ಚಕ್ರವ್ಯೂಹದಲ್ಲಿ ರೆಡ್ಡಿ

0
43

ಕುರುಕ್ಷೇತ್ರ ಯುದ್ಧದಲ್ಲಿ ಏಕಾಂಗಿಯಾಗಿ ಸಮರ ಮಾಡಲು ಚಕ್ರವ್ಯೂಹ ಕೋಟೆಯಲ್ಲಿ  ನುಗಿದ್ದು ಅಭಿಮನ್ಯು ಹೊರಗೆ ಬರಲು ದಾರಿ ಗೊತ್ತಾಗದೆ ವಿಲವಿಲನೆ ಒದ್ದಾಡಿದಂತೆ ಈಗ ಬಳ್ಳಾರಿ ಗಣಿ ದೊರೆ ಜನಾರ್ಧನ ರೆಡ್ಡಿ ಅವರ ಸ್ಥಿತಿಯಾಗಿದೆ. ಒಂದು ಕಡೆಗೆ ಸಿಬಿಐ ಅಧಿಕಾರಿಗಳ ಪ್ರಶ್ನೆಗಳ ಬಾಣಗಳು ಒಂದರ ಹಿಂದೆ ಒಂದರಂತೆ ಬಂದು ಘಾಶಿಗೋಳಿಸುತ್ತಿರುವ ಸಂದರ್ಭದಲ್ಲಿಯೇ ಬಳ್ಳಾರಿಯಿಂದ ಹೈದ್ರಾಬಾದಕ್ಕೆ  ಸಾಗಿಸುತ್ತಿದ್ದ 4.95 ಕೋಟಿ  ರೂಪಾಯಿ ಹಣ ಪತ್ತೆಯಾಗಿರುವುದು ಹಾಗೂ ರೆಡ್ಡಿ ಆಪ್ತರ ಮುಂದೆ  ಸಿಬಿಐ ಅಧಿಖಾರಿಗಳು ಕಣ್ಣು ಹಾಕಿರುವುದು ಜೊತೆಗೆ ಸಿಬಿಐ ಮಾತ್ರವಲ್ಲ  ಕೇಂದ್ರ ತನಿಖಾ ಜಾರಿ ದಳ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿರುವುದು ಹಾಗೂ ರೆಡ್ಡಿ ಮೇಲೆ ಕಠಿಣ ಪ್ರಕರಣ ದಾಖಲಿಸುವ ಸಾಧ್ಯತೆ ಇರುವುದು ರೆಡ್ಡಿ ಸಂಪಾದಿಸಿದ  ಎಲ್ಲ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಭಯ ಆವರಿಸಿರುವುದು ಜೊತೆಗೆ  ಸಿಬಿಐ ಅಧಿಕಾರಿಗಳು ಕನಿಷ್ಠ ಸೌಲಭ್ಯ ನೀಡದೆ ಅವರನ್ನು ಇಲಿ ಹೆಗ್ಗಣದ ರೂಪಿನಲ್ಲಿ ಕೂಡಿ ಹಾಕಿ ತೊಂದರೆ ಕೊಡುವದನ್ನು ನೋಡಿದರೆ  ನಿಜವಾಗಿಯೂ ಜನರ್ಧನ ರೆಡ್ಡಿ ಚಕ್ರವ್ಯೂಹದಲ್ಲಿ  ಸಿಲುಕಿ ಕೊಂಡಿರುವುದು ಸ್ಪಷ್ಟವಾಗಿ ಕಂಡು ಬರತೊಡಗಿದೆ.

ನ್ಯಾಯಾಲಯದ  ಆದೇಶದಂತೆ ಜನಾರ್ಧನ ರೆಡ್ಡಿ ಬಾಯಿ ಬಿಡಿಸಲು ಸಿಬಿಐ ಅಧಿಕಾರಿಗಳು ಅವರ ಮೇಲೆ ಯಾವುದೇ ಬಲ ಪ್ರಯೋಗ ಮಾಡುವಂತಿಲ್ಲ. ಅವರ ದೇಹ ಮುಟ್ಟಿ ಹೊಡೆಯುವಂತಿಲ್ಲ ಆದ್ದರಿಂದ ಸಿಬಿಐ ಅಧಿಕಾರಿಗಳು ಹೊಸ ಮಾರ್ಗವನ್ನು ಹುಡುಕಿದ್ದಾರೆ. ಕನಿಷ್ಠ ಸೌಲಭ್ಯ ಇಲ್ಲದ ಇಲಿ  ಹೆಗ್ಗಣ  ತಗಣಿಯ ರೂಮಿನಲ್ಲಿ ಕೂಡಿ ಹಾಕಿದರೆ ಈ ನರಕ ವಾಸದಿಂದ ತಪ್ಪಿಸಿಕೊಳ್ಳಲು  ಜನಾರ್ಧನ ರೆಡ್ಡಿ ತಾವೇ ಬಾಯಿ ಬಿಟ್ಟು ಸತ್ಯ ಹೇಳಬಹುದು ಎಮಬ ಕಾರಣದಿಂದ  ಸಿಬಿಐ ಅಧಿಕಾರಿಗಳು ಈ ರೀತಿ ಮಾಡುತ್ತಿರಬಹುದು ಎಂದು ತರ್ಕಿಸಲಾಗಿದೆ.

ಆರಂಭದಲ್ಲಿ ಪೋಲಿಸನ ಮಗನಾಗಿ ಹುಟ್ಟಿ ಸಾಮಾನ್ಯರಂತೆ ಬಾಲ್ಯ ಜೀವನವನ್ನು ನಡೆಸಿದ ಜನಾರ್ಧನ ರೆಡ್ಡಿ ತನ್ನ ಸ್ವಂತ ಪ್ರಯತ್ನದಿಂದ  ಗಣಿಗಾರಿಕೆ ಆರಂಭಿಸಿ ಲೆಕ್ಕವಿಲ್ಲದಷ್ಟು  ಹಣವನ್ನು ಗಳಿಸಿ ಅನೇಕ ವರ್ಷಗಳಿಂದ ರಾಜವೈಭವದಲ್ಲಿ ತಮ್ಮ ಬದುಕನ್ನು ಸಾಗಿಸುತ್ತಾ ಬಂದಿದ್ದಾರೆ. ಜೊತೆಗೆ ಹಣ ಮತ್ತು ಅಧಿಕಾರದ ಬಲದಿಂದ ತಮ್ಮದೇ ಆದ ಸಮ್ರಾಜ್ಯವನ್ನು ಸ್ಥಾಪಿಸಿಕೊಂಡು ಅದರ ರಾಜರಾಗಿ ಮೆರೆಯುತ್ತಾ ಬಂದಿದ್ದರು. ಏಕಾಏಕಿಯಾಗಿ ಈಗ ಅವರು ಸಾಮಾನ್ಯ ಖೈದಿಯಂತೆ ಜೀವನವನ್ನು  ನಡೆಸುತ್ತಾ ಈಗ ಕಾಲವನ್ನು ನೂಕಬೇಕಾಗಿರುವುದು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಅವರು ನೀರಿನಿಂದ ಹೊರಗೆ ತೆಗೆದ ಮೀನಿನಂತೆ ವಿಲಿ ವಿಲಿ ಒದ್ದಾಡತೊಡಗಿದ್ದಾರೆ. ಸ್ನಾನ ಮಾಡಬೇಕಾದರೆ ತಮ್ಮ ನೀರಿನ ಬಕೆಟನ್ನು ತಾವೇ  ಎತ್ತಿಕೊಂಡು ಮರದ ಕೆಳಗೆ ಹೋಗಿ ಕಲ್ಲಿನ ಮೇಲೆ ನಿಂತು ಸ್ನಾನ ಮಾಡಬೇಕು. ಬಿಸಿ ನೀರು ಇಲ್ಲದೆ ತಣ್ಣೀರಿನಲ್ಲಿಯೇ ಸ್ನಾನ ಮಾಡಬೇಕು ಚಿನ್ನ ಹಾಗೂ ಬೆಳ್ಳಿಯ ತಟ್ಟೆಗಳಲ್ಲಿ ತಮಗೆ ಬೇಕಾದ ಊಟ ಹಾಗೂ ಉಪಹಾರ ಮಾಡಿಸಿಕೊಂಡು ಡೈನಿಂಗ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದ ಉಪಹಾರ ಸೇವಿಸುತ್ತಿದ್ದ ಅವರು  ಅಲ್ಯುಮಿನಿಯಂ ತಟ್ಟೆ ಹಿಡಿದುಕೊಂಡು ಸರತಿಯ ಸಾಲಿನಲ್ಲಿ ನಿಂತು ಅವರು ನೀಡುವ ಉಪಹಾರ ಹಾಗೂ ಊಟ  ಪಡೆದು ಉಪಹಾರ ಮತ್ತು  ಊಟ ಮಾಡಿ ತಮ್ಮ ತಟ್ಟೆ ಲೋಟಾಗಳನ್ನು ತಾವೇ ತೊಳೆದು ಇಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ.  ಆಳೆತ್ತರದ ಡೆನ್ಲಪ್ ಗಾದಿಯ ಮೇಲೆ ಮಲಗುತ್ತಿದ್ದ ಜನಾರ್ಧನ ರೆಡ್ಡ ಕೇವಲ ಒಂದು ಚಾಪೆ ಹಾಸಿಕೊಂಡು ಒಂದು ದಿಂಬು ಇಟ್ಟುಕೊಂಡು ಮಲಗಬೇಕಾಗಿದೆ. ಜೊತೆಗೆ ತಮ್ಮ ಬಟ್ಟೆಗಳನ್ನು ತಾವೇ ಸ್ವಚ್ಛ ಮಾಡಿಕೊಳ್ಳಬೇಕಾಗಿದೆ

ಹೀಗಾಗಿ ಅವರು ಈ ಚಕ್ರವ್ಯೂಹದಿಂದ ಯಾವಾಗ ಪಾರಗುತ್ತೇನೆ ಎಂದು ಹಂಬಲಿಸುವಂತೆ ಆಗಿರುವುದನ್ನು ನಾವು ನೋಡಬಹುದು.

 

loading...

LEAVE A REPLY

Please enter your comment!
Please enter your name here