ಕೇಂದ್ರದ ಯುಪಿಎ ಸರಕಾರ ಎಲ್ಲಾ ರಂಗದಲ್ಲಿ ವಿಫಲ -ಕರಡಿ

0
19

ಯಲಬುರ್ಗಾ,,13- ಕೇಂದ್ರದ ಯುಪಿಎ ಸರಕಾರ ಎಲ್ಲಾ ರಂಗದಲ್ಲಿ ಭ್ರಷ್ಠಾಚಾರದಲ್ಲಿ,ಬೆಲೆ ಏರಿಕೆಯಲ್ಲಿ ತೊಡಗಿದ್ದರಿಂದ ಹೊಸ ಬದಲಾವಣೆಯನ್ನು ಬಯಸಿರುವ ಈ ದೇಶದ ಮತದಾರರು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸುವದರಿಂದ ಮುಂದಿನ ಭಾರಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವದರಲ್ಲಿ ಯಾವುದೇ ಸಂದೇಹವಿಲ್ಲ,ನರೇಂದ್ರ ಮೋದಿ ಅವರ ಕೈಬಲ ಪಡಿಸುವಲ್ಲಿ ಮುಂದಾಗಿ.ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಲು ಬಿಜೆಪಿ ಪ್ರಚಾರ ಹಳ್ಳಿಗಳ ಪ್ರತಿ ಭೂತವರಿಗೆ ತಲುಪಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕರಡಿ ಸಂಗಣ್ಣ ಸಲಹೆ ನೀಡಿದರು.ತಾಲೂಕಾ ಬಿಜೆಪಿ ಪಕ್ಷದ ವತಿಯಿಂದ ಪಟ್ಟಣದ ಶಾದಿ ಮಹಲಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯಲಬುರ್ಗಾ ಭೂತ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು,ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ನಮ್ಮ ಬಿಜೆಪಿ ಪಕ್ಷ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಯಾವುದೇ ಸಂದೇಹವಿಲ್ಲ..ಪಕ್ಷದ ಕಾರ್ಯಕರ್ತರು ಎಂದಿಗೂ ಎದೆಗುಂದಬೇಡಿ,ಪಕ್ಷದ ಸದೃಡವಾಗಿ ಬೆಳೆಯುವಲ್ಲಿ ಕಾರ್ಯಕರ್ತರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸನ್ನದ್ದರಾಗಿ.ಒಟ್ಟಿನಲ್ಲಿ .,ನಮ್ಮ ಬಿಜೆಪಿ ಪಕ್ಷ ಹೀಗಾಗಲೇ ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿದ್ದರಿಂದ ಕಾಂಗ್ರೇಸ್ ಪಕ್ಷದಲ್ಲಿ ಎದೆ ಬಡಿತ ಸುರುವಾಗಿದೆ.ಯಾಕೆಂದರೆ ಈಚೇಗೆ ನಡೆದ ಪಂಚರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಕಂಡಿರುವ ಬಿಜೆಪಿ ಪಕ್ಷದ ಭರ್ಜರಿ ಗೆಲುವಿನಿಂದ  ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು

ವಿಧಾನ ಪರಿಷತ್ ಸದಸ್ಯರು,ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ಆಚಾರ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲಾ ರಂಗದಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮುಂದಾಳತ್ವದ ಬಿಜೆಪಿ ಪಕ್ಷದ ಸರಕಾರ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂದೇಹವಿಲ್ಲ.ಈ ನಿಟ್ಟಿನಲ್ಲಿ  ಕೇಂದ್ರದ ಮತ್ತು ರಾಜ್ಯ ಸರಕಾರದ ವಿಫಲತೆಗಳನ್ನು ಜನರಿಗೆ ತಲುಪಿಸಿ ಬಿಜೆಪಿಯತ್ತ ವಾಲುವಂತಾ ಕೆಲಸದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ನಿರತರಾಗಬೇಕು.ಪ್ರತಿಯೊಬ್ಬ ಕಾರ್ಯಕರ್ತರು ಭೂತ ಮಟ್ಟದಿಂದ ಹಿಡಿದುಕೊಂಡು ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ಹೋರಾಟ ಮಾಡಬೇಕು.ಹಿಮದಿನ ಬಿಜೆಪಿ ಸರಕಾರದಲ್ಲಿ ಅನುಷ್ಠನಾಗೊಂಡ ಜನಪರ ಯೋಜನೆಗಳನ್ನು  ಜನರಿಗೆ ತಲುಪಿಸಿ,ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕೈಬಲಪಡಿಸುವ ಮೂಲಕ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರತಿಯೊಬ್ಬರು ಶ್ರಮಿಸುವಂತೆ ಹಾಲಪ್ಪ ಆಚಾರ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಬಿಜೆಪಿ ಪಕ್ಷದ ತಾಲೂಕಾ ಅಧ್ಯಕ್ಷ ಶಂಕ್ರಪ್ಪ ಪೊಳ್ಳಟ್ಟಿ,ಕಾರ್ಯದರ್ಶಿ ಪ್ರಭುರಾಜ ಕಲಬುರ್ಗಿ,ತಾಲೂಕಾ ವಕ್ತಾರ ವೀರಣ್ಣ ಹುಬ್ಬಳ್ಳಿ,ಎಪಿಎಮ್ ಸಿ ಅಧ್ಯಕ್ಷ ದತ್ತುನಗೌಡ ಪಾಟೀಲ್,ಪಪಂ ಸದಸ್ಯ ಸಿದ್ರಾಮೇಶ ಬೇಲೇರಿ,ಮುಖಂಡರಾದ ಸಿದ್ದಪ್ಪ ಕಟ್ಟಿಮನಿ,ರವಿ ಜಕ್ಕಾ,ಶರಣಪ್ಪ ಹಡಪದ,ನಟರಾಜ ಬಿದರಿ,ಶಿವಣ್ಣ ಮೂಲಿಮನಿ,ಅಮರೇಶ ಹುಬ್ಬಳ್ಳಿ,ಸೇರಿದಂತೆ ಪಕ್ಷದ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here