ಜನ ಪ್ರತಿನಿಧಿಗಳ ನಿರ್ಲಕ್ಷ್ಯ: ಕಾಟಾಚಾರಕ್ಕೆ ನೆಡೆದ ತಾಲೂಕು ಪಂಚಾಯ್ತಿ ಕೆಡಿಪಿ ಸಭೆ

0
50

ಕುಷ್ಟಗಿ: ಜನ ಪ್ರತಿ ನಿಧಿಗಳನ್ನು ನಿರ್ಲಕ್ಷ್ಯಿಸಿ ಸರಕಾರಿ ಕಾರ್ಯಕ್ರಮಗಳನ್ನು ನೆಡೆಸುದತ್ತಿದ್ದಿರಿ ನಿಮಗೆ ಜನ ಪ್ರತಿ ನಿಧಿಗಳಾದೂರೂ ಯಾಕೇ ಬೇಕು ಕಣರೀ ಎಂದು ಬಿ.ಆರ್.ಸಿ ಸುರೇಂದ್ರ ಕಾಂಬ್ಳೆಯವರನ್ನು ತಾಲೂಕು ಪಂಚಾಯ್ತಿ ಅಧ್ಯಕ್ಷ ಸಿದ್ದಪ್ಪ ಆವಿನ್ ತರಾಟೆ ತೆಗೆದುಕೊಂಡರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಸಿದ್ದಪ್ಪ ಆವಿನ್ ಅಧಿಕಾರಿಗಳಗೆ ಎಚ್ಚರಿಸಿದರು.

ಸ್ಥಳೀಯ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧುವಾರ ನೆಡೆದ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಚಿಕ್ಕು ಹಾಗೂ ಮಾವು ಸಸಿಗಳನ್ನು ಪಾಲನ್ ಮಾಡುದಕ್ಕಾಗಿ 22 ಜನ ರೈತರಿಗೆ ತಲಾ 1000 ಸಾವಿರ ರೂಪಾಯಿ ಅಂತೆ 20 ಎರಡು ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಮಂಗಳಪ್ಪ ಕಮ್ಮಾರ ಹೇಳಿದರು. ಹನುಮಸಾಗರ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಗೆ ಬೈಸಿಕಲ್ ವಿತರಿಸುತ್ತೇವೆ ಎಂದು ಕಳೆದ ವಾರ ನಮಗೆ ದೂರವಾಣಿ ಮೂಲಕ ಬಿಇಓ ಸಿ.ವಿ ಮ್ಯಾಗೇರಿ ತಿಳಿಸಿ ಏಕಾ ಏಕಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ನಮಗೆ ಅವಮಾನ ಮಾಡುತ್ತೀರಾ ಎಂದು ಅಧಿಕಾರಿ ವಿರುದ್ದ ಹರಿಹಾಯ್ದರು. ಹನುಮಸಾಗರ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೌಪಾಧ್ಯಯರು ಇಲ್ಲಿನ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಪ್ರಯುಕ್ತ ಅಲ್ಲಿನ ಉಳಿದ ಮಕ್ಕಳಿಗೆ ಬಿಸಿ ಊಟ ಸ್ಥಗಿತಗೊಳಿಸಿದ್ದಾರೆ ಎವರಿಗೆ ಕೂಡಲೇ ನೋಟಿಸ್ ಜಾರಿಮಾಡಲು ಸೂಚಿಸಿದರು. ಅಡವಿಭಾವಿ ಗ್ರಾಮದಲ್ಲಿ ಆರ್,ಎಮ್.ಎಸ್ ಶಾಲೆ ಮಂಜೂರಾಗಿದ್ದು ಶಾಲಾ ಕಟ್ಟಡವನ್ನು ನಿರ್ಮಿಸಲು ನಿವೇಶನವನ್ನು ನೀಡಲು ಗ್ರಾಮದ ಇಬ್ಬರು ಜನರು ಜಗಳವಾಡುತ್ತಿದ್ದು ಈ ಸಮಸ್ಯೆ ಬಗಿಯರಿದ ಮೇಲೆ ಕಟ್ಟಡ ನಿರ್ಮಿಸಲಾಗಿವುದು ಎಂದು ಅಧಿಕಾರಿ ಹೇಳಿದರು.

ರೈತರಿಗೆ ಸಸಿಗಳನ್ನು ವಿತರಿಸುವುದು ಮಾತ್ರವಲ್ಲ ಅವುಗಳನ್ನು ಪೋಷಣೆ ಪಾಲನೆ ಮಾಡುತಿದ್ದಾರೆ ಇಲ್ಲವೂ ಪರಶೀಲಿಸಬೇಕು ಎಂದು ಅಧಿಕಾರಿಗೆ ಅಧ್ಯಕ್ಷ ಸಿದ್ದಪ್ಪ ಆವಿನ ಆದೇಶಿಸಿದರು. ತಾಲೂಕು ಆಡಳಿತ, ತಹಶೀಲ್ದಾರ ಸಿಡಿಪಿಓ, ಬಿಸಿಎಂ, ಕೃಷಿ, ಸಾರಿಗೆ, ಪುರಸಭೆ, ಇನ್ನಿತರ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ನಿಂಗಮ್ಮ ಜಗ್ಗನಗೌಡ ಪಾಟೀಲ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಪೊಲೀಸ್ ಪಾಟೀಲ್,  ಕರ್ಯನಿರ್ವಾಹಕ ಅಧಿಕಾರಿ ಎಂ.ವಿ ಬದಿ ಇದ್ದರು.

ಈ ಕೆಡಿಪಿ ಸಭೆಯಲ್ಲಿ ತಲೂಕಿನ ಸರ್ವ ಅಧಿಕರಿಗಳ ಹಾಜರಿರಬೇಕು ಆದರೇ ಹಾಜರಾಗಬೇಕಿತ್ತು ಆದರೇ ಸಭೆಯಲ್ಲಿ ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು ಇದರಿಂದ ಕಾಟಾಚಾರಕ್ಕೆ ನೆಡೆದ ಸಭೆಯಂದು ಭಾಸವಾಗಿತ್ತು.

loading...

LEAVE A REPLY

Please enter your comment!
Please enter your name here