ಸತ್ವ ಪರೀಕ್ಷೆಯಲ್ಲಿ ಸಿದ್ದು- ಪರಮೇಶ್ವರ

0
35

008  ರಲ್ಲಿ ರಾಜ್ಯದಲ್ಲಿ  ವಿಧಾನ ಸಭೆಗಾಗಿ  ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತ್ಯಧಿಕ ಸ್ಥಾನಗಳನ್ನು ಪಡೆದುಕೊಂಡು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರವನ್ನು ಅಸ್ತಿತ್ವಕ್ಕೆ ತಂದ ನಂತರ ನಮ್ಮ ರಾಜ್ಯದಲ್ಲಿ ಲೋಕಸಭೆಗೆ ಗ್ರಾಮ ಪಂಚಾಯರಿಗಳಿಗೆ ತಾ.ಪಂ. ಮತ್ತು ಜಿ.ಪಂ.ಗಳಿಗೆ ಮಹಾನಗರ ಸಭೆಗಳಿಗೆ ಎಪಿಎಂಸಿಗೆ ಚುನಾವಣೆ ನಡೆದಿವೆ. ಜೊತೆಗೆ ಆಪರೇಶನ ಕಮಲದ  ಕಾರಣದಿಂದ ಇದುವರೆಗೆ  14 ವಿಧಾನ ಸಭೆಯ ಉಪಚುನಾವಣೆ ನಡೆದಿದೆ. ಈ ಎಲ್ಲ ಚುನಾವಣೆಗಳಲ್ಲಿ  ಭಾರತೀಯ ಜನತಾ ಪಕ್ಷ  ಪ್ರಥಮ ಸ್ಥಾನದಲ್ಲಿ ಜಯಬೇರಿಯನ್ನು ಬಾರಿಸುತ್ತಾ ಬಂದಿದೆ.

ಆದರೆ ಕಾಂಗ್ರೆಸ್ ಪಕ್ಷ ಈ ಎಲ್ಲ ಚುನಾವಣೆಗಳಲ್ಲಿ ಅತ್ಯಂತ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್ ಪಕ್ಷಕ್ಕಿಂತ ಸಣ್ಣ ಪಕ್ಷವಾದ ಜೆಡಿಎಸ್  ಭಾರತೀಯ ಜನತಾ ಪಕ್ಷದ ನಂತರ ಎರಡನೇ ಸ್ಥಾನದ ಸಾಧನೆಯನ್ನು ಮಾಡಿದ್ದರೂ ದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷಕ್ಕಿಂತಲೂ ಕಡಿಮೆ ಪ್ರಮಾಣದ ಸಾಧನೆ ಮಾಡಿ ಹೀನಾಯ ಸ್ಥಿತಿಯನ್ನು ಅನುಭವಿಸಿದೆ. ಇಂದಿರಾ ಗಾಂಧಿ ರಾಜೀವಗಾಂಧಿ ಇದ್ದಾಗ ಕರ್ನಾಟಕ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಈಗ ಸೋನಿಯಾ ಗಾಂಧಿ ಹಾಗೂ ಯುವರಾಜ, ರಾಹುಲ್ ಗಾಂಧಿ ಆಡಳಿತದಲ್ಲಿ ಆ ಕೋಟೆ ಒಡೆದು ಹೋಗಿ ಅತ್ಯಂತ ಹೀನಾಯವಾದ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷ  ಈ ರಾಜ್ಯದಲ್ಲಿ ಅನುಭವಿಸತೊಗಿದೆ. ಇದು  ಸೋನಿಯಾ ಗಾಂಧಿ ಹಾಗೂ ರಾಹುಲ ಗಾಂಧಿಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ ಈಗ ಕೊಪ್ಪಳ ವಿಧಾನ ಸಭಾಕ್ಷೇತ್ರದಲ್ಲಿ  ಇದೇ 36 ರಂದು ವಿಧಾನ ಸಭಾ ಸ್ಥಾನದ ಉಪ ಚುನಾವಣೆ  ನಡೆಯುತ್ತದೆ.  ಈಗ ಭಾಜಪ  ಅನೇಕ ರೀತಿಯ ಸಂಕಷ್ಟ ಗಳನ್ನು ಎದಿರಿಸುತ್ತಿರುವುದರಿಂದ ಅದರ ಲಾಭ ಪಡೆದು ರಜ್ಯ ಕಾಂಗ್ರೆಸ್ ನಾಯಕರಾದ  ಜಿ. ಪರಮೇಶ್ವರ ಹಾಗೂ ಸಿದ್ದರಾಮಯ್ಯನವರು ಕೊಪ್ಪಳ ಕ್ಷೇತ್ರದಲ್ಲಿ ಪಕ್ಷಕ್ಕೆ ಜಯವನ್ನು ತಂದು ಕೊಟಬೇಕು,  ಎಂದು ಸೋನಿಯಾ ಗಾಂಧಿಯವರು ಕಟ್ಟು ನಿಟ್ಟಾದ ಆದೇಶವನ್ನು ನೀಡಿರುವುದರಿಂದ  ಉಭಯ ನಾಯಕರಾದ ಪರಮೇಶ್ವರ ಹಾಗೂ ಸಿದ್ದರಾಮಯ್ಯ ಈಗ ನಡೆಯುತ್ತಿರುವ  ಕೊಪ್ಪಳ  ಉಪ ಚುನಾವಣೆಯಲ್ಲಿ  ತಮ್ಮ ಪಕ್ಷದ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರನ್ನು  ಗೆಲ್ಲಿಸಬೇಕಾದ ಅನಿವಾರ್ಯತೆಯನ್ನು ಎದುರಿಸ ತೊಡಗಿದ್ದಾರೆ.

ಅಕ್ರಮ ಗಣಿಗಾರಿಕೆ  ಹಾಗೂ ಅನೇಕ ಹಗರಣಗಳ ಕಾರಣದಿಂದ ಯಡಿಯೂರಪ್ಪ ತಮ್ಮ ಮುಖ್ಯ ಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಅನೇಕ ಪ್ರಕರಣಗಳ ಕಾರಣದಿಂದ ನ್ಯಾಯಾಲಯಗಳಿಗೆ ಅಲೆದಾಡತೊಡಗಿದ್ದಾರೆ.  ಜೊತೆಗೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಜೈಲು ಪಾಲಾಗಿದ್ದರೆ ಮತ್ತೊಬ್ಬ ಮಾಜಿ ಸಚಿವ ಜನಾರ್ಧನ ರೆಡ್ಡಿ ಅದೇ ರೀತಿಯ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಅಲ್ಲದೆ ಶ್ರೀರಾಮಲು  ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಭಾರತೀಯ ಜನತಾ ಪಕ್ಷದಲ್ಲಿ ಈಶ್ವರಪ್ಪ  ಹಾಗೂ ಯಡಿಯೂರಪ್ಪ ಎಂಬ ಎರಡು ಬಣಗಳು ಆಗಿರುವುದು ಸ್ಪಷ್ಟವಾಗಿ ಕಾಣತೊಡಗಿದೆ. ಅಲ್ಲದೆ ಕೊಪ್ಪಳ ಕ್ಷೇತ್ರದಲ್ಲಿ ಪ್ರಚಾರ ಆರಂಭವಾಗಿ  ಅನೇಕ ದಿನ ಕಳೆದರೂ ಸಹ ಈಶ್ವರಪ್ಪ ಬಣದವರು ಪ್ರಚಾರದ ಕಣಕ್ಕೆ ಹೋಗಿರುವುದಿಲ್ಲ ಈ ಎಲ್ಲ ಕಾರಣಗಳು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿ ಪರಿನಮಿಸಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಸಹ ಈಗ ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡು ಅವರೂ ಸಹ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದಾರೆ, ಇದೂ ಸಹ  ಕಾಂಗ್ರೆಸ್ ಪಕ್ಷಕ್ಕೆವರದಾನವಾಗಿ  ಪರಣಮಿಸಿದೆ.  ಈ ಎರಡೂ ಪಕ್ಷಗಳ ಆಂತರಿಕ ಸಮಸ್ಯೆಗಳನ್ನು  ತಮ್ಮ ಪಕ್ಷದ ಯಶಕ್ಕಾಗಿ  ಗೆಲುವಿನ ಸೋಪಾಗಳನ್ನಾಗಿ ಉಪಯೋಗಿಸಿಕೊಂಡು  ಪಕ್ಷಕ್ಕೆ ಗೆಲವು ತಂದು ಕೊಡಬೇಕು. ಎಂಬುದು ಕಾಂಗ್ರೆಸ್ ವರಿಷ್ಠ ನಾಯಕರ ಬಯಕೆಯಾಗಿದೆ.  ಹೀಗಾಗಿ ಈ ಚುನಾವಣೆಯಲ್ಲಿ  ಪಕ್ಷವನ್ನು ಗೆಲ್ಲಿಸಲೇಬೇಕಾದ ಅನಿವಾ ರ್ಯತೆ  ಈಗ ಸಿದ್ದರಾಮಯ್ಯ ಹಾಗೂ  ಜಿ ಪರಮೇಶ್ವರ ಅವರ ಮುಂದೆ ಇದೆ.                      ಆದರೆ ಕಾಂಗ್ರೆಸ್ ಪಕ್ಷದಲ್ಲಿಯೂ ಎಲ್ಲ ನಾಯಕರು ಒಂದಾಗಿರುವುದಿಲ್ಲ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸೆ ಬಂದ ಕಾಂಗ್ರೆಸಿಗರು ಎಂಬ ಎರಡು ದೊಡ್ಡ ಬಣಗಳು  ಇವೆ ಅಷ್ಟೇ ಅಲ್ಲ ಪರಮೇಶ್ವರ ಗುಂಪು  ಸಿದ್ರಾಮಯ್ಯ ಗುಂಪು ಮಲ್ಲಿಕಾರ್ಜುನ ಖರ್ಗೆ ಗುಂಪು ಎಸ್. ಎಂ. ಕೃಷ್ಣಾ ಗುಂಪು ಇವೆ.  ಈ ಎಲ್ಲ ಗುಂಪುಗಳು  ನಾಯಕರು ಮತ್ತೊಂದು ಗುಂಪಿನ ನಾಯಕರ ಕಾಲು ಜಗಹಗುವ ಕಾರ್ಯವನ್ನು ತೆರೆಯ ಮರೆಯಲ್ಲಿ ಮಾಡುತ್ತಲೆ  ಬಂದಿದ್ದರು . ನಮ್ಮ  ಪಕ್ಷ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಬಾರದು ಎಂದು ಅನೇಕರು  ಬಯಸುತ್ತಿದ್ದಾರೆ.

ಇದುವರೆಗೆ ತೆರೆಯ ಮರೆಯಲ್ಲಿ ಇದ್ದ ಜಿ. ಪರಮೇಶ್ವರ ವರಿಷ್ಠರ ಕೃಪೆಯಿಂದ ಏಕಾಏಕಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿರುವ ಈ ಸಮಯದಲ್ಲಿ ಅವರು ಮುಂದೆ  ಮುಖ್ಯ ಮಂತ್ರಿಯ ಸ್ಥಾನಕ್ಕೆ ಸ್ಪರ್ಧಿಯಾಗಬಾರದು ಎಂಬ ಉದ್ದೇಶದಿಂದ ಅವರ ಕಾಲು ಜಗ್ಗುವ ಕಾರ್ಯ ನಡೆಯುತ್ತಿದೆ.  ಮಲ್ಲಿಕಾರ್ಜುನ ಖರ್ಗೆ  ಹಾಗೂ  ಎಸ್. ಎಂ. ಕೃಷ್ಣ ಸಧ್ಯಕ್ಕೆ ಕೇಂದ್ರದಲ್ಲಿ ಅಚಿವ ಸ್ಥಾನ ಇದ್ದರೂ ಸಹ  ಅವರ ಕಣ್ಣು ಮಾತ್ರ  ಸದಾಕಾಲ ರಾಜ್ಯ ರಾಜಕೀಯದ ಂಏಲೆ ಇರುವುದನ್ನು ನಾವು ಕಾಣಬಹುದಾಗಿದೆ. ಹೀಗಾಗಿ ಅವರು ದೆಹಲಿಯಲ್ಲಿ ಇದ್ದರೂ ಸಹ ತಮ್ಮ ಬೆಂಬಲಿಗರ ಪಡೆಯ ಮೂಲಕ ರಾಜ್ಯ ರಾಜಕೀಯದಲ್ಲಿ ತಮ್ಮ ಚೆಲ್ಲಾಟವನ್ನು ಆಡುತ್ತಲೇ ಬರುತ್ತಿದ್ದಾರೆ.

ಈಗ ಕೊಪ್ಪಳ ಉಪಚನಾವಣೆಯಲ್ಲಿ ಗೆಲವು ಪಡೆಯಬೇಕಾದರೆ ಈ ಎಲ್ಲ ಗುಂಪಿನ ನಾಯಕರು ಒಂದಾಗಿ ಹೋರಾಟವನ್ನು ನಡೆಸಬೇಕಾಗುತ್ತದೆ. ಆದರೆ ಎಲ್ಲ ಗುಂಪುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಸಾಮರ್ಥ್ಯ ಪರಮೇಶ್ವರ ಹಾಗೂ ಸಿದ್ದರಾಮಯ್ಯನವರಿಗೆ ಎಷ್ಟರ ಮಟ್ಟಿಗೆ ಇದೆ ಎಂಬುದರ ಮೇಲೆ ಪಕ್ಷದ ಜಯ ಅವಲಂಬನೆಗೊಂಡಿರುವುದನ್ನು ನಾವು ಕಾನಬಹುದಾಗಿದೆ. ಆದರೆ ಇದುವರೆಗೆ ಗುಂಪುಗಳ ನಡುವೆ ಸಾಮರಸ್ಯ ಸಾಧಿಸುವ ಕಾರ್ಯ ನಡೆಯುತ್ತಿರು ವುದು ಸ್ಪಷ್ಟವಾಗಿ ಕಂಡು ಬರುತ್ತಿಲ್ಲ ಆದ್ದರಿಂದ ಈ ಚುನಾವಣೆಯಲ್ಲಿ ಈ ನಾಯಕರು ಎಷ್ಟರ ಮಟ್ಟಿಗೆ  ಪ್ರಯತ್ನ ಮಾಡಿ ತಮ್ಮ ಪಕ್ಷಕ್ಕೆ ಜಯ ತಂದು ಕೊಡುತ್ತಾರೆ. ಎಂಬುದನ್ನು ನಿಖರವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಬಾಜಪ ಮತ್ತು ಜೆಡಿಎಸ್ ಈಗ ಅನುಭವಿಸುತ್ತಿರುವ ಕಳವಳಕರವಾದ ಪರಿಸ್ಥಿತಿಯನ್ನು ಕಾಂಗ್ರೆಸ್ ನಾಯಕರು ತಮ್ಮ ಗೆಲುವಿಗಾಗಿ ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ ಎಂಬುದು ಸಹ ನಿಖರವಾಗಿ ಗೊತ್ತಾಗದ ಸಂಗತಿಯಾಗಿದೆ. ಒಂದು ವೇಳೆ ಕೊಪ್ಪಳ ಚುನಾವಣೆಯಲ್ಲಿಯೂ ಈ ಪಕ್ಷ ಜಯ ಗಳಿಸುವುದರಲ್ಲಿ  ವಿಫಲವಾದರೆ  ವರಿಷ್ಠರ ಕೆಂಗಣ್ಣಿಗೆ ರಾಜ್ಯ ನಾಯಕರು ಗುರಿಯಾಗ ಬೇಕಾಗುತ್ತದೆ. ಜೊತೆಗೆ ವರಿಷ್ಠರು ಈ ರಾಜ್ಯ ನಾಯಕರ ಮೇಲೆ ಯಾವುದೇ ರೀತಿಯ ಭರವಸೆಯನ್ನು ಇಡದಂತೆ ಆಗುತ್ತದೆ.

ಆದ್ದರಿಂದ ಈ ಉಪಚುನಾ ವಣೆಯ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿರುವುದನ್ನು ನಾವು ಈ ಸಂದರ್ಭದಲ್ಲಿ ನೋಡಬಹುದಾಗಿದೆ.  ಒಟ್ಟೊನಲ್ಲಿ ಈ ಚುನಾವಣೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪ ಆಗಿರುವುದನ್ನು ನಾವು ನೋಡಬಹು ದಾಗಿರುವುದು ಮಾತ್ರ ಸತ್ಯ ಸಂಗತಿಯಾಗಿದೆ.

loading...

LEAVE A REPLY

Please enter your comment!
Please enter your name here