮುಗಿದ ಬಳಿಕ,ಅದಿಕಾರಕ್ಕೆ ಬಂದಿರುವ ಕಾಂಗ್ರೇಸ್ ಪಕ್ಷದ ಆಡಳಿತ ಅದನ್ನು ಮುಂದುವರಿಸಲಾಗುತ್ತಿಲ್ಲ.ಅದನ್ನು ಸ್ಥಗಿತಗೊಳಿಸಲಾಗಿದೆ.ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ.ಅಲ್ಲದೇ ಪಟ್ಟನದ ವಿವಿಧ ವಾರ್ಡುಗಳಲ್ಲಿ ಭವನಗಳನ್ನು ನಿರ್ಮಿಸಲಾಗಿದೆ.ಆದರೆ ಕೆಲವೊಂದು ಅರ್ಧಕ್ಕೆ ನಿಂತಿದ್ದಾವೆ.ಆದನ್ನು ಕೂಡಾ ಪೂರ್ತಿಗೊಳಿಸುವಲ್ಲಿ ಪಪಂ ಸಂಪೂರ್ಣ ನಿರ್ಲಕ್ಷತನ ವಹಿಸುತ್ತಿದೆ.ಅಲ್ಲದೇ ಪಟ್ಟಣದ ಸಾರ್ವಜನಿಕರಿಗೆ ಹಿರೇಹಳ್ಳ ಯೋಜನೆಯಿಂದ ಕುಡಿಯುವ ನೀರಿನ ಯೋಜನೆ ಕೂಡಾ ತರುವಲ್ಲಿ ವಿಫಲವಾಗಿದೆ.ಹಾಗೇ ಪಪಂ ಸಂಬಂಧಿಸಿದ ಎರಡು ಹಳೇ ಕಟ್ಟಡ ಕೂಡಾ ಖಾಲಿ ಇದ್ದು.ಅವುಗಳನ್ನು ಬಾಡಿಗೆ ರೂಪದಲ್ಲಿ ನೀಡಿದರೆ,ಪಪಂಗೆ ಅದಾಯ ತರಬಲ್ಲದು.ಆದರೆ ಇದರಲ್ಲಿ ಅಧ್ಯಕ್ಷರು ಸೇರಿದಂತೆ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಪಕ್ಷ ಸಂಪುರ್ಣ ಆಸಕ್ತಿ ಕೊಡುತ್ತಿಲ್ಲ ಎಂದು ಪಪಂ ಮಾಜಿ ಅಧ್ಯಕ್ಷರು,ಬಿಜೆಪಿ ಪಕ್ಷದ ಯುವ ಮುಖಂಡ ಸುರೇಶಗೌಡ ಶಿವನಗೌಡ ಆರೋಪಿಸಿದರು.

ಬಿಜೆಪಿ ಪಕ್ಷದ ಪಪಂ ಸದಸ್ಯ ಸಿದ್ರಾಮೇಶ ಬೇಲೇರಿ ಮಾತನಾಡಿ,ಪಟ್ಟಣ ಪಂಚಾಯಿತಿಗೆ ಅಧಿಕಾರಕ್ಕೆ ಬಂದು ಆರು ತಿಂಗಳ ಮುಗಿಯುತ್ತಾ ಬಂದಿದೆ.ಇದರಲ್ಲಿ ಮೂರು ತಿಂಗಳ ಅಡಳಿತಾಧಿಕಾರಿ ನಡೆಸಿದರು.ಅಲ್ಲದೇ ಮೂರು ತಿಂಗಳದಿಂದ ಕಾಂಗ್ರೇಸ್ ಪಕ್ಷದ ಅಡಳಿತ ನಡೆಸುತ್ತಾ ಬಂದಿದೆ. ಪಟ್ಟಣ ಪಂಚಾಯತಿ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳು ಆಗುತ್ತಾ ಬಂದರು  ಒಂದೇ ಸಲ ಸಾಮಾನ್ಯ ಸಭೆ ಕರೆದಿದ್ದಾರೆ.ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳಾಗಲಿ ಚರ್ಚಿಸಿದ ಕೆಲಸಗಳಾಗಲಿ ಯವುದೇ ಆಗಿಲ್ಲ.ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಯಬೇಕು.ಆದರೆ ಆ ನಿಯವನ್ನು ಪಾಲಿಸುತ್ತಿಲ್ಲ.ಮೂರು ತಿಂಗಳಲ್ಲಿ ಮೂವರು ಮುಖ್ಯಾಧಿಕಾರಿಗಳು,ಮೂವರು ಇಂಜನೀಯರಗಳು ಬಂದು ಹೋದರು.ಯಾವ ಕೆಲಸಗಳನ್ನು ಪ್ರಾರಂಭಿಸುವಲ್ಲಿ ಸ್ಥಳಿಯ ಪಪಂ ಸಂಪೂರ್ಣ ನಿರ್ಲಕ್ಷ ವಹಿಸಿದೆ.ಇದರಿಂದ .ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದೆ.ಕೆಲವು ಸಿಬ್ಬಂದಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ವಿನಾಕರಣ ಸುಳ್ಳು ಹೇಳುತ್ತಿದ್ದಾರೆ.ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಚತೆಗೊಳಿಸುತ್ತಿಲ್ಲ.ಸಿಬ್ಬಂದಿ ಕೊರತೆ ನೆಪ ಹೇಳುತ್ತಾರೆ. ,ನಗರೋತ್ಥಾನ ಅಡಿಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ತಿಂಗಳಾದರು ಸಹ ಪಪಂಯವರು ಇನ್ನೂ ಪ್ರಾರಂಭಿಸಿಲ್ಲ.ಬೇರೆ ತಾಲೂಕಿನಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ.ಆದರೆ ನಮ್ಮ ಪಟ್ಟಣದ ಕಾಮಗಾರಿಗಳು ಮಾತ್ರ ಇನ್ನೂ ಪ್ರಾರಂಭಿಸಿಲ್ಲ.ಈ ಬಗ್ಗೆ ಈಗಾಗಲೇ ಸಾಕಷ್ಟು ಭಾರಿ ಮನವಿ ಕೊಟ್ಟರು ಸ್ಪಂದಿಸಿಲ್ಲ.ಮತ್ತು ಧರಣಿ ಸತ್ಯಾಗೃಹ ಕುಳಿತರು ಇವರು ನಿರ್ಲಕ್ಷ್ಯ ವಹಿಸಿದ್ದಾರೆ.ಮೇಲಾಗಿ ಪಟ್ಟಣದ ಸಾರ್ವಜನಿಕರ ಮೂಲಭೂತ ಸೌಕರ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.ಅಲ್ಲದೇ ಆಡಳಿತ ನಡೆಸುವಲ್ಲಿ ಕೂಡಾ ವಿಫಲರಾಗಿದ್ದಾರೆ.ಜನೇವರಿ 10ರ ಒಳಗೆ  ಸಾಮಾನ್ಯ ಸಭೆ ಕರೆದು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ,ಕಾಮಗಾರಿಗಳಿಗೆ ಚಾಲನೆ ಕೊಡದಿದ್ದರೆ ನಗರದ ಎಲ್ಲಾ ಸಂಘಟನೆಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಪಟ್ಟಣವನ್ನು ಬಂದ್ ಮಾಡುವ ಮೂಲಕ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಬಿಜೆಪಿ ಪಕ್ಷದ ಪಪಂ ಸದಸ್ಯ ಸಿದ್ದರಾಮೇಶ ಬೇಲೇರಿ ಎಚ್ಚರಿಸಿದರು.

ಈ ಸಭೆಯಲ್ಲಿ ಪಕ್ಷದ ತಾಲೂಕಾಧ್ಯಕ್ಷ ಶಂಕ್ರಪ್ಪ ಪೊಳ್ಳಟ್ಟಿ ಅಧ್ಯಕ್ಷತೆ ವಹಿಸಿದ್ದರು,ಬಿಜೆಪಿ ಪಕ್ಷದ ತಾಲೂಕಾ ವಕ್ತಾರ ವೀರಣ್ಣ ಹುಬ್ಬಳ್ಳಿ,ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ನರೇಗಲ್ಲ,ತಾಲೂಕಾ ಸಮಿತಿ ಕಾರ್ಯದರ್ಶಿ ಪ್ರಭುರಾಜ ಕಲಬುರ್ಗಿ,ನಗರ ಯುವ ಘಟಕದ ಅಧ್ಯಕ್ಷ ಶರಣಪ್ಪ ಹಡಪದ,ಮುಖಂಡರಾದ,ಸಿದ್ದಪ್ಪ ಕಟ್ಟಿಮನಿ,ಅಮರೇಶ ಹುಬ್ಬಳ್ಳಿ,ಸಿದ್ರಾಮಗೌಡ ಕಲಾಲಬಂಡಿ,ನಟರಾಜ ಬಿದರಿ,ಕೃಷ್ಣಮೂರ್ತಿ ಜಾಲಗಾರ,ಭರಮಗೌಡ ಪೋಲೀಸ ಪಾಟೀಲ್,ಶರಣಪ್ಪ ಕೊರ್ರಳ್ಳಿ,ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here