ವಿದ್ಯಾಸಂಸ್ಥೆಯ ಕಾರ್ಯಸಾಧನೆ ನಿಜಕ್ಕೂ ಶ್ಲಾಘನೀಯ-ಕು.ಮಂಜುಳಾ ಮುನವಳ್ಳಿ

0
49

ಯಲಬುರ್ಗಾ,,12- ಉತ್ತರ ಕರ್ನಾಟಕ ಭಾಗದ ಯಲಬುರ್ಗಾದ ಸಂಸ್ಥಾನ ಹಿರೇಮಠ ಶಿಕ್ಷಣ,ಅನ್ನದಾಸೋಹ,ಸಾಹಿತ್ಯದ ಜೋತೆ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದಾ ದಾಪುಗಾಲು ಹಾಕುತ್ತಿರುವದು ನಿಜಕ್ಕೂ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ವಿದ್ಯಾಪೀಠ ಶ್ರೀ ಹಿರೇಮಠದ 25ನೇ ವರ್ಷದ ರಜತ ಮಹೋತ್ಸವವನ್ನು ಇವತ್ತು ಆಚರಿಸಿಕೊಳ್ಳುತ್ತಿರುವದನ್ನು ನೋಡಿದರೆ ಈ ವಿದ್ಯಾಸಂಸ್ಥೆಯ ಕಾರ್ಯಸಾಧನೆ ನಿಜಕ್ಕೂ ಶ್ಲಾಘನೀಯ.ಈ ಸೇವೆ ಇನ್ನು ರಾಜ್ಯಮಟ್ಟದಲ್ಲಿ ವಿಸ್ತಿರಿಸುವಂತಾ ಕೆಲಸ ಶ್ರೀಮಠದ ಸ್ವಾಮೀಜಿಗಳು ಮಾಡಲಿ ಎಂದು ಮಕ್ಕಳ ಹಕ್ಕುಗಳ ಕುರಿತು ಜಿನೆವಾದಲ್ಲಿ ವಿಷಯ ಮಂಡಿಸಿದ ವಿದ್ಯಾರ್ಥಿ ಕುಮಾರಿ ಮಂಜುಳಾ ಮಹಾಂತೇಶ ಮುನವಳ್ಳಿ ಹೇಳಿದರು.ಪಟ್ಟಣದ ಇಲ್ಲಿಯ ಬಯಲು ರಂಗಮಂದಿರದಲ್ಲಿ ಶನಿವಾರ ನಡೆದ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ವಿದ್ಯಾಪೀಠ ಶ್ರೀ ಹಿರೇಮಠದ 25ನೇ ವರ್ಷದ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,.ಪ್ರತಿಯೊಬ್ಬ ಮಕ್ಕಳು ಶಿಕ್ಷಣ ಪಡೆಯಬೇಕು.ಅಂದಾಗ ಮಾತ್ರ ನಾವು ಮುಂದೆ ಬರಲು ಸಾಧ್ಯ.ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶೈಕ್ಷಣಿಕವಾಗಿ ಮುಂದೆ ಬರುವಂತೆ ಸಲಹೆ ನೀಡಿದರ ಅವರು,ಕಳೇದ ವರ್ಷದ ಅವಧಿಯಲ್ಲಿ ಜಿನೆವಾದಲ್ಲಿ ನಡೆದ  ಮಕ್ಕಳ ಹಕ್ಕುಗಳ ಕುರಿತು ಭಾರತ ಪರವಾಗಿ ನಾನು ಕರ್ನಾಟಕದಿಂದ ಆಯ್ಕೆಗೊಂಡು ಅಲ್ಲಿ ಮಕ್ಕಳ ಹಕ್ಕುಗಳ ಕುರಿತು ವಿಷಯ ಮಂಡಿಸಿದ್ದು,ನಿಜಕ್ಕೂ ನನಗೆ ಮರೆಯಲಾಗದ ಸಂಗತಿ.ಅಲ್ಲಿ ವಿವಿಧ ದೇಶದ ಮಕ್ಕಳೊಂದಿಗೆ ನಾನು ಕೂಡಾ ನಾನು ಭಾಗಿಯಾಗಲು ಕಾರಣ ಶಿಕ್ಷಣ.ಅದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಮುಂದೆ ಬರುವಂತೆ ಸಲಹೆ ನೀಡಿದರು.

ಕೊಪ್ಪಳ ಲೋಕಸಭಾ ಸದಸ್ಯ ಶಿವರಾಮೇಗೌಡ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ತನ್ನ ರಜತ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿವ ಇಲ್ಲಿಯ ಸಂಸ್ಥಾನ ಹಿರೇಮಠದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.ಇದಕ್ಕೂ ಮೊದಲು ಸಿದ್ದರಾಮೇಶ್ವರ ವಿದ್ಯಾಪೀಠ ಶ್ರೀ ಹಿರೇಮಠದ ಹಳೇಯ ವಿದ್ಯಾರ್ಥಿ/ನಿಯರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸಮಾರಂಭದ ಸಾನಿಧ್ಯವನ್ನು ಎಮ್ಮಿಗನೂರು ಹಂಇಸಾವಿರ ದೇವರಮಠದ ಷ.ಬ್ರ.ವಾಮದೇವ ಶಿವಾಚಾರ್ಯ ಸ್ವಾಮಿಗಳು,ಸಂಸ್ಥಾನ ಹಿರೇಮಠದ ಷ.ಬ್ರ.ಸಿದ್ದರಾಮೇಶ್ಬರ ಸ್ವಾಮೀಜಿ, ಬಳಿಗೇರಿಯ ಸಿದ್ದಲಿಂಗಸ್ವಾಮಿಗಳು, ಸಿದ್ದರಾಮ ಸ್ವಾಮಿಗಳು ಹಿರೇಮಠ(ಸಿಹಿ) ವಹಿಸಿದ್ದರು.

ವಿದ್ಯಾಪೀಠದ ಮುಖ್ಯೌಪಾಧ್ಯಯ ಎಸ್.ಡಿ.ಅಪ್ಪಾಜಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಹಿರೇಮ್ಯಾಗೇರಿ ಕಾಲೇಜಿನ ಉಪನ್ಯಾಸಕ ಗಂಗಾಧರ ಕುರಟ್ಟಿ ನಿರೂಪಿಸಿ,ವಂದಿಸಿದರು.

 

loading...

LEAVE A REPLY

Please enter your comment!
Please enter your name here