ಪಪಂ ನಿರ್ಲಕ್ಷ: ಪೋಲಾಗುತ್ತಿರುವ ಸಿಹಿ ನೀರು

0
16

ಯಲಬುರ್ಗಾ,,21- ಸ್ಥಳಿಯ ಪಟ್ಟಣ ಪಂಚಾಯತಿಯವರ ದಿವ್ಯ ನಿರ್ಲಕ್ಷತನದಿಂದ ಕುಡಿಯುವ ನೀರು ದಿನಾನಿತ್ಯಾ ಪೋಲಾಗುತ್ತಿದ್ದರು ಕೂಡಾ ಸಂಬಂದಿಸಿದವರ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಯಲಬುರ್ಗಾ ಪಟ್ಟಣದಲ್ಲಿ ಬಹುತೇಕ ವಾರ್ಡಿನಲ್ಲಿ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ.ಇದರಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ದಿನಾನಿತ್ಯ ಪರದಾಡುತ್ತಿದ್ದಾರೆ.ಆದರೆ ಸ್ಥಳಿಯ ಪಪಂದವರ ನಿರ್ಲಕ್ಷತನಕ್ಕೆ ಇಲ್ಲಿಯ ಕೊಪ್ಪಳ ರೋಡಿಗೆ ಹೊಂದಿಕೊಂಡಿರುವ ರಾಘವೇಂದ್ರ ಕಾಲೋನಿ(ಶಕ್ತಿ ಚಿತ್ರ ಮಂದಿರ ಹತ್ತಿರ) ಚರಂಡಿಯಲ್ಲಿ ದಿನಾನಿತ್ಯ ಸಿಹಿ ನೀರು ಪೋಲಾಗುತ್ತಿದೆ.ಈ ನಲ್ಲಿಗೆ ಸರಿಯಾದ ರೀತಿಯಲ್ಲಿ ಜೋಡಣೆ ಇಲ್ಲಾದಿದ್ದರಿಂದ ನೀರು ಚರಂಡಿ ಮೂಲಕ ಹರಿದು ಹೋಗುತ್ತಿದೆ.ಈ ಚರಂಡಿ ಗಬ್ಬು ನಾರುತ್ತಿದೆ.ಆದರೆ ಸಾರ್ವಜನಿಕರು ಮಾತ್ರ ಈ ಸಿಹಿ ನೀರನ್ನು ಹಿಡಿಯುತ್ತಾರೆ.ಆದರೆ ಸ್ಥಳಿಯ ಪಪಂದವರ ನಿರ್ಲಕ್ಷತನದಿಂದಾಗಿ ಈ ನಲ್ಲಿಗೆ ಪೈಪು ಜೋಡಣೆ ಕೂಡಾ ಮಾಡಿಲ್ಲದ್ದರಿಂದ ನೀರು ಚರಂಡಿಗೆ ಸಾಕಷ್ಟು ಪೋಲಾಗುತ್ತಿದ್ದರು ಕೂಡಾ ಪಪಂದವರು ದುರಸ್ಥಿ ಕಾರ್ಯ ಮಾಡಿಲ್ಲ ಎಂದು ಈ ಕಾಲೋನಿಯ ಸಾರ್ವಜನಿಕರು ದೂರುತ್ತಾರೆ.

loading...

LEAVE A REPLY

Please enter your comment!
Please enter your name here