ಬೆಳಗಾವಿಯಲ್ಲಿ ಸೈನ್ಯ ಭರ್ತಿ ಆರಂಭ

0
62

ಬೆಳಗಾವಿ:ಸೆಪ್ಟೆಂಬರ್, 15: ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಹಾಗೂ ಹೆಡ್ಕ್ವಾರ್ಟರ್ಸ್ ರಿಕ್ರೂಟಿಂಗ್ ಝೇನ್ ಬೆಂಗಳೂರು ಇವರ ವತಿಯಿಂದ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ಬರುವ ಸೆಪ್ಟೆಂಬರ್ 14 ರಿಂದ 21 ರವರೆಗೆ ಬೆಳಗಾವಿಯ ರಾಷ್ಟ್ತ್ರೀಯ ಮಿಲಟರಿ ಶಾಲೆಯಲ್ಲಿ ಭೂ ಸೈನ್ಯ ಭರ್ತಿ ರ್ಯಾಲಿ ಪ್ರಾರಂಭವಾಗಿದೆ.

ಸೆಪ್ಟೆಂಬರ್ 14 ರಂದು ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಕ್ಲರ್ಕ್/ಸ್ಟೌರ ಕೀಪರ್ ಟೆಕ್ನಿಕಲ್ ಹಾಗೂ ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್ ಹುದ್ದೆಗೆ ಉತ್ತರ ಕರ್ನಾಟಕದ ಬಿಜಾಪೂರ, ಧಾರವಾಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ, ಚಿತ್ರದುರ್ಗ, ಗದಗ, ಹಾವೇರಿ, ಬಾಗಲಕೋಟ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ತುಮಕೂರ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪೂರ ಜಿಲ್ಲೆಗಳ ಅಭ್ಯರ್ಥಿಗಳ ನೇಮಕಾತಿ ರ್ಯಾಲಿ ನಡೆಯಲಿದೆ. ಅದರಂತೆ ಡಿಎಸ್ಸಿ ಯಲ್ಲಿ ನೇಮಕಾತಿಗೆ ಎಲ್ಲ ಜಿಲ್ಲೆಯ ಮಾಜಿ ಸೈನಿಕರ ನೇಮಕಾತಿ ಸಹ ನಡೆಯಲಿದೆ. ಈ ಹುದ್ದೆಗಳಿಗಾಗಿ ಪಿಯುಸಿ ಹಾಗೂ ಅದಕ್ಕೆ ಸಮನಾದ ಪರೀಕ್ಷೆಗಳಲ್ಲಿ ಕನಿಷ್ಠ ಶೇ. 40 ರಷ್ಟು ಪ್ರತಿ ವಿಷಯ ಹಾಗೂ ಒಟ್ಟು ಕನಿಷ್ಠ ಶೇ. 50 ರಷ್ಟು ಅಂಕ ಪಡೆದು ಪಾಸಾಗಿರಬೇಕು. ಇಂಗ್ಲೀಷ, ಗಣಿತ, ಅಕೌಂಟ್ಸ್ ಹಾಗೂ ಬುಕ್ ಕೀಪಿಂಗ್ಗಳಲ್ಲಿ ಕನಿಷ್ಠ ಶೇ. 40 ರಷ್ಟು ಅಂಕ ಪಡೆದಿರಬೇಕು.

ಸೆಪ್ಟೆಂಬರ್ 17 ರಿಂದ 20 ರವರೆಗೆ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ನೇಮಕಾತಿ ನಡೆಯಲಿದೆ. ಸೆಪ್ಟೆಂಬರ್ 17 ರಂದು ಬೆಳಗಾವಿ, ಖಾನಾಪೂರ, (ಬೆಳಿಗ್ಗೆ 8 ಗಂಟೆಗೆ ಮಾಜಿ ಸೈನಿಕರು ವರದಿ ಮಾಡಿಕೊಳ್ಳಬೇಕು. ಡಿಎಸ್ಸಿ ಹುದ್ದೆಗೆ ಮಾಜಿ ಸೈನಿಕರು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು). ಸೆಪ್ಟೆಂಬರ್ 18 ರಂದು ಗೋಕಾಕ ಹಾಗೂ ಸವದತ್ತಿ, ಸೆಪ್ಟೆಂಬರ್ 19 ರಂದು ಬೈಲಹೊಂಗಲ, ರಾಮದುರ್ಗ, ಚಿಕ್ಕೌಡಿ, ರಾಯಬಾಗ ಹಾಗೂ ಸೆಪ್ಟೆಂಬರ್ 20 ರಂದು ಬೀದರ, ಗುಲಬರ್ಗಾ, ರಾಯಚೂರ, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು 17ಳಿ  ಯಿಂದ 21 ವರ್ಷ ವಯೋಮಿತಿಯೊಳಗಿರಬೇಕು.

ಅಭ್ಯರ್ಥಿಗಳು ರ್ಯಾಲಿಗೆ ಆಯಾ ದಿನಾಂಕಗಳಂದು ಬೆಳಿಗ್ಗೆ 5 ಗಂಟೆಗೆ ನಿಗದಿತ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐಟಿಐ ಹಾಗೂ ಉನ್ನತ ಶಿಕ್ಷಣದ ಮೂಲ ಪ್ರಮಾಣ ಪತ್ರ ರ್ಯಾಲಿ ಸಂದರ್ಭದಲ್ಲಿ ತರಬೇಕು. 12 ಕಲರ ಪಾಸ್ಪೋರ್ಟ್ ಸೈಜಿನ ಇತ್ತೀಚಿನ ಭಾವಚಿತ್ರ ತರಬೇಕು. ರಹವಾಸಿ, ಜಾತಿ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ, ಮಾಜಿ ಸೈನಿಕರ ಮಕ್ಕಳಾದ್ದಲ್ಲಿ ಈ ಕುರಿತು ಪ್ರಮಾಣ ಪತ್ರ, ಎನ್.ಸಿ.ಸಿ. ಪ್ರಮಾಣ ಪತ್ರಗಳು, ಕ್ರೀಡಾ ಪ್ರಮಾಣ ಪತ್ರಗಳು ಹಾಗೂ ಎಲ್ಲ ಪ್ರಮಾಣ ಪತ್ರಗಳ 2 ಸೆಟ್ಟು ಝರಾಕ್ಸ್ ಪ್ರತಿಗಳು ಸೇರಿದಂತೆ ಇತರ ಅವಶ್ಯಕ ಪ್ರಮಾಣ ಪತ್ರ ತರಬೇಕು. ಡಿ.ಎಸ್.ಸಿ ಹುದ್ದೆಗೆ ಡಿಸ್ಚಾರ್ಜ್ ಬುಕ್ ಮೂಲ ಪ್ರತಿ (ಎರಡು ಸೆಟ್ಟು ಝೆರಾಕ್ಸ್) ಪ್ರತಿಯೊಂದಿಗೆ, 6 ಕಲರ ಫೋಟೋ, ಶೈಕ್ಷಣಿಕ ಹಾಗೂ ರಹವಾಸಿ, ಜಾತಿ ಪ್ರಮಾಣ ಪತ್ರ, ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಅದರಂತೆ ಲಿಖಿತ ಪರೀಕ್ಷೆ ದಿನಾಂಕವನ್ನು ರ್ಯಾಲಿ ಸ್ಥಳದಲ್ಲಿ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆರ್ಮಿ ರಿಕ್ರೂಟಿಂಗ್ ಆಫೀಸ್ ಬೆಳಗಾವಿ ದೂರವಾಣಿ ಸಂಖ್ಯೆ: 0831-2465550 ಮತ್ತು ಐ.ವಿ.ಆರ್.ಎಸ್. ನಂ. 080-25599290 ಗೆ ಬೆಳಿಗ್ಗೆ 7 ರಿಂದ ಸಂಜೆ 7-30 ಗಂಟೆಯವರೆಗೆ ಸಂಪರ್ಕಿಸಬೇಕು. ವೆಬ್ಸೈಟ್ ವಿಳಾಸ ತಿತಿತಿ.ದಡಿಠಚಿಟಿರಚಿಟಠಜ.ರಠ.ಟಿ ರಿಂದ ಪಡೆಯಬಹುದು.

loading...

LEAVE A REPLY

Please enter your comment!
Please enter your name here