ಆಕಾಂಕ್ಷೆ

0
71

ಎಲ್ಲರು ಗೆಲ್ಲವದು ಹೇಗೆಂದು ಚಿಂತಿಸುತ್ತಾರೆ ಗೆಲವನ್ನು ಸಾಧಿಸುವದಕ್ಕೆ ಅನೇಕ ತಂತ್ರಗಳನ್ನು ಹೆಣೆಯುತ್ತಾರೆ. ಆದರೆ ಹಾಗೂ ಹೀಗೂ 28 ಸ್ಥಾನಗಳನ್ನು ಗೆದ್ದು ದೆಹಲಿಯಲ್ಲಿ ದರ್ಬಾರ್ ನಡೆಸಿರುವ ಕೇಜ್ರಿವಾಲಾ ಕ್ರೇಜಿಯಂತೆ ಚಿಂತಿಸುತ್ತಿದ್ದಾರೆ ಯಾವ ರಾಜ್ಯದಲ್ಲಿ ಯಾರ್ಯಾರನ್ನು ಸೋಲಿಸಬೇಕು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ತಾನು  ಸೋಲಿಸಬೇಕೆಂದ ವ್ಯಕ್ತಿಗಳು ಯಾವ ಪಕ್ಷ ಸೇರಿದವರೆಂದು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ಆಮ್ ಆದ್ಮಿಗೆ ಸರಕಾರ ರಚಿಸಲು ಬೆಂಬಲ ನೀಡಿದ್ದರೂ ಎಲ್ಲ ವಿಷಯದಲ್ಲಿ ಕಾಂಗ್ರೆಸ್ನೇ ಟಾರ್ಗೇಟ್ ಮಾಡುತ್ತಿರುವ ಆಮ್ ಆದ್ಮಿ ಕರ್ನಾಟಕದಲ್ಲಿ ವಿರಪ್ಪ ಮೊಯ್ಲಿ ಅವರನ್ನು ಟಾರ್ಗೆಟ್ ಮಾಡಿದ್ದಾನೆ.

ತನಗೆ ಆಧಾರಗಂಭವಾಗಿ ನಿಂತಿರುವ ಕಾಂಗ್ರೆಸ್ನ್ನೇ ಈ ರೀತಿ ಹಿಗಳೆದರು ಕಾಂಗ್ರೆಸ್ ಧುರೀಣರು ತೆಪ್ಪಗೆ ಕುಳಿತ್ತಿದ್ದು ಏನು ಕಾರಣ ಎಂಬ ಪ್ರಶ್ನೆ ಎದುರಾಗಿದೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ಕೇಜ್ರಿ ಒಬ್ಬ ಕ್ರೇಜಿ (ಹುಚ್ಚ್) ಎಂದು ಟೀಕಿಸಿದನ್ನು ಬಿಟ್ಟರೆ ತಾಯಿ ಮಗ ಆತನನ್ನು ಸಿರಿಯಸ್ಸ್ ಆಗಿ ತೆಗೆದುಕೊಂಡಿಲ್ಲ. ಆದರೂ ಬೇರೆ ಬೇರೆ ಮಾರ್ಗದಿಂದ ಕೇಜ್ರಿ ಶಕ್ತಿಗೆ ಜಂಗು ಹತ್ತುವಂತೆ ಕಾಂಗ್ರೆಸ್ ವರ್ತಿಸುತ್ತಲಿದೆ. ಪತ್ರಿಕಾಗೊಷ್ಟಿಯಲ್ಲಿ ಕಾಂಗ್ರೆಸ್ ಶಾಸಕ ಗಲಾಟೆ ಮಾಡಿ ವಿಕ್ರಮ ಮೆರೆದಿದ್ದಾರೆ.

ಈಗ ಕೇಂದ್ರ ಸರಕಾರ ಕೇಜ್ರಿ ವಿರುದ್ದ ಕರಂಟೆನ್ನವರನ್ನು ಛೋ…. ಬಿಟ್ಟಿದೆ. ಪೂರ್ವ ದೆಹಲಿಯಲ್ಲಿ  ಫೆಬ್ರವರಿ 1 ರಿಂದ ವಿದ್ಯುತ್ ಕಡಿತದ ಯೋಜನೆ ರೂಪಿಸಲಾಗಿದೆ ವಿದ್ಯುತ್ ಖರೀದಿಸಲು ತನ್ನ ಬಳಿ ಹಣವಿಲ್ಲ ಎಂದು  ಯಮುನಾ ಕಂಪನಿ ಹೇಳಿ  ವಿದ್ಯುತ್ ನೀಡಿಕೆ ಆಗುವದಿಲ್ಲ ಎಂದು ಕೈ ಮೇಲೆತ್ತಿದೆ.  ಅಂದರೆ ಇಷ್ಟು ದಿನ ಪೂರ್ವ ದೆಹಲಿಯಲ್ಲಿ ವಿದ್ಯತ್ ಬಳಸಿದವರು ಬಿಲ್ಲನ್ನೇ ಕಟ್ಟಿಲ್ಲ ಎಂಬುವದು ಸ್ಪಷ್ಟವಲ್ಲವೇ. ಇದಕ್ಕೇ ಶೀಲಾ ದಿಕ್ಷತರನ್ನು ಹೊಣೆ ಮಾಡಬೇಕೋ ಅಥವಾ ತಿಂಗಳ ಕೂಸಿನ ತಲೆಯ ಮೇಲೆ  ಹೊರೆಸಿ ಮೋಜು ನೋಡಬೇಕೋ ? ಕೇಜ್ರವಾಲಾಗೆ ಇದೊಂದು ಸವಾಲೇ ಸರಿ.

loading...

LEAVE A REPLY

Please enter your comment!
Please enter your name here