ಶರಣರ ಕಾಯಕ ತತ್ವ ಅನುಭವವನ್ನು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಸ್ವಾಮೀಜಿ ಸಲಹೆ

0
56

ಯಲಬುರ್ಗಾ,ಫೆ.4- ಒಳಿತನ್ನು ಬಯಸುವುದೆ ನಿಜವಾದ ಧರ್ಮ.ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವಂತೆ ಶರಣರ ಕಾಯಕ ತತ್ವ ಮತ್ತು ಅನುಭವವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀಧರ ಮುರಡಿ ಹಿರೇಮಠದ ಷ.ಬ್ರ.ಬಸಲಿಂಗೇಶ್ವರ ಸ್ವಾಮೀಜಿ ಸಲಹೆ ನೀಡಿದರು.ಶ್ರೀಧರ ಮುರಡಿ ಹಿರೇಮಠದ ಷ.ಬ್ರ.ಬಸಲಿಂಗೇಶ್ವರ ಸ್ವಾಮೀಜಿಗಳ ದ್ವಾದಶ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಸೋಮವಾರ ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನ ಅವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಮತ್ತು ತುಲಭಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದ ಅವರು,ನಾಡಿನಲ್ಲಿ ವೀರಶೈವ ಮಠಗಳು ಭಕ್ತರಲ್ಲಿ ಬೌದ್ದಿಕ ಜ್ಞಾನ ಮತ್ತು ಧಾರ್ಮಿಕತೆ ಬೆಳೆಸುತ್ತಿದ್ದಾವೆ ಎಂದರು.

ಗುಳೇದಗುಡ್ಡದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಪ್ರತಿಯೊಬ್ಬನು ಮನುಷ್ಯನಾಗಿ ಹುಟ್ಟಿದಮೇಲೆ ಧಾನ ಧರ್ಮ ಮಾಡುವದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಎಂದು ಆಶಿರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ಧಾರವಾಡ,ಗದಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿ ಜಯಂತಿ ಅಕ್ಕನವರಿಂದ ಪರಮಾತ್ಮನ ಸಂದೇಶ ಕುರಿತು ಉಪನ್ಯಾಸ ನೀಡಿದರು.ಜಿಪಂ ಮಾಜಿ ಸದಸ್ಯ ಸಿ.ಎಚ್.ಪೋಲೀಸ್ ಪಾಟೀಲ್ ಮಾತನಾಡಿ,ಧಾರ್ಮಿಕತೆಯಿಂದ ಕೂಡಿದ ಈ ನಾಡಿನಲ್ಲಿ ಮಠಗಳಿಂದ ನೆಮ್ಮದಿ,ಧಾರ್ಮಿಕತೆ,ಬೆಳೆಸುವಲ್ಲಿ ಮುಂದಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಗಜೇಂದ್ರಗಡದ ಭೂಮರೆಡ್ಡಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್.ಶಿವರೆಡ್ಡಿ ಇವರಿಗೆ ಶ್ರೀಮಠದ ವತಿಯಿಂದ ಸನ್ಮಾನ ಸ್ವೀಕಾರಿಸಿ ಮಾತನಾಡಿದ ಅವರು, ಅನುಭವ ಮಂಟಪದ ಮೂಲಕ ಜಗತ್ತಿಗೆ ಮಾನವೀಯತೆಯ ಸನ್ಮಾರ್ಗವನ್ನು ನೀಡಿದ ಶರಣರ ಅಂದೋಲನ ನೈತಿಕವಾಗಿ,ಚಾರೀತೀಕವಾದದು ಎಂದರು.ಇದೇ ಸಂದರ್ಭದಲ್ಲಿ ಬಸವಲಿಂಗಪ್ಪ ಕೊತ್ತಲ ಹಾಗೂ ಗವಿಸಿದ್ದಪ್ಪ ಮೈಲಾರಗೌಡ್ರ ಇವರಿಂದ ಶ್ರೀಧರ ಮುರಡಿ ಹಿರೇಮಠದ ಷ.ಬ್ರ.ಬಸವಲಿಂಗೇಶ್ವರ ಸ್ವಾಮೀಜಿಗಳಿಗೆ ತುಲಭಾರ ನಡೆಸಿಕೊಟ್ಟರು.ಸಮಾರಂಭದ ಸಾನಿಧ್ಯವನ್ನು ನವಲಗುಂದದ ಸಂಸ್ಥಾನ ಗವಿಮಠದ ಮ.ನಿ.ಪ್ರ.ಬಸವಲಿಂಗ ಸ್ವಾಮೀಜಿ ವಹಿಸಿ ಆಶೀವರ್ಚನ ನೀಡಿದರು.ಸಮಾರಂಭದಲ್ಲಿ ಪಪಂ ಸದಸ್ಯ ಮೈಬೂಬಸಾಬ ಕನಕಗಿರಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಶಿಕ್ಷಕ ಶರಣಯ್ಯ ಸರಗಣಾಚಾರಮಠ ನಿರೂಪಿಸಿದರು.ಮಂಗಳೇಶ ಶ್ಯಾಗೋಟಿ ಪ್ರಾರ್ಥಿಸಿದರು.ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here