ರಾಗರಂಜಿನಿ- ಕನ್ನಡ ಗೀತೆಗಳ ಸ್ಪರ್ಧೆ

0
49

ಬೆಳಗಾವಿ, 15- ಬೆಳಗಾವಿಯ ಕನ್ನಡ ಮಹಿಳಾ ಸಂಘವು ತನ್ನ ಸಾಹಿತ್ಯ ಕಲಾ ವೇದಿಕೆಯ ಮೂಲಕ ಕನ್ನಡ ಗೀತೆಗಳ ಸ್ಪರ್ಧೆಯನ್ನು ಅಕ್ಟೌಬರ್ 23 ರಂದು ಬೆಳಗಾವಿಯ ಮರಾಠ ಮಂದಿರ್ನಲ್ಲಿ ಏರ್ಪಡಿಸುತ್ತಿದೆ. ಈ ಕಾರ್ಯಕ್ರಮದ ಪೂರ್ವದಲ್ಲಿ, ಭಾಗವಹಿಸುವ ಅಭ್ಯರ್ಥಿಯ ಸ್ವರ ಪರೀಕ್ಷೆ(ಚಿಣಜಣಠ) ಯನ್ನು ಅಕ್ಟೌಬರ್ 9 ರಂದು ಟಿಳಕವಾಡಿ ರಿಕ್ರಿಯೇಷನ್ ಕ್ಲಬ್, ಬುಧವಾರ ಪೇಟ್, ಟಿಳಕವಾಡಿ, ಬೆಳಗಾವಿ ಇಲ್ಲಿ ಬೆಳಗ್ಗೆ 9 ರಿಂದ 6 ಗಂಟೆಯವರೆಗೂ ನಡೆಸಲಾಗುತ್ತದೆ. 18 ವರ್ಷ ವಯೋಮಾನಕ್ಕೆ ಮೇಲ್ಪಟ್ಟ ಸ್ತ್ತ್ರೀ ಪುರುಷರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಆಸಕ್ತರು, ಅಕ್ಟೌಬರ್ 1 ನೇ ತಾರೀಖಿನೊಳಗಾಗಿ ತಮ್ಮ ಹೆಸರು, ವಿಳಾಸ, ವಯಸ್ಸುಗಳ ವಿವರಗಳನ್ನೊಳಗೊಂಡ ಅರ್ಜಿಯನ್ನು ರೂ. 100/- ಪ್ರವೇಶಧನದ ಡಿ.ಡಿ.ಯೊಂದಿಗೆ ಅಥವ ನಗದಿನೊಂದಿಗೆ, ಶಿರಂಜನಾ ನಾಯಿಕ್, ಕೇ/ಆ. ಪ್ರೊ. ಅರವಿಂದ್ ನಾಯಿಕ್, 16, ಲಿನಿಸರ್ಗಳಿ, ಯಶವಂತವಿಹಾರ, ನಾನಾವಾಡಿ, ಬೆಳಗಾವಿ 590009ಷಿ, ಶಿರಾಜಶ್ರೀ ಕೆಂಭಾವಿ, ಲಿನರಹರಿ ಕುಟೀರಳಿ, ಆರ್ಪಿಡಿ ಕಾಲೇಜ್ ರೋಡ್, ಟಿಳಕವಾಡಿ, ಬೆಳಗಾವಿ 590006ಷಿ ಅಥವಾ ಶಿರಾಧಾ ಬಾಗಲ್ಕೋಟ್, 655, ಲಿಜೇನುಗೂಡುಳಿ, ಸ್ವಾಮಿವಿವೇಕಾನಂದ ಕಾಲನಿ, ಕಾಂಗ್ರೆಸ್ ರೋಡ್, ಬೆಳಗಾವಿಷಿ ಈ ವಿಳಾಸಗಳಿಗೆ ಕಳಿಸಬೇಕು. ಡಿಡಿಯನ್ನು ಶಿಅಧ್ಯಕ್ಷರು, ಕನ್ನಡ ಮಹಿಳಾ ಸಂಘಷಿ ಈ ಹೆಸರಿನಲ್ಲಿ ಬರೆದು ಕಳಹಿಸಬೇಕು.

ಸ್ತ್ತ್ರೀ ಪುರುಷರಿಗೆ ಪ್ರತ್ಯೇಕವಾಗಿ ನಗದು ಬಹುಮಾನಗಳನ್ನು ಈ ನೀಡಲಾಗುತ್ತದೆ. ಪ್ರಥಮ ಬಹುಮಾನ ರೂ. 10,000/-, ದ್ವಿತೀಯ ಬಹುಮಾನ ರೂ. 7,000/- ಹಾಗೂ ತೃತೀಯ ಬಹುಮಾನ ರೂ. 5,000/- ನೀಡಲಾಗುತ್ತದೆ. ಅಲ್ಲದೆ ಇನ್ನೂ ಕೆಲವು ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here