ಕಾರ್ಯಕರ್ತರ ತರಬೇತಿ ಶಿಬಿರ

0
33

ಬೆಳಗಾವಿ: ಸೆಪ್ಟೆಂಬರ್:15: ನೆಹರು ಯುವ ಕೇಂದ್ರ ಬೆಳಗಾವಿ (ಯುವಕಾರ್ಯ  ಹಾಗೂ ಕ್ರೀಡಾ ಸಚಿವಾಲಯ), ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ನಾಗನೂರ ಶ್ರೀ. ಶಿವಬಸವೇಶ್ವರ ಟ್ರಸ್ಟ್, ದೇವರಾಜ ಅರಸ್ ಕಾಲನಿ ನಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ ಜಿಲ್ಲಾ ಮಟ್ಟದ 10 ದಿನಗಳ ಶಿರಾಷ್ಟ್ತ್ರೀಯ ಯುವ ಪಡೆ ಕಾರ್ಯಕರ್ತರ ತರಬೇತಿ ಶಿಬಿರಷಿವನ್ನು ಸೆಪ್ಟೆಂಬರ್ 16 ರಂದು ಬೆಳಗಾವಿ ದೇವರಾಜ ಅರಸ ಕಾಲನಿಯ ಶ್ರೀ. ನಾಗನೂರ ಶ್ರೀ ಶಿವಬಸವೇಶ್ವರ ಟ್ರಸ್ಟ್ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಈರಣ್ಣಾ ಕಡಾಡಿ ಈ ತರಬೇತಿ ಶಿಬಿರವನ್ನು ಉದ್ಘಾಟಿಸುವರು. ಬೆಳಗಾವಿ ಉತ್ತರ ಶಾಸಕ ಫಿರೋಜ ಶೇಠ ಅಧ್ಯಕ್ಷತೆವಹಿಸುವರು. ಬೆಳಗಾವಿ ಉಪ ಅರಣ್ಯ  ಸಂರಕ್ಷಣಾಧಿಕಾರಿ ಗೀರೀಶ ಹೊಸೂರ, ಬೆಳಗಾವಿ ಮಾಜಿ ಮಹಾಪೌರ ಶ್ರೀಮತಿ. ಪ್ರಶಾಂತಾ ಶಾಂತಿನಾಥ ಬುಡವಿ ಹಾಗೂ ಬೆಳಗಾವಿ ದೇವರಾಜ ಅರಸ ಕಾಲನಿಯ ಪ್ರಬಂಧಕ ಬಿ.ಎಸ್. ಸಸಾಲಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

 

loading...

LEAVE A REPLY

Please enter your comment!
Please enter your name here