ಗ್ರಾಮಿಣ ಉದ್ಯೋಗ ಗಾತ್ರಿ ಯೋಜನೆಯ ಬಳಕೆಗೆ ಕರೆ

0
82

ಸೂಳೇಭಾವಿಯ : 03 ಸೂಳೇಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2014-15ಸಾಲಿಗಾಗಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕಾಮಗಾರಿಗಳ ಕ್ರೀಯಾ ಯೋಜನೆಗೆ ಈಗಾಗಲೇ ಅನುಮತಿ ದೊರೆತ್ತಿದೆ. ಕಾರಣ ಈ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ವಯಸ್ಕ ಸದಸ್ಯರು, ಉದ್ಯೋಗ ಇಲ್ಲದವರು ಸ್ವ ಪ್ರೇರಣೆಯಿಂದ ಕೆಲಸಕ್ಕೆ ಬಂದು ಲಾಭ ಪಡೆಯಬೇಕೆಂದು ಜೊತೆಗೆ ಗ್ರಾಮಗಳ ಅಭಿವೃಧ್ದಿಗೆ ಸಹಕರಿಸಬೇಕೆಂದು ಗ್ರಾಮ ಪಂಚಾಯತ ಅಧ್ಯಕ್ಷರಾದ ನಾನಪ್ಪ ಅಣ್ಣಪ್ಪ ಪಾರ್ವತಿ ಉಪಾಧ್ಯಕ್ಷರಾದ ಸಾವಿತ್ರಿ ಹರಿಚಂದ್ರ ಪಾತಲಿ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಅಭಿವೃಧ್ದಿ ಅಧಿಕಾರಿ ಸುಜಾತಾ. ಮ. ಬಡಕುರ್ಕಿ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮ:
ತೆರೆದ ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಗಳು ಜಂಟಿಯಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಖಾಸಗಿ ಹಾಗೂ ಸರಕಾರಿ ಒಡೆತನದ ತೆರೆದ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿಸುವ ಉದ್ದೇಶವನ್ನು ಈ ಕಾರ್ಯಾಚರಣೆ ಆರಂಭವಾಗಿದೆ. ಸಾರ್ವಜನಿಕರು ಇಂತಹ ಕೊಳವೆ ಬಾವಿಗಳ ಬಗ್ಗೆ ತಮಗೆ ತಿಳಿದ ಮಾಹಿತಿಯನ್ನು ಮೊಬಾಯಿಲ್ ಸಂಖ್ಯೆ: 7204484930ಕ್ಕೆ ಸಂಪರ್ಕಿಸಿ ವಿವರ ನೀಡಲು ಕೋರಲಾಗಿದೆ. ಈ ಮಾಹಿತಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವದೆಂದು ಪ್ರಕಣೆಯಲ್ಲಿ ತಿಳಿಸಲಾಗಿದೆ.
ಶೌಚಾಲಯ ನಿರ್ಮಾಣ:
ಬೆಳಗಾವಿ ತಾಲೂಕಿನಲ್ಲಿ 2014-15ರಲ್ಲಿ ನಿರ್ಮಲ ತಾಲೂಕು ಪುರಸ್ಕಾರಕ್ಕಾಗಿ ಆಯ್ಕೆಮಾಡಲು ಜಿಲ್ಲಾ ಪಂಚಾಯಿತಿ ವತಿಯಿಂದ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದ್ದರಿಂದ ನಮ್ಮ ಗ್ರಾಮ ಪಂಚಾಯತ 2012-13ರಲ್ಲಿ ಚರ್ಚಿಸಿ ಸರ್ವೆ ಮಾಡಿದ ಪ್ರಕಾರ ಇನ್ನೂ ಶೌಚಾಲಯ ಕಟ್ಟಬೇಕಾಗಿರುವ ಸಂಖ್ಯೆ 690 ಇರುತ್ತದೆ. ಸಾರ್ವಜನಿಕರಿಗೆ ಈಬಗ್ಗೆ ಪ್ರತಿ ವಾರ್ಡ ಮತ್ತು ಗ್ರಾಮ ಸಭೆಯಲ್ಲಿ ವಿವರಗಳನ್ನು ನೀಡುತ್ತಲೇ ಬರಲಾಗಿದೆ. ರಾಷ್ಟ್ತ್ರೀಯ ಉದೋಗ ಖಾತ್ರಿ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ 5400ರೂ. ಹಾಗೂ ನಿರ್ಮಲ ಅಭಿಯಾನದಲ್ಲಿ 4700ರೂ. ಹೀಗೆ ಒಟ್ಟು 10100ರೂ. ಪ್ರೊತ್ಸಾಯ ಧನವನ್ನು ಸರಕಾರದಿಂದ ಕೊಡಲಾಗುವದು ಎಸಿ. ಎಸ್ಟಿ. ಜನಾಂಗದವರಿಗೆ ಹೆಚ್ಚುವರಿಯಾಗಿ 5000ರೂಗಳನ್ನು ಹಾಗೂ ಧರ್ಮಸ್ಥಳ ಗ್ರಾಮೀಣ ಅಭಿವೃಧ್ದಿ ಸದಸ್ಯರ ಸಂಘದಿಂದ 1000ರೂ. ಹೀಗೆ ಹಣ ಸಿಗುತ್ತದೆ. ಈ ಎಲ್ಲ ಪ್ರಯೋಜನ ಪಡೆದು ಶೌಚಾಲಯ ಇಲ್ಲದ ಕುಟುಂಬ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಪ್ರಕಟಣೆಯು ಕೊರಲಾಗಿದೆ.
ಕುಡಿಯುವ ನೀರಿನ ಬಳಕೆ:
ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು16 ಮಿಲಿವಾಟರ್ ಸಪ್ಲಾಯ ಹಾಗೂ ಪೈಪ ಮುಖಾಂತರ ಸಾರ್ವಜನಿಕರಿಗೆ ಪ್ರತಿದಿನ ನೀರನ್ನು ಒದಗಿಸಲಾಗುತ್ತಿದೆ. ಆದರೆ ಸಾರ್ವಜನಿಕರಿಗೆ ಸಾಕಷ್ಟು ಮನವಿ ಮಾಡಿಕೊಂಡಿದ್ದರೂ ನೀರು ಪೋಲು ಮಾಡುವುದನ್ನು ಮುಂದುವರೆಸಿದ್ದಾರೆ. ಈಗ ಮಳೆಯ ಅಭಾವದಿಂದ ಈರೀತಿ ನೀರು ಪೋಲು ಮಾಡುವದನ್ನು ಸಾರ್ವಜನಿಕರು ಬಿಡಬೇಕು ಹಾಗೂ ನೀರಿನ ಮಿತ ಬಳಕೆಯನ್ನು ಮಾಡಬೇಕೆಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.

loading...

LEAVE A REPLY

Please enter your comment!
Please enter your name here