ಮೊದಲ ಐ.ವಿ.ಎಫ್. ಶಿಶು

0
208

ಅದು 1988. ಆಗ ಐವಿಎಫ್ ತಂತ್ರಜ್ಞಾನ ಲಭ್ಯವಿದ್ದುದು ಕೇವಲ ಮುಂದುವರಿದ ದೇಶಗಳಲ್ಲಿ ಮಾತ್ರ. ಆದರೆ ದೂರದರ್ಶಿತ್ವ ಹೊಂದಿದ್ದ ಡಾ. ಸುಲೋಚನಾ ಗುಣಶೀಲ ಅವರು ಬೆಂಗಳೂರಿನಲ್ಲಿ ಇಂತಹ ಒಂದು ಸಾಧನೆಗೆ ಕೈ ಹಾಕಿದರು. ಪರಿಣಾಮವಾಗಿ ದಕ್ಷಿಣ ಭಾರತದ ಮೊದಲ ಐ.ವಿ.ಎಫ್ ಶಿಶುವಿನ ಜನನಕ್ಕೆ ಡಾ. ಸುಲೋಚನಾ ಕಾರಣಕರ್ತರಾದರು. 1988ರಲ್ಲಿ ಬೆಂಗಳೂರಿನಲ್ಲಿ ಡಾ. ಸುಲೋಚನಾ ಅವರಿಂದ ಚಿಕಿತ್ಸೆ ಪಡೆದ ಪರಿಣಾಮವಾಗಿ ಭೂಮಿಗೆ ಬಂದ ಹೆಣ್ಣು ಶಿಶು, ಈಗ 25 ವರ್ಷದ ಯುವತಿ. ಸುಖದಾಯಕ ಜೀವನ ಸಾಗಿಸುತ್ತಿದ್ದಾರೆ. ಗುಣಶೀಲ ಐ.ವಿ.ಎಫ್ ಕೇಂದ್ರ ಇದುವರೆಗೆ ಮಕ್ಕಳಿಲ್ಲದ ಸುಮಾರು 25 ಸಾವಿರ ದಂಪತಿಗಳಿಗೆ ಐವಿಎಫ್ ಚಿಕಿತ್ಸೆ ನೀಡಿದೆ. ಬಂಜೆತನ ಇರುವ ದಂಪತಿಗಾಗಿ ಐವಿಎಫ್ ಚಿಕಿತ್ಸೆ ನೀಡುವ ಮೂಲಕ 6000 ಸಾವಿರಕ್ಕೂ ಹೆಚ್ಚು ಶಿಶುಗಳ ಜನನಕ್ಕೆ ಕಾರಣವಾಗಿದೆ. ಈ ಮೂಲಕ ದಂಪತಿಗಳಿಗೆ ಮಕ್ಕಳಿಲ್ಲದ ಕೊರಗನ್ನು ನಿವಾರಿಸಿದೆ. ಐವಿಎಫ್ ಚಿಕಿತ್ಸೆಯನ್ನು ಪಡೆದುಕೊಂಡವರ ಪೈಕಿ ಶೇಕಡಾ 52 ರಷ್ಟು ಸ್ತ್ತ್ರೀ0ುರು ಗರ್ಭಿಣಿಯರಾಗಿದ್ದಾರೆಷಿ ಎಂದು ಅವರು ವಿವರಿಸಿದರು.

ದಿವಂಗತ ಡಾ. ಸುಲೋಚನಾ ಅವರ ಕೊಡುಗೆ0ು ನೆನಪಿಸಿಕೊಂಡ ಸಂಸ್ಥೆ:

ಶಿಗುಣಶೀಲ ಐ.ವಿ.ಎಫ್ ಸೆಂಟರ್ ಅನೇಕ ಪ್ರಥಮಗಳ ಸ್ಥಾಪನೆಯಲ್ಲಿ ಮತ್ತು ವಿಶ್ವ ಮಟ್ಟದ ವೈದ್ಯಕೀಯ ಕ್ಷೇತ್ರಗಳಲ್ಲಿ ಆಗುವ ತಾಂತ್ರಿಕತೆಯ ಬದಲಾವಣೆಗಳನ್ನು ಅಳವಡಿಸಿಕೊಂಡು ಯಶಸ್ವಿ ಚಿಕಿತ್ಸೆ ನೀಡುವಲ್ಲಿ ಸದಾ ಮುಂಚೂಣಿಯಲ್ಲಿದೆ. ಹೊಸ ಹೊಸ ಸಂಶೋಧನೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಹೊಸ ತಂತ್ರಜ್ಞಾನದ ಫಲವನ್ನು ನಮ್ಮ ಮಹಿಳೆಯರ ಬಳಿಗೆ ಒಯ್ದು ಚಿಕಿತ್ಸೆ ನೀಡಿದರೆ ಬಂಜೆತನ ನಿವಾರಣೆಯಲ್ಲಿ ಮಹತ್ವದ ಸಾಧನೆ ಮಾಡಬಹುದು ಎಂಬುದು ನಮ್ಮ ಸಂಸ್ಥಾಪಕರಾದ ಡಾ. ಸುಲೋಚನಾ ಅವರ ಖಚಿತ ನಂಬಿಕೆಯಾಗಿತ್ತು. ಅದನ್ನು ಮುಂದುವರೆಸುತ್ತಿರುವ ನಾವು ಇಂದು ಏನೆಲ್ಲ ಸಾಧಿಸಿದ್ದೇವೆಯೋ ಅದರ ಎಲ್ಲ ಶ್ರೇಯ ಡಾ.ಸುಲೋಚನಾ ಅವರಿಗೆ ಸಲ್ಲುತ್ತದೆಷಿ, ಎಂದು ಅವರು ತಿಳಿಸಿದರು.

ಶಿದಕ್ಷಿಣ ಭಾರತದ ಮೊದಲ ಐವಿಎಫ್ ಶಿಶುವಿನ ಜನನ ಜಿಐಸಿಯಲ್ಲಿ 1988ರಷ್ಟು ಹಿಂದೆಯೇ ಆಯಿತು ಎಂಬುದು ಗಮನಾರ್ಹ. ಅಂದಿನಿಂದ ಇಂದಿನವರೆಗೂ ಗುಣಶೀಲ ಐ.ವಿ.ಎಫ್ ಕೇಂದ್ರವು ತಂತ್ರಜ್ಞಾನದ ಪ್ರಯೋಜನವನ್ನು ಪಡೆದುಕೊಳ್ಳುತ್ತ ತನ್ನ ಸೇವೆಯಲ್ಲಿ ವಿಶಿಷ್ಟವಾಗಿದ್ದನ್ನು ನೀಡುತ್ತ ಬಂದಿದೆ. ಬಂಜೆತನ ಸಮಸ್ಯೆಗಳಿಗೆ ಉತ್ತರವನ್ನು ಹುಡುಕುತ್ತಿದೆ. ವಿಶ್ವದೆಲ್ಲೆಡೆಯ ಬಂಜೆತನ ನಿವಾರಣಾ ತಜ್ಞರೊಂದಿಗೆ ಸಂಪರ್ಕ ಸಾಧಿಸಿರುವ ಜಿಐಸಿ ಅತೀ ಆಧುನಿಕ ಮತ್ತು ಪ್ರಚಲಿತ ಚಿಕಿತ್ಸೆಯನ್ನು ತನ್ನ ಕೇಂದ್ರದಲ್ಲಿ ನೀಡುವುದಕ್ಕೆ ಬದ್ಧವಾಗಿದೆ. 25 ವರ್ಷಗಳ ಪರಂಪರೆಯೇ ಬೆನ್ನಿಗಿದ್ದರೂ ಜಿಐಸಿ ಮಟ್ಟಿಗೆ ಐವಿಎಫ್ ಸದಾ ಕಾರ್ಯನಿರತ ಪ್ರಕ್ರಿಯೆ. ಇದಕ್ಕೆ ಕೊನೆ ಇಲ್ಲ. ಆದ್ದರಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಶೋಧನೆಗಳ ಫಲವನ್ನು ಮಕ್ಕಳಿಲ್ಲದ ದಂಪತಿ ಪಾಲಿಗೆ ದೊರೆಯುವಂತೆ ಮಾಡಲಿದೆ ಜಿಐಸಿಷಿ. ಮಕ್ಕಳಿಲ್ಲದ ದಂಪತಿಗಳು ಚಿಕಿತ್ಸೆಗಾಗಿ ಸಂಪರ್ಕಿಸುವ ವಿಳಾಸ: ಗುಣಶೀಲ ಐ.ವಿ.ಎಫ್ ಕೇಂದ್ರ, ಬಸವನಗುಡಿ, ಬೆಂಗಳೂರು. ದೂರವಾಣಿ: 080-41312600 / 26673585.

 

ಗುಣಶೀಲ ಐವಿಎಫ್ ಸೆಂಟರ್ (ಜಿಐಸಿ) ಕುರಿತು:

ಗುಣಶೀಲ ಐವಿಎಫ್ ಸೆಂಟರ್ 1985ರಲ್ಲಿ ಸ್ಥಾಪಿತವಾಯಿತು. ಅದು ಭಾರತದ ಮೊದಲ ಐವಿಎಫ್ ಕೇಂದ್ರವಾಗಿತ್ತು. ಆಗಷ್ಟೇ ಜಾಗತಿಕ ಮಟ್ಟದಲ್ಲಿ ಪ್ರಣಾಳ ಶಿಶುಗಳ ಪ್ರಮಾಣ ಸುಮಾರು ಒಂದು ಸಾವಿರಕ್ಕಿಂತ ಕಡಿಮೆ ಇತ್ತು. ಜಿಐಸಿಯಲ್ಲಿ ನಾವು ಮಕ್ಕಳಿಲ್ಲದ ದಂಪತಿಯ ಬಾಳಿಗೆ ನಗು ತರುತ್ತೇವೆ. ಸಂಪೂರ್ಣ ನಂಬಿಕೆ, ಗೋಪ್ಯ ಕಾಪಾಡುವಿಕೆ ಮತ್ತು ವಿಶ್ವಾಸಾರ್ಹತೆಯ ಮೂಲಕ ಜಿಐಸಿಯ ತಜ್ಞರ ತಂಡ ಬಂಜೆತನ ನಿವಾರಣೆಗಾಗಿ ಅತ್ಯುನ್ನತ ಮಟ್ಟದ ಚಿಕಿತ್ಸೆಯನ್ನು ನೀಡುತ್ತಾರೆ. ಹೊಸತನ ಮತ್ತು ಸಂಶೋಧನೆಗೆ ಸದಾ ಒತ್ತು ನೀಡುವ ಜಿಐಸಿ ವೂಸೈಟ್ ಬ್ಯಾಂಕಿಂಗ್, ಇನ್ವಿಟ್ರೊ ಮ್ಯಾಚುರೇಷನ್, ಮಿನಿಮಲ್ ಸ್ಟಿಮ್ಯುಲೇಷನ್ ಐವಿಎಫ್ ಮತ್ತು ಪ್ರಿ ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನಾಸಿಸ್ಗಳಂತಹ ವೈದ್ಯಕೀಯ ಅಂಶಗಳ ಕಡೆಗೆ ಇನ್ನಷ್ಟು ಗಮನವನ್ನು ಕೇಂದ್ರೀಕರಿಸಲಿದೆ. ಗ್ರಾಮೀಣ ಭಾಗದ ಮಕ್ಕಳಿಲ್ಲದ ದಂಪತಿಗಳಿಗೂ ತನ್ನ ಸೇವೆ0ುನ್ನು ಗಮನಾರ್ಹವಾಗಿ ನೀಡುತ್ತ ಬಂದಿದೆ.

 

loading...

LEAVE A REPLY

Please enter your comment!
Please enter your name here