ರಸ್ತೆ ನಿಯಮ ಪಾಲಿಸಲು ವಿದ್ಯಾರ್ಥಿಗಳಿಗೆ ಸಾರಿಗೆ ಅಧಿಕಾರಿ ಅಂಬರೀಷ ಸಲಹೆ

0
48

ಯಲಬುರ್ಗಾ,,24- ಪ್ರತಿಯೊಬ್ಬ ವಾಹನ ಸವಾರರು ಸಾರಿಗೆ ಇಲಾಖೆಯ ರಸ್ತೆ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ಸವಾರಿ ಮಾಡಿದಾಗ ಅಪಘಾತಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಕೊಪ್ಪಳದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಂಬರೀಷ ಚೆಲುವ ಹೇಳಿದರು.ಸರಕಾರಿ ಪದವಿ ಪೂರ್ವ ಕಾಲೇಜು,ಕೊಪ್ಪಳದ ಪ್ರಾದೇಶಿಕ ಸಾರಿಗೆ ಆಶ್ರಯದಲ್ಲಿ ಶುಕ್ರವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ  ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು,ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಪಾಲಿಸಬೇಕು.

ರಸ್ತೆ ತಡೆ,ಜೀಬ್ರಾ ಕ್ರಾಸ,ಟ್ರಾಫಿಕ್ ಸಿಗ್ನಲಗಳನ್ನು ಗಮನಿಸಿ ರಸ್ತೆಗಳನ್ನು ದಾಟಬೇಕು,ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ರಸ್ತೆ ನಿಯಮಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವದೇ ಕಾರ್ಯಕ್ರಮದ ಉದ್ದೇಶವಾಗಿದೆ.ವೇಗದ ಮಿತಿ ಸಂಚಾರಿ ನಿಯಮಗಳ ಪಾಲನೆ,ಪಾರ್ಕಿಂಗ್ ಸ್ಥಳಗಳಲ್ಲಿಯೇ ವಾಹನಗಳ ನಿಲುಗಡೆ, ಟಾಪ್ ಮೇಲೆ ಪ್ರಯಾಣ ಅಪಾಯದ ತೊಟ್ಟಿಲು, ಜನದಟ್ಟಣೆಯಿರುವದಲ್ಲಿ ನಿಧನವಾಗಿ  ವಾಹನ ಚಲಿಸಿ,ಶಾಲಾ ವಲಯ,ಅಸ್ಪತ್ರೆಗಳ ಸಮೀಪ ಅತಿವೇಗ,ಹಾರನ್ ಬಳಕೆ ನಿಷೇಧ,ಚಾಲನೆಯ ಸಂದರ್ಭದಲ್ಲಿ ಮಧ್ಯೆಪಾನ ಮಾಡಿ ವಾಹನ ಚಾಲನೆ ಮಾಡುವದು,ಮೊಬೈಲ್ ಬಳಕೆ ಮಾಡುವ ಮೂಲಕ ವಾಹನ ಚಾಲನೆ ಬೇಡವೇ ಬೇಡ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯ ಬಸವರಾಜ ಬಡಿಗೇರ ಮತನಾಡಿ,ಸಾರಿಗೆ ಇಲಾಖೆಯವರು ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಕಾರ್ಯಕ್ರಮಗಳು ನಿಜಕ್ಕೂ ವಿದ್ಯಾರ್ಥಿಗಳಲ್ಲಿ ರಸ್ತೆ ನಿಯಮಗಳ ಕುರಿತು ಜಾಗೃತಿ ಉಂಟು ಆಗಲಿದ್ದು.ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆದಾಗ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದರು.

ಸಮಾರಂಭದಲ್ಲಿ ಯುವ ಮುಖಂಡ ಶರಣಪ್ಪ ಕರಂಡಿ, ಮುಖ್ಯೌಪಾಧ್ಯಯ ಟಿ.ಸಿ.ಪಾಟೀಲ್, ಉಪನ್ಯಾಸಕ ಈರಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಉಪನ್ಯಾಸಕ ಜಮಾಲಸಾಬ ನಿರೂಪಿಸಿ,ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here