ತಾಪಂ ಸಾಮಾನ್ಯ ಸಭೆ: ಬಾಣಂತಿಯರಿಗೆ ವಿತರಿಸುವ ರವಾ ಕಳಪೆ

0
35

ಯಲಬುರ್ಗಾ,,31- ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯವರಿಗೆ ವಿತರಿಸುವ ರವಾ ತುಂಬಾ ಕಳಪೆ ಮಟ್ಟದಿಂದ ಕೂಡಿದ್ದು,ಗುಣಮಟ್ಟದ ರವಾವನ್ನು ವಿತರಿಸಬೇಕೆಂದು ತಾಪಂ ಸದಸ್ಯರೊಬ್ಬರು ಸಿಡಿಪಿಓ ಅಧಿಕಾರಿಗಳಲ್ಲಿ ಪ್ರಶ್ನಿಸಿದ ಘಟನೆ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.ಅಧ್ಯಕ್ಷೆ ನಿರ್ಮಾಲ ಕಪಾಲಿ ಇವರ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸಿಡಿಪಿಓ ಅಧಿಕಾರಿ ಲಲಿತಾ ನಾಯಕ ತಮ್ಮ ಇಲಾಖೆ ಮಾಹಿತಿ ನೀಡುತ್ತಿದ್ದಂತೆ,ತಾಪಂ ಉಪಾಧ್ಯಕ್ಷೆ ಮಹಾದೇವಿ ಕಂಬಳಿ ಮಾತನಾಡಿ,ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸಲಾಗುತ್ತಿತ್ತು.ಆದರೆ ಹೀಗಾ ಯಾಕೆ ವಿತರಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ,ಅದಕ್ಕೆ ಧ್ವನಿಗೂಡಿಸಿದ ತಾಪಂ ಸದಸ್ಯ ಮಲ್ಲನಗೌಡ ಕೊನನಗೌಡ್ರ ಮೇಡಂ ಅಂಗನವಾಡಿ ಕೇಂದ್ರದಿಂದ ಬಾಣಂತಿಯರಿಗೆ ವಿತರಿಸುವ ರವಾ ತಿರ ಕಳಪೆ ಇದೆ.ಉತ್ತಮ ರವಾವನ್ನು ಯಾಕೆ ವಿತರಿಸುತ್ತಿಲ್ಲ ಎಂದು ಪ್ರಶ್ನಿಸಿದರು.ಅದಕ್ಕೆ ಉತ್ತರಿಸಿದ ಸಿಡಿಪಿಓ ಅಧಿಕಾರಿ ಲಲಿತಾ ನಾಯಕ ,ಕಳೇದ ಡಿಸೆಂಬರ ತಿಂಗಳಿಂದ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸುತ್ತಿಲ್ಲ.ಯಾಕೆಂದರೆ ಮೊಟ್ಟೆ ಬೆಲೆ ಏರಿಕೆಯಾಗಿದ್ದರಿಂದ ಮೊಟ್ಟೆಯನ್ನು ವಿತರಿಸುತ್ತಿಲ್ಲ.ಅದರ ಬದಲು ದಿನಾನಿತ್ಯ ಮಕ್ಕಳಿಗೆ ಹಾಲು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.ಅಲ್ಲದೇ ಬಾಣಂತಿಯವರಿಗೆ ರವಾ ಬದಲು ಹೀಗಾ ಗೋಧಿಯನ್ನು ವಿತರಿಸಲಾಗುತ್ತಿದೆ ಎಂದು ಉತ್ತರಿಸಿದರು.ಚಿಕ್ಕಮ್ಯಾಗೇರಿ ಗ್ರಾಪಂ ಪಿಡಿಓ ಅವರು ಪ್ರತಿ ಸಭೆಯಲ್ಲಿ ಗೈರಾಗುತ್ತಾ ಬಂದಿದ್ದಾರೆ.ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವದು ಹೇಗೆ.ಗ್ರಾಮ ಸಭೆ ಮಾಡದೆ ಈಗಾಗಲೇ ಸುಮಾರು 45ಕ್ಕೂ ಹೆಚ್ಚು ಆಶ್ರಮ ಮನೆಗಳು ರದ್ದಾಗಿದ್ದಾವೆ.ಇದಕ್ಕೆ ಯಾರು ಹೊಣೆ  ಎಂದು ತಾಪಂ ಸದಸ್ಯ ಫರಸಪ್ಪ ನಾಯಕ ಅಧಿಕಾರಿಗಳಲ್ಲಿ ಪ್ರಶ್ನಿಸಿದರು.ಆಗಾ ತಾಪಂ ಇಓ ಎಂ.ಜಯಪ್ಪ ಅವರು,ಚಿಕ್ಕಮ್ಯಾಗೇರಿ ಪಿಡಿಓ ಅವರನ್ನು ಸಭೆಗೆ ಕರೆಸಿ ತೀವ್ರ ತರಾಟೆಗೆ ತಗೆದುಕೊಳ್ಳುವ ಮೂಲಕ.ಈ ರೀತಿ ಇನ್ನೂ ಮುಂದೆ ಆದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.ಸರ್ವೆ ಇಲಾಖೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಹೋದರೆ ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡಿ ಕೊಡುತ್ತಾರೆ,ಇಲ್ಲದಿದ್ದರೆ ರೈತರನ್ನು ಅಡ್ಡಾಡಿಸುವಂತಾ ಕೆಲಸ ಮಾಡುತ್ತಿದ್ದರಿಂದ ಇಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದಾವೆ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡರು.ಸರ್ವೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆವಾರು ಕುರಿತು ಸಭೆಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ತಾಪಂ ಸದಸ್ಯ ಸಂಗಪ್ಪ ಬಂಡಿ ಮಾತನಾಡಿ,ನಿಮ್ಮ ಇಲಾಖೆಯಲ್ಲಿ ಪ್ರತಿಯೊಂದು ಕೆಲಸಕ್ಕೆ ಬರುವ ರೈತರನ್ನು ಕಾಡಿಸುತ್ತಾರೆ.ಮೇಲಾಗಿ ಲಂಚ ಕೊಟ್ಟರೆ ಮಾತ್ರ ಬೇಗನೆ ಕೆಲಸ ಮಾಡುವರು.ಇಲ್ಲದಿದ್ದರೆ ಕೆಲಸ ಆಗುವದಿಲ್ಲ.ಹೀಗಾದರೆ ಹೇಗೆ ಸಾಬ್ರೆ.ಕೂಡಲೇ ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆ ಹಿಡಿಯಬೇಕು.ರೈತರ ಕೆಲಸ ಬೇಗನೆ ಮಾಡುವ ವ್ಯವಸ್ಥೆ ಕಲ್ಪಿಸಿಕೊಡಿ ಅಂತಾ ವಿನಂತಿಸಿಕೊಂಡಾಗ ಅವರ ಮಾತಿಗೆ ಸದಸ್ಯರಾದ ಮಲ್ಲನಗೌಡ ಕೊನನಗೌಡ್ರ,ಪ್ರಭುರಾಜ ಹವಾಲ್ದಾರ,ಸೇರಿದಂತೆ ಮತ್ತಿತರರು ಸದಸ್ಯರ ಬೆಂಬಲ ವ್ಯಕ್ತಪಡಿಸಿದರು.ಇದಕ್ಕೆ ಉತ್ತರಿಸಿದ ಸರ್ವೆ ಅಧಿಕಾರಿಗಳು,ಈ ಹಿಂದೆ ಇಂತಾ ಪ್ರಕರಣಗಳು ಆಗಿರಬಹುದು.ಆದರೆ ನಾನು ಇಲ್ಲಿಗೆ ಬಂದು ಒಂದು ತಿಂಗಳವಾಯಿತು.ರೈತರಿಗೆ ಯಾವುದೇ ತೊಂದರೆಯಾಗದಂತೆ ಕೆಲಸವನ್ನು ಬೇಗನೆ ಮಾಡಿಸಿಕೊಡುವ ವ್ಯವಸ್ಥೆ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಜೇಸ್ಕಾಂ ಅಧಿಕಾರಿಗಳು ತಮ್ಮ ಇಲಾಖೆವಾರು ಮಾಹಿತಿ ನೀಡುತ್ತಿದ್ದಂತೆ,ಎದ್ದು ನಿಂತಾ ತಾಪಂ ಸದಸ್ಯ ಫರಸಪ್ಪ ನಾಯಕ ಸಾಬ್ರೆ ನಮ್ಮ ಚಿಕ್ಕಮ್ಯಾಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕುದ್ರಿಕೊಟಗಿ ಗ್ರಾಮದಲ್ಲಿರುವ ಆಶ್ರಯ ಕಾಲೋನಿಯಲ್ಲಿ ಕಳೇದ ಎರಡು ವರ್ಷದಿಂದಲೂ ವಿದ್ಯುತ್ ಕಂಬವಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.ಈ ಬಗ್ಗೆ ತಮ್ಮ ಇಲಾಖೆಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದ್ದರೂ ಕೂಡಾ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ನಮ್ಮ ಮನವಿಗೆ ಕಿಮ್ಮತ್ತಿಲ್ವಾ ಎಂದರು.ಆಗಾ ಜೇಸ್ಕಾಂ ಅಧಿಕಾರಿಗಳು ಈ ಬಗ್ಗೆ ವಿಭಾಗಿಯ ಅಧಿಕಾರಿಗಳಿಗೆ ಪತ್ರ ಕೂಡಾ ಬರೆಯಲಾಗಿದೆ.ಪ್ರಸ್ತಾವನೆ ಬಂದಾ ಕೂಡಲೇ ವಿದ್ಯುತ್ ಕಂಬಗಳನ್ನು ಹಾಕಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಗುವುದೆಂದು ಭರವಸೆ ನೀಡಿದರು.ಆಗಾ ಕರಮುಡಿ ತಾಪಂ ಸದಸ್ಯ ಸಂಗಪ್ಪ ಬಂಡಿ ಮಾತನಾಡಿ,ಸಾಬ್ರೆ ಬೇಸಿಗೆ ಹತ್ತಿರ ಬರುತ್ತಿದ್ದರಿಂದ ವಿದ್ಯುತ್ ಕಡಿವಾಗದಂತೆ ನೋಡಿಕೊಳ್ಳಿ,ಯಾಕೆಂದರೆ ಸಾರ್ವಜನಿಕರಿಗೆ ನೀರಿನ ತೊಂದರೆಯಾಗಬಾರದು.ಈ ದೃಷ್ಟಿಯಿಂದ ದಯಮಾಡಿ ವಿದ್ಯುತ್ತಿನಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಜೇಸ್ಕಾಂ ಅಧಿಕಾರಿಗಳಿಗಳಲ್ಲಿ ವಿನಂತಿಸಿಕೊಂಡರು.ಇದೇ ಸಂದರ್ಭದಲ್ಲಿ ಲೋಕಪಯೋಗಿ. ಜಿಪಂ, ಕೃಷಿ, ಜಲಾನಯನ,ಆರೋಗ್ಯ ಸೇರಿದಂತೆ ಇನ್ನಿತರ ಇಲಾಖೆಯವರು ಸಭೆಗೆ ಮಾಹಿತಿ ನೀಡಿದರು.ತಾಪಂ ಅಧ್ಯಕ್ಷೆ ನಿರ್ಮಾಲ ಕಪಾಲಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಮಹಾದೇವಿ ಕಂಬಳಿ,ಸ್ಥಾಯಿ ಸಮಿತಿ ಅಧ್ಯಕ್ಷ ಫರಸಪ್ಪ ತಳವಾರ,ಇಓ ಎಂ.ಜಯಪ್ಪ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here