ಪಪಂ, ಅರಣ್ಯ ಇಲಾಖೆ ನಿರ್ಲಕ್ಷ: ಯಲಬುರ್ಗಾ ಪಟ್ಟಣದಲ್ಲಿ ಕಪ್ಪು ಮಂಗಗಳ ಹಾವಳಿಯಿಂದ ತತ್ತರಿಸಿದ ಜನರು

0
50

ಯಲಬುರ್ಗಾ,ಫೆ 3- ಎಲ್ಲಿ ನೋಡಿದರೂ ಹಿಂಡು ಹಿಂಡಾಗಿ ಕಂಡು ಬರುವ ಈ ಕಪ್ಪು ಮಂಗಗಳ ಹಾವಳಿಯಿಂದ ಪಟ್ಟಣ ಜನರು ಬೆಸತ್ತು ಹೋಗಿದ್ದಾರೆ ಎಂದರೆ ನಿಜಕ್ಕೂ ತಪ್ಪಾಗಲಾರದು.ಯಾಕೆಂದರೆ ಪಟ್ಟಣದಲ್ಲಿ ಪ್ರತಿಯೊಂದು ಓಣಿಯಲ್ಲಿ ಕಂಡು ಬರುವ ಈ ಮಂಗಗಳ ಹಾವಳಿಗಳು ತೋಟ ಸೇರಿದಂತೆ ಓಣಿಯಲ್ಲಿವ ಮ್ಯಾಳಿಗೆ,ತಗಡು ಮೇಲೆ ಹಾರಾಡಿ ಮಂಗಗಳು ಅವುಗಳನ್ನು ಹಾಳು ಮಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.ಅಲ್ಲದೇ ಇಲ್ಲಿಯ ತಹಶೀಲ್ ಕಛೆರಿ,ಪಿಎಲ್ಡಿ ಬ್ಯಾಂಕ್,ಕೋರ್ಟ ಹಳೇ ತಹಶೀಲ್ ಕಚೇರಿ ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಕಂಡು ಬರುವ ಈ ಕಪ್ಪು ಮಂಗಗಳ ಹಾವಳಿ ದಿನದಿಂದಾ ದಿನಕ್ಕೆ ಹೆಚ್ಚಾಗುತ್ತಿದ್ದು,ಕಡಿಮೆಯಗುತ್ತಿಲ್ಲ.ಇದರಿಂದ ಕೆಲವೊಂದು ಕಡೆ ಮಂಗಗಳಿಂದ ಜನರಿಗೆ ಸಾಕು ಸಾಕಾಗಿದೆ ಎನ್ನುತ್ತಾರೆ ಪಟ್ಟಣದ ಸಾರ್ವಜನಿಕರು.

ಮಂಗಗಳ ಹಿಡಿಯಲು ಪಪಂದಲ್ಲಿ ಠರಾವು;-ಪಟ್ಟಣದಲ್ಲಿ ದಿನಾ ದಿಂದ ದಿನಾಕ್ಕೆ ಮಂಗಗಳು ಹೆಚ್ಚುತ್ತಿರುವದರಿಂದ ಮಂಗಗಳನ್ನು ಹಿಡಿಯಲು ಸ್ಥಳಿಯ ಪಟ್ಟಣ ಪಂಚಾಯತಿಯಲ್ಲಿ ಕಳೇದ ಎರಡು ಮೂರು ತಿಂಗಳಚ್ಚೆ ನಡೆದ  ಸಾಮಾನ್ಯ ಸಭೆಯಲ್ಲಿ ನಿರ್ಧಾರಿಸುವ ಮೂಲಕ ಠರಾವನ್ನು ಪಾಸು ಕೂಡಾ ಮಾಡಲಾಗಿತ್ತು.ಅಂದಿನ ಸಭೆಯಲ್ಲಿ ಕೂಡಾ ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಮಂಗಗಳನ್ನು ಹಿಡಿಯುವಂತೆ ಪಪಂ ಅಧ್ಯಕ್ಷರು,ಮುಖ್ಯಾಧಿಕಾರಿಗಳು ಸೇರಿದಂತೆ ಪಪಂ ಸರ್ವ ಸದಸ್ಯರು ಒಮ್ಮತದ ನಿರ್ಧಾರಿಸಿ,ಠರಾವನ್ನು ಪಾಸು ಮಾಡಿ,ಈಗ ಆ ಠರಾವು ಮಾತ್ರ ಕಾಗದದಲ್ಲಿ ಮಾತ್ರ ಉಳಿದುಕೊಂಡಿದೆ ಹೊರತು ಮಂಗಗಳನ್ನು ಹಿಡಿಯುವಲ್ಲಿ ಸ್ಥಳಿಯ ಪಟ್ಟಣ ಪಂಚಾಯತಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದಿಂದ ಯಲಬುರ್ಗಾ ಪಟ್ಟಣದಲ್ಲಿ ಮಂಗಗಳ ಹಾವಳಿ ಹೆಚ್ಚುತ್ತಲಿದೆ ಹೊರತು ಕಮ್ಮಿಯಾಗುತ್ತಿಲ್ಲ ಎನ್ನುತ್ತಾರೆ ಪಟ್ಟಣದ ಸಾರ್ವಜನಿಕರು

ಪೋಲೀಸ್ ಎಎಸ್ಐಗೆ ಕಚ್ಚಿದ ಮಂಗ ;-ಪಟ್ಟಣದಲ್ಲಿ ಮಂಗಗಳು ಜಾಸ್ತಿಯಾಗುತ್ತಿದ್ದರಿಂದ ಕೆಲವೊಮ್ಮೆ ಆ ಮಂಗಗಳು ಮನುಷ್ಯನ ಮೇಲೆ ದಾಳಿ ಮಾಡಿದ್ದುಂಟು ಎನ್ನಬಹುದು.ಇದಕ್ಕೆ ಉದಾಹರಣೆ ರಾತ್ರಿ ಸಮಯದಲ್ಲಿ ಕರ್ತವ್ಯ ನಿರತದಲ್ಲಿದ್ದ ಎಎಸ್ಐನಿಗೆ ಹುಚ್ಚ ಮಂಗವೊಂದು ಕೈಗೆ ಕಡಿದಿದ್ದರಿಂದ ಗಾಯವಾಗಿರುವ ಘಟನೆ ಕಳೇದ ಜನೆವರಿ 26 ರಂದು ಬೆಳಿಗಿನ ಜಾವ ಯಲಬುರ್ಗಾ ಪಟ್ಟಣದಲ್ಲಿ ಜರಗಿದೆ.ಪಟ್ಟಣದ ಪೋಲೀಸ್ ಠಾಣೆಯ ಎಎಸ್ಐ ಮಾರ್ತಂಡಪ್ಪ ಅವರು ಎಂದಿನಂತೆ ರಾತ್ರಿ  ವೇಳೆ ಪಟ್ಟನದಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದರು.ಆದರೆ ಇಲ್ಲಿಯ ಅಂಚೆ ಇಲಾಖೆಗೆ ರಾತ್ರಿ ಸುಮಾರು 2.45 ಘಂಟಗೆ ಪುಸ್ತಕದಲ್ಲಿ ಸಹಿ ಮಾಡಿ ತಮ್ಮ ಬೈಕ ಹತ್ತಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲೆ ಗಿಡದಲ್ಲಿ ಕುಳಿತ್ತಿದ್ದ ಹುಚ್ಚ ಮಂಗವೊಂದು ಅವರ ಮೈ ಮೇಲೆ ಎರಗಿ ಕೈಗೆ ಕಚ್ಚಿದ್ದರಿಂದ ಗಂಭಿರ ಗಾಯವಾಗಿದೆ.ಅಲ್ಲದೇ ಬೈಕನಿಂದ ಬಿದ್ದಿದ್ದರಿಂದ ಕಾಲಿಗೆ ಸಣ್ಣ ಪುಟ್ಟ ಗಾಯವಾಗಿದೆ ಎನ್ನಲಾಗಿದೆ.

ಮಂಗಗಳ ಹಾವಳಿ,ಶಾಸಕರ ಗಮನಕ್ಕೆ ;-ಯಲಬುರ್ಗಾದಲ್ಲಿ ಹೆಚ್ಚುತ್ತಿರುವ ಮಂಗಗಳ ಹಾವಳಿ ಕುರಿತು ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರ ಗಮನಕ್ಕೂ ಕೂಡಾ ಪಟ್ಟಣದ ಸಾರ್ವಜನಿಕರು ತಂದಿದ್ದರಿಂದ ಶಾಸಕರು ಕೂಡಾ ಮಂಗಗಳನ್ನು ಕೂಡಲೇ ಪಟ್ಟಣ ಪಂಚಾಯತಿಯವರು ಅರಣ್ಯ ಇಲಾಖೆಯವರ ಗಮನಕ್ಕೆ ತಂದು ಆ ಮಂಗಗಳನ್ನು ಹಿಡಿಯುವ ವ್ಯವಸ್ಥೆಯನ್ನು ಮಾಡುವಲ್ಲಿ ಮುಂದಾಗಬೇಕು.ಇಲ್ಲಾದಿದ್ದರೆ ನಿವೇ ನಿಂತು ಮಂಗಗಳನ್ನು ಹಿಡಿಯಿರಿ ಎಂದು ಕಳೇದ ಜನೇವರಿ 26 ರಂದು ಪಟ್ಟಣದಲ್ಲಿ ನಡೆದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ.

ಪಪಂ,ಅರಣ್ಯ ಇಲಾಖೆ ಗಮನಿಸುವರೇ;-  ಕೊಪ್ಪಳ ಕಡೆ ಸಂಚರಿಸುವ ವಾಹನಗಳಿಗೆ ಅಡೆ ತಡೆಯುಂಟು ಮಾಡುತ್ತಿದ್ದರಿಂದ ವಾಹನ ಸಂಚಾರಕ್ಕೆ ಸೇರಿದಂತೆ,ವಾಹನಗಳಿಗೆ ಅಡ್ಡ ಬರುವುದರಿಂದ ಮಂಗಗಳು ಅವಘಡ ಸಂಬಂವಿಸುವುದರಿಂದ ಕೋತಿಗಳು ಸಾವನ್ನಪ್ಪುತ್ತಿದ್ದಾವೆ.ಅಲ್ಲದೆ ಮಂಗಗಳು ಪಟ್ಟಣದ ವಿವಿಧ ಓಣಿಯಲ್ಲಿ ಬರುವುದರಿಂದ ಮನೆಗಳ ಮ್ಯಾಳಿಗೆ ಮೇಲೆ ಬಂದು ತುಂಬಾ ತೊಂದರೆಯುಂಟು ಮಾಡುತ್ತಿದ್ದಿಲ್ಲದೆ,ಊರಿನ ಹತ್ತಿರ ಇರುವ ತೋಟ,ಹೋಲಗಳಿಗೆ ಮಂಗಗಳು ನುಗ್ಗಿ ಫಸಲುಗಳನ್ನು ಹಾಳು ಮಾಡುತ್ತಿದ್ದಾವೆ ಎಂದು ರೈತರು ದೂರುತ್ತಿದ್ದಾರೆ.ಇದರಿಂದಾಗಿ ದಾರಿಯಲ್ಲಿ ಸಂಚಾರಿಸುವ ನಾಗರಿಕರಿಗೆ ,ಮಕ್ಕಳಿಗೆ ತುಂಬಾ ಗಾಬರಿ ಹುಟ್ಟಿಸುವಂತೆ ಕೆಲವೊಂದು ಕೋತಿಗಳು ವರ್ತಿಸುತ್ತಿದ್ದರಿಂದ ಮಕ್ಕಳು,ಗಾಬರಿಗೊಂಡಿದ್ದಾರೆ.ಪಟ್ಟಣದಲ್ಲಿ ಈ ಮಂಗಗಳ ಹಾವಳಿ ತಪ್ಪಿಸಿ ಸಾರ್ವಜನಿಕರು ನಿಶ್ಚಿಂತೆಯಿಂದ ಬದುಕಲು ಸಂಬಂಧಪಟ್ಟ ಪಪಂದವರು ಮತ್ತು ಅರಣ್ಯಾಧಿಕಾರಿಗಳು ಮಂಗಗಳನ್ನು ಹಿಡಿಯುವ ಮೂಲಕ ಅರಣ್ಯ ಪ್ರದೇಶಕ್ಕೆ ರವಾನಿಸಬೇಕಾಗಿ ಪಟ್ಟಣದ ಸರ್ವ ಸಾರ್ವಜನಿಕರು,ರೈತಾಪಿ ವರ್ಗ ಅಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here