ಕಾರ್ಯನಿರತ ಪತ್ರಕರ್ತರ ಸಂಘದ ಬೆಳವಣಿಗೆ ಒತ್ತು ನೀಡಿ -ಜಿ.ಎಸ್.ಗೋನಾಳ

0
67

ಯಲಬುರ್ಗಾ,,8- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಲವಾರು ದಶಕದಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದರಿಂದ ಈ ಸಂಘವನ್ನು ಪ್ರತಿಯೊಬ್ಬರು ಬೆಳವಣಿಗೆ ಮಾಡುವ ಮೂಲಕ ಸಂಘದಲ್ಲಿ  ಸದಸ್ಯತ್ವವನ್ನು ಪ್ರತಿಯೊಬ್ಬ ಪತ್ರಕರ್ತರು ಪಡೆದುಕೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಪತ್ರಕರ್ತರಿಗೆ ಸಲಹೆ ನೀಡಿದರು.ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ಸಂಘದ ಸದಸ್ಯರ 2014-15ನೇ ಸಾಲಿನ ಸದಸ್ಯತ್ವದ ಸವೀಕರಣ ಸೇರಿದಂತೆ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಘಟನೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು,ರಾಜ್ಯದಲ್ಲಿ ನಮ್ಮ ಕಾರ್ಯನಿರತ ಪತ್ರಕರ್ತರ ಸಂಘ ಬಲಿಷ್ಠವಾಗಿದೆ.

ಹಲವಾರು ದಶಕದಿಂದ ಹುಟ್ಟಿಕೊಂಡಿರುವ ಈ ಸಂಘಕ್ಕೆ ಸರಕಾರದಿಂದ ಮಾನ್ಯತೆ ಪಡೆದುಕೊಂಡಿದ್ದರಿಂದ ಸರಕಾರದ ಹಲವಾರು ಯೋಜನೆಗಳು ಪತ್ರಕರ್ತರಿಗೆ ಸಿಗುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ಸಂಘದ ಸಂಘಟನೆ ಮತ್ತು ಜಿಲ್ಲೆಯ ಪತ್ರಕರ್ತರ ಸದಸ್ಯರ 2014-15ನೇ ಸಾಲಿನ ಸದಸ್ಯತ್ವದ ಸವೀಕರಣಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪತ್ರಕರ್ತರ ಸಭೆಯನ್ನು ಕರೆಯಲಾಗಿದೆ.ಕೂಡಲೇ ಕಾರ್ಯನಿರತ ಪತ್ರಕರ್ತರು ತಮ್ಮ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಅವರು,ಪತ್ರಕರ್ತರಾದವರು ನಾವು ಸತ್ಯ,ನಿಷ್ಠೆಯಿಂದ ವರದಿಗಳನ್ನು ಮಾಡಬೇಕು.ಸಮಾಜವನ್ನು ಬಸಲಾವಣೆ ಮಾಡುವಂತಾ ಶಕ್ತಿ ಪತ್ರಕರ್ತರಲ್ಲಿದೆ.

ಸಮಾಜದಲ್ಲಿ ನಮ್ಮನ್ನು ಗೌರವದಿಂದ ಕಾಣುತ್ತಿದ್ದರಿಂದ ಆ ಗೌರವವನ್ನು ಉಳಿಸುವಂತಾ ಕೆಲಸ ನಾವು ಸಮಾಜಕ್ಕೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಪತ್ರಕರ್ತರಿಗೆ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಸಲಹೆ ನೀಡಿದರು.ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಾಧಿಕ್ ಅಲಿ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕರಣಿ ಸಮಿತಿ ಸದಸ್ಯ ಎಸ್.ಎಸ್.ಹರೀಶ,ಜಿಲ್ಲಾ ಸಮಿತಿ ಖಜಾಂಚಿ ಹನುಮಂತ ಹಳ್ಳಿಕೇರಿ,ಜಿಲ್ಲಾ ಸಮಿತಿ ಉಪಾಧ್ಯಕ್ಷ ಅಲ್ಲಾವುದ್ದೀನ ಎಮ್ಮಿ,,ತಾಲೂಕಾ ಸಮಿತಿ ಅಧ್ಯಕ್ಷ ಕಳಕಪ್ಪ ಚಿಕ್ಕಗಡ,ಪತ್ರಕರ್ತವ್ಹಿ.ಎಸ್.ಶಿವಪ್ಪಯ್ಯನಮಠ ಉಪಸ್ಥಿತರಿದ್ದರು.ಸಭೆಯಲ್ಲಿ ಪತ್ರಕರ್ತರಾದ ಕಳಕಪ್ಪ ಕೊಡತಗೇರಿ,ಶರಣಕುಮಾರ ಅಮರಗಟ್ಟಿ,ಭೀಮಪ್ಪ ನಾಯ್ಕ,ಶರಣಪ್ಪ ಪಾಟೀಲ್,ಸಂತೋಷ ಬಂಡ್ರಿ.ಮಲ್ಲು ಮಾಟರಂಗಿ, ಮಹಾಂತೇಶ ಛಲವಾದಿ, ಮಲ್ಲಿಕಾರ್ಜುನ ಹಡಪದ,ದೊಡ್ಡಬಸಪ್ಪ ಹಕಾರಿ,ಖಾಜಾವಲಿ ಜರಕುಂಟಿ,ಶ್ಯಾಮಿಸಾಬ ಸೇರಿದಂತೆ ತಾಲೂಕಿನ ಪತ್ರಕರ್ತರು ಭಾಗವಹಸಿದ್ದರು.

loading...

LEAVE A REPLY

Please enter your comment!
Please enter your name here