ಸುಲಿಗೆಗೆ ಕಡಿವಾಣ

0
37

 ಮಹಾರಾಷ್ಟ್ತ್ರದಲ್ಲಿ ಜನತೆಯು ಹೊಸದೊಂದು ಮಾರ್ಗವನ್ನು ಕಂಡು ಕೊಂಡಿದ್ದಾರೆ ತಮಗೆ ಸುಲಿಗೆ ಮಾಡುತ್ತಿರುವ ವ್ಯವಸ್ಥೆಯನ್ನು  ಸಂಪೂರ್ಣವಾಗಿ ಕಿತ್ತು ಹಾಕಲು ಪ್ರಯತ್ನಗಳು ನಡೆದಿವೆ.  ಹಾಗೇ ನೊಡಿದರೆ ಈ ಸುಲಿಗೆ ದೇಶ್ಯಾದ್ಯಂತ ಇದೆ ರಾಷ್ಟ್ತ್ರೀಯ ಹೆದ್ದಾರಿಯನ್ನು ಚಷ್ಪುತ ಮಾಡಿ  ಜನರನ್ನು  ಸುಳಿಯ ತೊಡಿಗಿದ್ದ ಕಳೆದ ಹತ್ತು ವರ್ಷಗಳಿಂದ ನಡೆದಿದೆ. 50 ಕಿಮಿಗೆ 1 ರಂತೆ ಟೋಲ್ ನಾಕಾ ನಿರ್ಮಿಸಿ  ಸಂಚರಿಸುವ ವಾಹನಗಳಿಂದ ಅತಿ ಹೆಚ್ಚು  ತೆರೆಗೆ ಸಂಗ್ರಹಿಸುವ ವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ ವಾಹನಗಳ ಆಕಾರ ನೋಡಿಕೊಂಡು ಯದ್ವಾತದ್ವ ದರ ವಿಧಿಸುವ ಈ ವ್ಯವಸ್ಥೆ ಯಾರಿಗೂ ಒಪ್ಪ ತಕ್ಕ ಮಾತಾಗಿಲ್ಲ.  ಅಂತೆಯೇ ಮಹಾರಾಷ್ಟ್ತ್ರದಲ್ಲಿ ಈ ಟೋಲ್ ನಾಕಾ ವಿರುದ್ದ  ಶಿವ ಸೇನೆ ಹಾಗೂ ಮಹಾರಾಷ್ಟ್ತ್ರ ನವ ನಿರ್ಮಾಣ ಶಕ್ತಿ ತಿರುಗಿ ಬಿದ್ದಿದೆ. ಕಳೆದ 15 ದಿನಗಳ ಹಿಂದೆ  ಕೊಲ್ಹಾಪುರ ಪರಿಸರದಲ್ಲಿ ಶಿವಸೇನಯವರು ಅನೇಕ  ಟೋಲ್ ನಾಕಾಗಳನ್ನು ಧ್ವಂಸ್ ಮಾಡಿ ತಮ್ಮ ಆಕ್ರೌಶವನ್ನು ವ್ಯಕ್ತಪಡಿಸಿದ್ದಾರೆ. ಟೋಲ್ ನಾಕಾಗಳೇ ಬೇಡ ಎಂಬ ಹಂತಕ್ಕೆ ತಲುಪಿರುವ ಸದಸ್ಯರು ಟೋಲ್ ಬಿಡುವವರೆಗೆ ಹೋರಾಟ ನಡೆಸುದಾಗಿ ಎಚ್ಚರಿಕೆ ನೀಡಿದ್ದಾರೆ ಶಿವ ಸೇನೆಯವರು 9 ಟೋಲ್ ನಾಕಾಗಳನ್ನು  ನೆಲ ಸಮ ಮಾಡಿದ ಬೆನ್ನ ಹಿಂದಯೇ  ಮಹಾರಾಷ್ಟ್ತ್ರ ನವ ನಿರ್ಮಾಣ ಸಮಿತಿಯ ರಾಜ್ ಠಾಕ್ರೆ  ತಮ್ಮ ಸಂಘಟನೆಯ ಕಾರ್ಯಕರ್ತರಿಗೆಲ್ಲಾ ಕರೆ ನೀಡಿ ಟೋಲ್ ನಾಕಾಗಳ ಧ್ವಂಸಕ್ಕೆ ನಾಂದಿ ಹಾಡಿದ್ದಾರೆ.  ರಸ್ತೆ ತೆರಗೆ ಸಂಗ್ರಹಿಸುವ ಕೇಂದ್ರ ಸರಕಾರದ ಈ ವ್ಯವಸ್ಥೆ ಇನ್ನೂ ಎಷ್ಟು ದಿನ ನಡೆಯ ಬೇಕಾಗಿದೆ 10 ವರ್ಷ ಲಾಗಾಯಿತು. ಕೇಂದ್ರ ಸರಕಾರ ಗುದ್ದಿಗೆ ಆಧಾರದ ಮೇಲೆ ತೆರೆ ವಸೂಲಿಗಾರರನ್ನು ನೇಮಿಸಿ ಬಿಟ್ಟಿದೆ ದಶಕದಿಂದ ಸಂಗ್ರಹಿಸಿದ ತೆರಿಗೆ ಎಷ್ಟು? ಚತುಷ್ಪತ ರಸ್ತೆಗಳಿಗೆ ವೆಚ್ಚ ಎಷ್ಟು ಈ ವಿಷಯಗಳ ಬಗ್ಗೆ ಜನ ಸಾಮಾನ್ಯರಿಗೆ ಯಾವದೋ ಗೊತ್ತಿರುವದಿಲ್ಲ ಪ್ರಾಯಶಃ  ಸಂಗ್ರಹಿಸಿದ ತೆರಿಗೆ ಹಣ ಈಗಾಗಲೇ ರಸ್ತೆ ನಿಮಾರ್ಣದ ವೆಚ್ಚವನ್ನು ಮೀರಿ ಹೋಗಿರಬಹುದು.  ಅಥವಾ ಮೀರದೇ ಇರಬಹುದು. ಆದರೆ ಕೇಂದ್ರ ಸರಕಾರ ಹಣ ಸಂಗ್ರಹವಾಗದ್ದರೆ ಟೋಲ್ ನಾಕ ವ್ಯವಸ್ಥೆಯನ್ನು ರದ್ದು ಮಾಡಬೇಕು ಅಥವಾ ಇನ್ನು ವೆಚ್ಚದ ಹಣ ಭರ್ತಿಯಾಗದಿದ್ದರೆ ಎಷ್ಟು ಬರಬೇಕಾಗಿದೆಯೋ  ಅದಕ್ಕೆ ಮಾತ್ರ ತೆರಿಗೆ ವಿಧಿಸಿ ಕಡಿಮೆ ಮೊತ್ತದ ದರವನ್ನು ನಿಗದಿ ಮಾಡಿ ಜನ ಸಾಮಾನ್ಯರ ಮೇಲಿನ ಆರ್ಥಿಕ ಬಾರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುವದು ಒಳಿತು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋದರೆ ಮಹಾರಾಷ್ಟದಲ್ಲಿ ನಡೆದಿರುವ ಹೋರಾಟ ಬೇರೆ ರಾಜ್ಯಗಳಿಗೂ ಹಬ್ಬಿ ಕೇಂದ್ರ ಸರಕಾರದ ಮೇಲೆ ಮತ್ತೊಂದು ಗೊಬ್ಬೆ ಕುಳಿತಂತಾದೀತು.

loading...

LEAVE A REPLY

Please enter your comment!
Please enter your name here