ಫೆ,28 ರಂದು ಗದಗ ವಾಡಿ ರೈಲ್ವೆ ಸರ್ವೆ ಕಾರ್ಯಕ್ಕೆ ಅಡಿಗಲ್ಲು-ಶಾಸಕ ಬಸವರಾಜ ರಾಯರೆಡ್ಡಿ

0
43

ಯಲಬುರ್ಗಾ,ಫೆ,12-ಗದಗ ವಾಡಿ ರೈಲ್ವೆ ಸರ್ವೆ ಕಾರ್ಯಕ್ಕೆ ಇದೇ ಫೆ,28 ರಂದು ಕೇಂದ್ರ ರೈಲ್ವೆ ಸಚಿವರಿಂದ ಯಲಬುರ್ಗಾ ಪಟ್ಟಣದಲ್ಲಿ ಅಡಿಗಲ್ಲು ಸಮಾರಂಭ ನಡೆಯಲಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.ಬುಧವಾರ ಪಟ್ಟಣದ ಶಾಸಕರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ಗದಗ ವಾಡಿ ರೈಲ್ವೆ ಯೊಜನೆಯನ್ನು ಈಗಾಗಲೇ ಆಡಳಿತ್ಮಾಕ ಮಂಜುರಾತಿ ಸಿಕ್ಕಿದೆ.ಸುಮಾರು 252 ಕಿ.ಮೀ.ಕೂಕನೂರು,ಯಲಬುರ್ಗಾ ಮುಖಾಂತರ ಸರ್ವೆ ಕಾರ್ಯ ಕುಡಾ ಆರಂಭಿಸಲಾಗುತ್ತಿದ್ದು,ಮೂರು ಸಾವಿರ ಎಕರೆ ಜಮೀನಿನ ಅವಶ್ಯ ಇದ್ದು.ರಾಜ್ಯ ಸರಕಾರ ಉಚಿತವಾಗಿ ಜಮೀನವನ್ನು ಕೊಡಲು ಮುಂದೆ ಬಂದಿದೆ.ಈ ಹಿನ್ನಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಫೆ.28 ರಂದು ಗದಗ,ವಾಡಿ ರೈಲ್ವೆ ಮಾರ್ಗ ಸರ್ವೆ ಕಾರ್ಯಕ್ಕೆ ಯಲಬುರ್ಗಾದಲ್ಲಿ ಅಡಿಗಲ್ಲ ಹಾಕುವರು.ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾಜ ವೀರಪ್ಪ ಮೊಯ್ಲಿ,ಅಸ್ಕರ ಫರ್ನಾಂಡಿಸ್,ಮುನಿಯಪ್ಪ,ರೋಷನ್ ಬೇಗ,ಆರ್.ವಿ.ದೇಶಪಾಂಡೆ,ಎಚ್.ಕೆ.ಪಾಟೀಲ್ ಸೇರಿದಂತೆ ಮತ್ತಿತರರು ಸಚಿವರು ಆಗಮಿಸುವರು ಎಂದಾ ಅವರು,ಕೃಷ್ಣ ಮೇಲ್ಡಂಡೆ ಯೊಜನೆಯ ಕೊಪ್ಪಳ ಏತ ನೀರಾವರಿ ಕಾಮಗಾರಿಗಳಿಗೆ ಸರ್ವೆ ಕಾರ್ಯಗಳನ್ನು ಪ್ರಾರಂಭಿಸಲು ಹೊಸ ಉಪ ವಿಭಾಗ ಕಛೇರಿಯನ್ನು ಯಲಬುರ್ಗಾ ಪಟ್ಟಣದಲ್ಲಿ ಆರಂಭಿಸಲು ಸರಕಾರ ಅನುಮತಿ ನೀಡಿದೆ ಈ ಯೋಜನೆಯ ಹಿನ್ನಲೆಯಲ್ಲಿ ತುಂತುರ ನೀರಾವರಿ ಯೋಜನೆಯನ್ನು ಯಲಬುರ್ಗಾ ತಾಲೂಕಿಗೆ ಸಂಪುರ್ಣ ನೀರಾವರಿ ಆಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ವಿನಂತಿಸಿಕೊಂಡಾಗ 1 ಲಕ್ಷ 25 ಸಾವಿರ ಎಕರೆ  ಜಮಿನಿಗೆ ನೀರಾವರಿ ಮಾಡುವಂತೆ ಸರಕಾರ ಒಪ್ಪಿಗೆ ಕೊಟ್ಟಿದ್ದರಿಂದ ಕೃಷ್ಣ ಭಾಗ್ಯ ಜಲ ನಿಗಮ  ಕೃಷ್ಣ ಮೆಲ್ಡಂಡ ಯೋಜನೆ ಹಂತ-3ರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾಮಗಾರಿಗಳನ್ನು 2017ನೇ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹಮ್ಮಿಕೊಳ್ಳಲಾಗಿದೆ.ಈ ಹಿನ್ನಲೆಯಲ್ಲಿ ಸರ್ವೆ ಕಛೇರಿಯನ್ನು ಸುಮಾರು 12 ಸಿಬ್ಬಂದಿಗಳಗೊಂಡ ಪ್ರಮುಖ ಕಛೇರಿಯು ಯಲಬುರ್ಗಾದ ಹಳೇ ಸರಕಾರಿ ಆಸ್ಪತ್ರೆಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಲಾಗುವುದೆಂದಾ ಅವರು,ಜಿಲ್ಲೆಯಲ್ಲಿಯೇ ಅತಿ ಹೆಚ್ಚು ನೀರಾವರಿ ತಾಲೂಕಿಗೆ ಲಭಿಸಲಿದೆ ಎಂದರು.ಅಲ್ಲದೇ ತಾಲೂಕಿನ ಬನ್ನಿಕೊಪ್ಪ ಮತ್ತು ತಳಕಲ್ ಗ್ರಾಮಕ್ಕೆ ಸಿಂಗಟಲೂರ ಏತ ನೀರಾವರಿ ಯೋಜನೆಯಿಂದ ಸುಮಾರು 17 ಸಾವಿರ ಎಕರೆ ನೀರಾವರಿ ಮಾಡಲು ಉದ್ದೇಶವಾಗಿದೆ.ಒಟ್ಟಿನಲ್ಲಿ ಈ ಎರಡು ಯೋಜನೆಯಿಂದಾಗಿ ತಾಲೂಕಿಗೆ ಸುಮಾರು 1.40 ಲಕ್ಷ ಎಕರೆ ನೀರಾಚರಿ ಯೋಜನೆ ಲಭಿಸಲಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಬಸವರಾಜ ಉಳ್ಳಾಗಡ್ಡಿ,ಮುಖಂಡರಾದ ಬಸವಲಿಂಗಪ್ಪ ಭೂತೆ,ಬಿ.ಎಮ್.ಶಿರೂರು,ವೀರನಗೌಡ ಬಳೂಟಗಿ,ಹನಮಂತಗೌಡ ಪಾಟೀಲ್,ಬಸವರಾಜ ರಡ್ಡೇರ,ಯಲ್ಲಪ್ಪ ಮೇಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here