ಮತ್ತೆ ಚರ್ಚೆಯಲ್ಲಿ

0
48

ರಾಜ್ಯದ ರೈತರು ಅನೇಕ ವರ್ಷಗಳಿಂದ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಪಾರಾಗುವ ಮಾರ್ಗವೇ ತೋಚುತ್ತಿಲ್ಲ. ಹಿಂದೆಲ್ಲ ಇದೇ ಕಾಂಗ್ರೆಸ್ ಸರಕಾರ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಿತ್ತು ರೈತರಿಗೆ ವಿದ್ಯುತ ನೀಡುವ  ಅನುಕೂಲ ಮಾಡಿಕೊಟ್ಟ ಕಾರಣಕ್ಕಾಗಿ ಇಂಡಿ ಶಾಸಕ ಕಲ್ಲೂರ ಅವರು ಆಗಿನ ಮುಖ್ಯಮಮಂತ್ರಿ ದಿ. ಗುಂಡು ರಾವ್ ಅವರಿಗೆ ಬೆಳ್ಳಿ ಪಂಪ್ಸೆಟ್ ನೀಡಿ ಕೃತಜ್ಞನತೆ ಮೆರೆದಿದ್ದರು. ಆದರೆ ವಿದ್ಯುತ ಉತ್ಪಾದನೆಯಲ್ಲಿ ಇಳಿಕೆ ಕಂಡು ಬಂದಿದ್ದರಿಂದ ರೈತ ವರ್ಗಕ್ಕೆ ಅವರಿಗೆ ಅವಶ್ಯವಿರುವಷ್ಟು ವಿದ್ಯುತನ್ನು ಕೊಡುವದು  ಆಗುತ್ತಲೇ ಇಲ್ಲ.  ಸರಕಾರ ಕಡೆ ಮುಖ ಮಾಡಿದ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ನೀರಾವರಿಗಾಗಿ  ವಿದ್ಯುತ್ ಬಳಸುವದು ಅನಿವಾರ್ಯವಾಗಿದೆ ಎಂಬ ಅಂಶವನ್ನು ಮನದಟ್ಟನೆ ಮಾಡಿಕೊಟ್ಟರೂ ಏನು ಪ್ರಯೋಜನವಾಗುತ್ತಿಲ್ಲ. ಸದ್ಯಕ್ಕೆ ಗ್ರಾಮಗಳಿಗೆ ರಾತ್ರಿ ಮಾತ್ರ ಆರು ತಾಸು ಅಥವಾ ಎಂಟು ತಾಸು ವಿದ್ಯುತನ್ನು ಪೂರೈಸಲಾಗುತ್ತಿದೆ ದೊರಕುವ ವಿದ್ಯುತಿಗೆ ವೊಲ್ಟೇಜ್ ಕಡಿಮೆ ಇರುತ್ತದೆ. ಈಗ ಸಿದ್ದು ಸರಕಾರ ಮತ್ತೆ  ವಿದ್ಯುತ ಕುರಿತಾದ ಯೋಚನಾ ಲಹರಿಯನ್ನು ಹರಿ ಬಿಟ್ಟಿದೆ.  ಹತ್ತು ಅಶ್ವ ಶಕ್ತಿಯ ಪಂಪ್ಸೆಟ್ಗಳನ್ನು ತಮಗೆ  ಸಬ್ಸಿಡಿ ದರದಲ್ಲಿ  ವಿದ್ಯುತ್ ಬೇಡ ಎಂದು ಹೇಳಿದರೆ 24 ಗಂಟೆಗಳ ಕಾಲ ಪ್ರತಿನಿತ್ಯ ರೈತರಿಗೆ ತ್ರೀಪೆಸ್ ವಿದ್ಯುತ್ ಪೂರೈಸಲಾಗುವದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಆದರೆ ರೈತ ವರ್ಗ ಪ್ರಸ್ತುತ ಪರಿಸ್ಥಿತಿ ಯಲ್ಲಿ  ರೈತವರ್ಗ ತ್ರೀಪೀಸ್ 24 ಗಂಟೆ ಪಡೆದು ಅದಕ್ಕೆ ತಗಲುವಷ್ಟು ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ಹೊಂದಿದ್ದೇಯೋ ಇಲ್ಲವೋ ಎಂಬುವದರ ಬಗ್ಗೆ ಆಲೋಚನೆ ಮಾಡುವದು ಸೂಕ್ತ. ಕಡಿಮೆ ಅಶ್ವಶಕ್ತಿಯ ಪಂಪ್ ಸೆಟ್ಗಳನ್ನು ಬಳಸುವ ರೈತರು ಈ ಹೊಸ ವ್ಯವಸ್ಥೆಯಿಂದ ಆರ್ಥಿಕ ತೊಂದರೆಯಲ್ಲಿ ಸಿಲುಕಿ ಮತ್ತಷ್ಟು  ಕಂಗ್ಗಾಲಾಗಬಹುದು.  ರೈತರ ರಕ್ಷಣೆ ಅಂತ ಪರಿಸ್ಥಿತಿಯಲ್ಲಿ ಯಾರು ಬರುವದಿಲ್ಲ. ಮೊದಲೇ  ಬರಗಾಲ,  ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆಯೂ ಇರುವದಿಲ್ಲ  ಕಬ್ಬು ಬೆಳೆಯುವವರಿಗಿಂತಲೂ ಕನಿಷ್ಠ ಸ್ಥಿತಿಯಲ್ಲಿ ಜೋಳ, ರಾಗಿ ಬೆಳೆಯುವವರು ಇದ್ದಾರೆ ಅವರಿಗೆಲ್ಲ ಈ ಹೊಸ ವ್ಯವಸ್ಥೆಯಿಂದ ಪರಿಹಾರ ದೊರೆಯಬಹುದೇ ಈ ಕುರಿತು ಸರಕಾರ ಮೊದಲು ಆಲೋಚನೆ ಮಾಡುವದು ಅತಿ ಅವಶ್ಯಕವಾಗಿದೆ. ಇಲ್ಲದೆ ಹೋದರೆ ಸರಕಾರ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮುಗ್ಗರಿಸಬಹುದು. ರೈತರು ಮತ್ತೆ  ಸರಕಾರದ ಯೋಜನೆಯನ್ನು ನಿರಾಕರಿಸಿ ಉಚಿತ ವಿದ್ಯುತ ಪೂರೈಕೆ ಕೋರಬಹುದು. ವಿದ್ಯುತ್ ಉತ್ಪಾದಣೆಯಲ್ಲಿ ನಯೆ ಪೈಸೆಯಷ್ಟು ಏರಿಕೆಯಾಗದೇ ಇರುವಾಗ ರೈತರ ಬೇಡಿಕೆಯನ್ನು ಈಡೇರಿಸುವದು ಸಾಧ್ಯವಾಗದ ಮಾತು ಆದ್ದರಿಂದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡಲಿ.

loading...

LEAVE A REPLY

Please enter your comment!
Please enter your name here