ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಜನರಲ್ಲಿ ಜಾಗೃತಿಯುಂಟು ಮಾಡಿದವರು -ಕಂಬಳಿ

0
82

ಯಲಬುರ್ಗಾ,,21- ಹನ್ನೆರಡನೇಯ ಶತಮಾನದಲ್ಲಿ ಅಂಬಿಗರ ಚೌಡಯ್ಯನವರು ಶ್ರೇಷ್ಟ ವಚನಕಾರರಾಗಿ ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜವನ್ನು ಬದಲಾವಣೆ ತಂದವರಲ್ಲಿ ಪ್ರಮುಖರಾಗಿದ್ದವರು.ಅಂಥವರ ಆದರ್ಶ ತತ್ವಗಳನ್ನು ನಾವೇಲ್ಲರೂ ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ ಉತ್ತಮ ನಾಡನ್ನು ಕಟ್ಟುವಂತಾ ಕೆಲಸ ಮಾಡೋಣ ಎಂದು ತಾಪಂ ಉಪಾಧ್ಯಕ್ಷೆ ಮಹಾದೇವಿ ಕಂಬಳಿ ಹೇಳಿದರು.

ತಾಲೂಕಾ ಆಡಳಿತ,ತಾಲೂಕಾ ಪಂಚಾಯತಿ ವತಿಯಿಂದ ಮಂಗಳವಾರ ಹಳೆ ಪಪಂ ಅವರಣದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷೆ ನಿರ್ಮಾಲ ಕಪಾಲಿ ಇವರೊಂದಿಗೆ ಜಂಟಿಯಾಗಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,12ನೇ ಶತಮಾನದಲ್ಲಿ ಬಸವಣ್ಣನವರ ಕಲ್ಯಾಣದಲ್ಲಿ ಅಂಬಿಗರ ಚೌಡಯ್ಯನವರು ಕಾಲಘಟದಲ್ಲಿನ ಲಿಂಗ ಭೇದ,ಜಾತಿ ಮತ್ತು ವರ್ಗ ತಾರತಮ್ಯ,ಶೋಷಣೆ ಮತ್ತು ಅಜ್ಞಾನದ ವಿರುದ್ದ ಸಿಡಿಲಿನಂಥ ವಚನಗಳ ಮೂಲಕ ಜನರಲ್ಲಿ ಜಾಗೃತಿಯುಂಟು ಮಾಡಿದ ಶರಣರಾಗಿದ್ದರು.

ಬಿಎಸ್ಆರ್ ಕಾಂಗ್ರೇಸ್ ಪಕ್ಷದ ಯುವ ಮುಖಂಡ ನವೀನಕುಮಾರ  ಗುಳಗಣ್ಣನವರ್ ಮಾತನಾಡಿ,12ನೇ ಶತಮಾನದ ಅಂಬಿಗೇರ ಚೌಡಯ್ಯನವರು ಸಮಾಜದಲ್ಲಿ ಜಾತಿಬೇದ,ವಂಚನೆ,ಮೋಸ,ಶೋಷಣೆ,ಅಜ್ಞಾನ,ಡಾಂಭಿಕತೆ,ವಿರುದ್ದ ತಮ್ಮ ವಚನಗಳ ಮೂಲಕ ಇಡೀ ಸಮಾಜವನ್ನು ಸುಧಾರಿಸುವಲ್ಲಿ ಹೋರಾಡಿದ ನಿಜಶರಣರಾಗಿದ್ದರು.ಇಂಥವರ ಜಯಂತಿಯನ್ನು ರಾಜ್ಯ ಸರಕಾರದ ಕಾರ್ಯಕ್ರಮವನ್ನಾಗಿ ಮಾಡಿದ್ದು ಸಂತೋಸದಾಯಕ ಸಂಗತಿ.ಆದರೆ ಇಂಥ ಶರಣರ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಜನಪ್ರತಿನಿಧಿಗಳಾದವರು ಗೈರಾಗಿದ್ದು ವಿಷಾದನೀಯ. ಅಂಬಿಗೇರ ಚೌಡಯ್ಯನವರ ಆಚಾರ ವಿಚಾರಗಳನ್ನು,ಅವರ ಆದರ್ಶ ಗುಣಗಳನ್ನು ನಾವೇಲ್ಲರೂ ಜೀವನದಲ್ಲಿ ಆಳವಡಿಕೊಂಡು ನಾಡನ್ನು ಕಟುವಂತಾ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಮಂಡಲಗೇರಿಯ ಸರಕಾರಿ ಪ್ರೌಢ ಶಾಲೆಯ ಮುಖ್ಯೌಪಾಧ್ಯಯ ಶಾಂತಾ ಮೀಸೆ ಅವರು, ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಿದರು.

ಪಟ್ಟಣ ಪಂಚಾಯತಿ ಅಧ್ಯಕ್ಷ ಭಾಗಿರಥಿ ಜೋಗಿನ ಸಮಾರಂಭದ ಅಧ್ಯಕ್ಷತೆ ಮಾತನಾಡಿ,ಹಿಂಡನಗಲಿದ ಗಜ ನಿಜಶರಣ ಅಂಬಿಗರ ಚೌಡಯ್ಯನವರು ನಾಡಿಗೆ ನೀಡಿದ ವಚನ ಸಾಹಿತ್ಯ ಅಮೋಘವಾಗಿದ್ದು,ಇಂಥವರ ಜಯಂತಿಯನ್ನು ರಾಜ್ಯ ಸರಕಾರ ಸರಕಾರದ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡಿದ್ದು,ಹೆಮ್ಮೆ ತರುವಂತಾ ಸಂಗತಿ.ಅಂಬಿಗರ ಚೌಡಯ್ಯನವರ ಚಿಂತನೆಗಳನ್ನು,ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಇದಕ್ಕೂ ಮೊದಲು ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆಯನ್ನು ವಿವಿಧ ವಾಧ್ಯ ಮೇಳದೊಂದಿಗೆ ಕುಂಭ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚಾರಿಸಿತು.ಸಮಾರಂಭದಲ್ಲಿ ತಹಶೀಲ್ದಾರ ಎಂ.ಬಿ.ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು.ತಾಪಂ ಇಓ ಎಂ.ಜಯಪ್ಪ,ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ,ಷಣ್ಮುಖಪ್ಪ ರಾಂಪೂರು, ಕೃಷ್ಣಮೂರ್ತಿ ಜಾಲಗಾರ, ವಿಜಯಲಕ್ಷ್ಮಿ ಜಾಲಗಾರ,ತಾಲೂಕಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಸಿದ್ದಲಿಂಗಪ್ಪ ಮನ್ನಾಪೂರು,ರಾಮು ಕೌದಿ,ಬಸವರಾಜ ಕೊನ್ನಾರಿ,ಈರಣ್ಣ ಬಾರಕೇರ,ಶಿವರಾಜ ಜಾಲಗಾರ,ಬುಡ್ಡಪ್ಪ ಬಾರಕೇರ,ಬಾಳಪ್ಪ ಬಾರಕೇರ,ಮಹಾಂತೇಶ ಕೌದಿ,ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.ದೈಹಿಕ ಶಿಕ್ಷಕ ಕೆ.ಎನ್,ಮುಳಗುಂದ ನಿರೂಪಿಸಿದರು ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here