ವಿದ್ಯಾರ್ಥಿಗಳ ಚಿತ್ತ ನೆಮ್ಮದಿ ಕೇಂದ್ರಗಳತ್ತ

0
28

ವಾಲ್ಮೀಕಿ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಬೆಳಗಾವಿ, 15- 2011-12 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದರಂತೆ ಸಮಿತಿಯ ಅಧ್ಯಕ್ಷರನ್ನಾಗಿ ಶಂಕರ್ ಪಿ. ಶಿರಗಣ್ಣವರ್, ಉಪಾಧ್ಯಕ್ಷರನ್ನಾಗಿ ಮಹಾದೇವ್ ಗುಡದೈಗೋಳ್, ಕಾರ್ಯದರ್ಶಿಯನ್ನಾಗಿ ಬಾಳಪ್ಪ ಕಾಳೇನಟ್ಟಿ, ಸಹಕಾರ್ಯದರ್ಶಿಯನ್ನಾಗಿ ಬಸ್ಸು ನಾಯಕ್, ಖಜಾಂಚಿಯನ್ನಾಗಿ ಎಸ್. ವಾಯ್.ನಾಯಕ್ ಹಾಗೂ ಗೌ.ಕಾರ್ಯದರ್ಶಿಯನ್ನಾಗಿ ಸಿ.ಗು.ಕುಸಗಲ್ಲ ಅವನ್ನು ಆಯ್ಕೆ ಮಾಡಲಾಯಿತು.

ಅದರಂತೆ ಮಾರುತಿ ಯ. ನಾಯಕ್, ಮಾರುತಿ ಬಿ. ನಾಯಕ್, ಭಾವಕಣ್ಣಾ ಬಂಗ್ಯಾಗೋಳ್, ಕರ್ಯಪ್ಪ ಹಾಲಭಾವಿ, ಸಂಜಯ್ ನಾಯಿಕ್, ಸಿದ್ದಪ್ಪ ಗುರವ್, ಭಾವಕಣ್ಣಾ ಜಡಗಿ, ನಿಂಗಪ್ಪಾ ನಾಯಕ್, ಪರಶರಾಮ ನಾಯಕ್, ಬಿ.ಆರ್.ಸರಸ್ವತಿ, ಭೋಮಾಣಿ ಬಸುರ್ತೇಕರ್ ಇವರನ್ನು ಸದಸ್ಯರನ್ನಾಗಿ ಆರಿಸಲಾಯಿತು. ಹಾಗೆಯೆ ಲಕ್ಕಪ್ಪ ಅಂಕಲಗಿ, ಬಿ.ಎಚ್.ನಾಯಕ್, ರಮೇಶ್ ನಾಯಕ್, ಅಡವೆಪ್ಪಾ ನಾಯಕ್, ಪ್ರಕಾಶ್ ಕಾಳೆನಟ್ಟಿ, ಪ್ರಕಾಶ್ ಅರಬಳ್ಳಿ ಇವರನ್ನು ಸಮಿತಿಯ ಸಲಹಾಗಾರರನ್ನಾಗಿ ನೇಮಕ ಮಾಡಲಾಯಿತು. ಸಭೆಯಲ್ಲಿ ವಾಲ್ಮೀಕಿ ಜಯಂತಿ ಉತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ವಾಲ್ಮೀಕಿ ಸೇನೆ, ಬೆಳಗಾವಿ ಜಿಲ್ಲೆ ಹಾಗೂ ವಾಲ್ಮೀಕಿ ಜಯಂತಿ ಉತ್ಸವ ಸಮಿತಿ, ವಾಲ್ಮೀಕಿ ಮಹಿಳಾ ಸಂಘಟನೆಗಳ ಮತ್ತು ವಾಲ್ಮೀಕಿ ಯುವಕ ಮಂಡಳದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 18.09.2011 ರಂದು ಬೆಳಗ್ಗೆ 11.00 ಗಂಟೆಗೆ ಶ್ರೀ ಜಾಲಗಾರ ಮಾರುತಿ ಮಂಗಳ ಕಾರ್ಯಾಲಯ, ಚವ್ಹಾಟ್ ಬೀದಿ, ಬೆಳಗಾವಿ ಇಲ್ಲೆ ಸಭೆ ಕರೆಯಲಾಗಿದೆ. ತಪ್ಪದೆ ಸಮಾಜದ ಎಲ್ಲ ಬಾಂಧವರು ಹಾಗೂ ಸಮಾಜದ ಹಿತಚಿಂತಕರು ಸಭೆಗೆ ಹಾಜರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ತಿಳಿಸಿರುತ್ತಾರೆ.

loading...

LEAVE A REPLY

Please enter your comment!
Please enter your name here