ಬೇರೆ ಏನೋ ಇದೆ

0
25

 ಬೇರೆ ಏನೋ ಇದೆ. ಇರಬಹದು ಅಹಿಂದ ನಾಯಕ  ಸಿದ್ದರಾಮಯ್ಯ ಅವರಿಗೆ ಒಂದು ಗತಿ ಕಾಣಿಸಲು ಬೇರೆ ಏನೋ ಇದೆ ಎಂಬ ಸಂದೇಹ ಕಾಂಗ್ರೆಸ್ ಪಕ್ಷದಲ್ಲಿ ಜನಜನಿತವಾಗಿ ಸರ್ವರೂ ಮಾತನಾಡುವಂತೆ ಆಗಿದೆ.

ಏನಿರಬಹುದು ಎಂದು ಚಿಂತಿಸುತ್ತಿರುವಾಗಲೇ ಸಿದ್ದ ರಾಮಯ್ಯ ಅವರನ್ನು ಮುಖ್ಯಮಂತ್ರಿ ಪದವಿನಿಂದ ಕೆಳಗಿಳಿಸಿ ಹೊಸ ಆಟ ಆರಂಭಿಸೋಣ ಎಂದು ಕೈ ಕಮಾಂಡ ಚಿಂತಿಸಿದೆ ಎಂದು ಅನೇಕ ವರದಿಗಳು ಬರುತ್ತಲಿವೆ. ಇಂಥ ವಂದತಿಗಳಿಗೆ ಕಿವಿಗೊಡದ ಸಿದ್ದು ಯಾರನ್ನು ಕ್ಯಾರೆ ಎನ್ನದೆ ಕೀಲು ಬಿಚ್ಚಿ ಗಾಡಿ ಓಡಿಸುತ್ತಿದ್ದಾರೆ. ಆದರೆ ಗಾಡಿಗೆ ಕೀಲು ಹಾಕಲು ಡಿಕೆಶಿಯನ್ನು ಅಡ್ಡ ನಿಲ್ಲಿಸಿದ್ದಾರೆಂದು ಹೇಳಿದರೆ ಯಾರಾದರೂ ನಗಬಹುದು. ನಗುವದಕ್ಕೆ ಅರ್ಥವೇ ಇಲ್ಲ. ನಗುವದಿದ್ದರೆ ಡಿಕೆಶಿ ಅವರನ್ನು ನೋಡಿ ನಗಬೇಕು ಒಂದು ಕಣ್ಣು ಕೈ ಕಮಾಂಡ ಮೇಲೆ ಇನ್ನೊಂದು ಕಣ್ಣು ಮುಖ್ಯಮಂತ್ರಿ ಗದ್ದುಗೆ ಮೇಲೆ ಇಟ್ಟು ನಿಂತಿರುವ ಡಿಕೆಶಿ ತಮ್ಮನ್ನು ತಾವು ಬ್ಯಾಲೆನ್ಸ್ ತಪ್ಪದಂತೆ ನೋಡಿಕೊಳ್ಳುವದು ಉಚಿತ. ಇದಕ್ಕೂ ಕಾರಣವಿದೆ. ಕಾಂಗ್ರೆಸ್ ಪಕ್ಷದಲ್ಲಿನ ಅನೇಕರು ಡಿಕೆಶಿ ಬೇಗ್ ಅವರ ವಿರುದ್ಧ ಬಂಡೆದ್ದು ಕೈ ಕಮಾಂಡ ಹತ್ತಿರ ಹೋಗಿದ್ದು ಬೆಲ್ಲ ತರುತ್ತದೆಯೋ ಅಥವಾ ಬೇವು ತರುತ್ತದೆಯೋ ನೋಡಬೇಕು ಇದು ಬಿಡಿ ಹೋಗಲಿ ಡಿಕೆಶಿ ಬೇಗ್ ಕಳಂಕಿತರು ಎಂದು ದೂರಿ ಬಿಜೆಪಿ ಸಹಿತ ಪಾದಯಾತ್ರೆ ಪ್ರತಿಭಟನೆ ನಡೆಸಿ  ಬಿಜೆಪಿಗೂ ಕಾಂಗ್ರೆಸಿಗೂ ಭಾದರಾಯನ ಸಂಬಂಧ ಕಲ್ಪಿಸಿದಂತೆ ಆಗಿದೆ. ಎಲ್ಲವೂ ಅಷ್ಟೇ ಮಸಿ ಇದ್ದಲಿಗೆ ಬುದ್ದಿ  ಹೇಳಿದಂತೆ ಭ್ರಷ್ಟ ಬಿಜೆಪಿ ಭ್ರಷ್ಟ ಕಾಂಗ್ರೆಸ್ ನಾಯಕರಿಗೆ ಬುದ್ದಿ ಹೇಳುವದು ಎಷ್ಟೊಂದು ಸರಿಯಾದ ಮಾತು ಎಂದು ಕೇಳಿದರೆ ದೆಹಲಿ ವಿಧಾನಸಭೆಯಲ್ಲಿ ಲವ್ಲಿ ಹೇಳಿದ ಮಾತು ನೆನಪಾಗುತ್ತದೆ. ಅದೇನೆಂದರೆ ಎ ದೋಸ್ತಿ ಹಮ್ ನಹೀ ಚೋಡೆಂಗೆ, ಚೋಡೆಂಗೆ ಹಮ್ ಮಗರ ಎ ಸಾಥ್ ನಾ ಚೋಡೆಂಗೆ ಎಂದು ಕಾಂಗ್ರೆಸ್ ಬಿಜೆಪಿಗಳು ಹಾಡುತ್ತ ಹೋದರೆ ರಾಷ್ಟ್ತ್ರದ ಜನತೆಗೆ ಬೇರೆ ಏನೂ ದೊಕದಿದ್ದರು ಮನರಂಜನೆ ಮಾತ್ರ ಗ್ಯಾರಂಟಿ.

loading...

LEAVE A REPLY

Please enter your comment!
Please enter your name here