ನಟ ದರ್ಶನನಿಗೆ ಜೇಲಿನ ದರ್ಶನವಾಯಿತು

0
61

ಅತೀ  ಸಣ್ಣ ವಯಸ್ಸಿನಲ್ಲಿ  ಸೂರ್ಯ ಚಂದ್ರರಂತೆ  ತಮ್ಮ ಕಲೆಯಿಂದ  ಪ್ರಕಾಶವನ್ನು ಕೊಟ್ಟ  ದರ್ಶನ ಈವತ್ತು  ಅದ್ರಶ್ಯನಾಗಿ ಬಿಟ್ಟರು. ಅತೀ ದುಃಖದ ಸಂಗತಿ  ಸಪ್ತಪದಿಯನ್ನು ತುಳಿದು ದಾಂಪತ್ಯ  ಜೀವನವನ್ನು ಪ್ರಾರಂಭ ಮಾಡಿದ  ದರ್ಶನ  ತಮ್ಮ ಕುಡಿತದ ಅಮಲಿನಲ್ಲಿ ಹೀನವಾದ ಕೃತ್ಯವನ್ನು ಮಾಡಿ ಇಡೀ ಕರ್ನಾಟಕದ  ಆರೂವರೀಕೋಟಿ  ಜನರಿಗೆಲ್ಲ ಇಡೀ ಭಾರಕ್ಕೆ ನಾನು ಏನು ಎಂಬುದನ್ನು  ತೋರಿಸಿ ಕೊಟ್ಟಿರಿ  ಅದೂ ನಿಸಹಾಯ ಹೆಣ್ಣು ಮಗಳಿಗೆ ಹೊಡೆಯುವದು ಒಡೆಯುವದು  ಮಾಡುವದರಿಂದ ನೀವು  ಏನು ಸಾಧಿಸಿದಂತೆ ಆಯಿತು.  ಇದು ನಿಮ್ಮ ಪೌರುಷವೇ ನೀವೊಬ್ಬ ಅಪ್ರತಿಮ ಕಲಾವಂತನೆಂದು  ತಿಳಿದು ನಿಮ್ಮ ಹಿಂದೆ ಅಭಿಮಾನಿಗಳು  ಬೆನ್ನು ಹತ್ತಿದ್ದಾರೆ.  ಇಲ್ಲವಾದರೆ ನೀವೊಬ್ಬ  ಸಾಮಾನ್ಯ ಪ್ರಜೆಯಾಗಿ ಈ ಕೆಲಸ ಮಾಡಿದ್ದರೆ  ಇಡೀ ಸಮಾಜವೇ ನಿಮಗೆ ಬತ್ತಲೆ ಮಾಡಿ ಚಪ್ಪಲಿಯಿಂದ  ಹೊಡೆಯುತ್ತಿದ್ದರು.  ಹುಚ್ಚು ಸಮಾಜ ನಿಮ್ಮ ಕಡೆಗೆ  ತಪ್ಪು ಇದ್ದರೂ ಕೂಡಾ ನಿಮ್ಮ ಅಭಿಮಾನಿಗಳು ಬೆನ್ನು ಹತ್ತಿದ್ದಾರೆ. ಅಂದರೆ  ನಾಚಿಗೇಡಿತನ ಅನಿಸುತ್ತದೆ. ನೀವು  ಬಹಳಷ್ಟು  ತಪ್ಪು ಮಾಡಿದಿರಿ ಇನ್ನು  ಮುಂದೆ ಆದರೂ ಇಂತಹ  ತಪ್ಪು ಕೆಲಸವನ್ನು ಕನಸಿನಲ್ಲಿಯೂ  ಮಾಡಬೇಡಿ  ನಿಮ್ಮ ಧರ್ಮ  ಪತ್ನಿಗೆ  ಕ್ಷಮೆ  ಕೇಳಿ  ನೀವು ತಪ್ಪು  ಮಾಡಿದರೂ ಕೂಡಾ ಜನಾ ನಿಮ್ಮ ಬೆನ್ನು ಹತ್ತಿದೆ. ಅಂದ ಬಳಿಕಾ ಇದು  ಒಂದು ತರಹದ ಭ್ರಷ್ಟಾಚಾರ ಮಾಡಿ  ನಿಮ್ಮ ಕಲೆಯನ್ನು  ದುರುಪಯೋಗ ಮಾಡಿಕೊಳ್ಳಬೇಡಿ ಧರ್ಮೋ ರಕ್ಷತಿ ರಕ್ಷಿತಹ ಅಧರ್ಮಕ್ಕೆ ಆಸ್ಪದಕೊಡಬೇಡಿ  ನೀವು ಒಬ್ಬ  ನಟನಾಗಿರುವದರಿಂದ  ನಿಮ್ಮ ಹಿಂದೆ ಸಾವಿರಾರು  ಹೆಣ್ನು ಮಕ್ಕಳು ಬೆನ್ನ ಹತ್ತಬಹುದು. ಅವರ್ಯಾರೂ ನಿಮ್ಮ ಹೆಂಡತಿ ಆಗುವದಿಲ್ಲ. ಅವರನ್ನು ನೀವು ತಾಯಿ ಸಮಾನ  ತಿಳಿದು ಕೊಳ್ಳಬೇಕು. ಇದು ಧರ್ಮ ಮೊದಲು ಮಧ್ಯಪಾನದ ಅಭ್ಯಾಸ ನಿಮಗೆ  ಇದ್ದರೆ ಅದನ್ನು ಬಿಡಿ 24 ಘಂಟೆಯೂ ಮಾಧ್ಯವರಿಂದ  ನಿಮ್ಮದೇ ಮಾತು ಪಬ್ಬ ಸಚಿವ  ಜನಾರ್ಧನ ರೆಡ್ಡಿ ಯವರ ಪರಿಸ್ಥಿತಿ ಏನು ಆಗಿದೆ.  ತಿಳಿದು ಕೊಳ್ಳಿ ಕಟ್ಟ ಸುಬ್ರಮಣ್ಯಮ್ ಇವರ ಪರಿಸ್ಥಿತಿ  ತಿಳಿದು ಕೊಳ್ಳಿ ಈ ಹೀನವಾದ ಕೃತ್ಯವನ್ನು  ಪರದೆಯ ಮೇಲೆ  ತೋರಿಸಬೇಕು.  ಪ್ರತ್ಯಕ್ಷವಾಗಿ ಅಲ್ಲ ನಿಮ್ಮ  ಕಲೆಗೆ ಚ್ಯುತಿ  ತರಬೇಡಿ ಆಗಿದ್ದು ಆಗಿ ಹೋಯಿತು.  ಒಂದು ಚಿಕ್ಕ ಮಗು 3 ವರ್ಷದಬಾಲಕಿ ಎಷ್ಟು ನಿಮ್ಮ ಮೇಲೆ ಅಭಿಮಾನ ಇಟ್ಟಿದ್ದಾಳೆ. ಅಂದ  ಬಳಿಕ ನೀವು ಒಂದು ಸಣ್ಣ ಕೆಲಸಕ್ಕೆ ಹಾಕಿ ಯಾಕೆ  ಸಣ್ಣವರಾದಿರಿ?  ಇನ್ನೂ ನಿಮಗೆ ಬೇಕಾದಷ್ಟು ಅವಕಾಶವಿದೆ. ನಿಮ್ಮ ದರ್ಶನದಿಂದ  ಜನರು ಪಾವನರಾಗಬೇಕು. ಆದರೆ  ನಿಮ್ಮಿಂದ ತಲೆ ಕೆಳಗೆ ಆಗುವಂತೆ  ಆಗಬಾರದು  ನಿಮ್ಮಲ್ಲಿ  ಕಲೆ ಇದೆ.  ಹಣವಿದೆ. ದೊಡ್ಡವರ ಬೆಂಬಲವಿದೆ.  ಬಚಾವ ಆದರಿ, ನಮ್ಮಂಥಾ  ಸಾದಾ ಮನುಷ್ಯ ನಿಮ್ಮ ಹಾಗೆ  ಕಿರುಕಳ ಮಾಡಿದ್ದಾರೆ, ನಾನಂತೂ  ಸತ್ತೇ ಹೋಗುತ್ತಿದ್ದೆ ಪೋಲಿಸರ ಬಡಿತಕ್ಕೆ ನಾನೇನು  ಬದುಕುತ್ತಿರಲಿಲ್ಲ.  ನಿಮ್ಮನ್ನು ಆ  ಕಲಾದೇವತೆ ಕಾಪಾಡಿದ್ದಾಳೆ.  ಹಿಂದೆ ಆಗಿ ಹೋದ ಮತ್ತು ಈಗ ಇದ್ದ ನಟರನ್ನು ಜ್ಞಾಪಿಸಿಕೊಳ್ಳಿ  1) ಡಾ. ರಾಜಕುಮಾರ, 1) ವಿಷ್ಣುವರ್ಧನ , ಅಂಬರೀಷ, ಶ್ರೀನಾಥ,  ಡಾ. ರಾಜ ಅವರ ಮಕ್ಕಳನ್ನು  ನೋಡಿ  ನಟ ವಿಜಯನನ್ನು ನೋಡಿ  ಗಣೇಶ  ನಟನನ್ನು ನೋಡಿ ನಮ್ಮ  ಚಿತ್ರ ರಂಗದಲ್ಲಿ  ನಿಮ್ಮಂಥಾ  ಕಲಾವಿದರು  ಬೇಕಾದಷ್ಟು ಜನರು ಆಗಿ ಹೋಗಿದ್ದಾರೆ. ಹಾಗೂ ಈಗಲೂ ಇದ್ದಾರೆ.  ನಿಮ್ಮ ಹಾಗೆ ಜೇಲು ವಾಸಿ ಕಂಡವರಿಲ್ಲವೆಂದು ಅನಿಸುತ್ತದೆ. ಆದರೂ  ತಮ್ಮ  ಆಕ್ಟಿಂಗ್ದಲ್ಲಿ  ಜೇಲು  ಭೋಗಿಸಿರಬಹುದು. ನಿಮ್ಮ  ಹಾಗೆ ಅಲ್ಲ ಒಂದು ಕ್ಷುಲ್ಲಕ್ ಝಗಳಕ್ಕೆ  ಈ ರೀತಿ  ಮಾಡುವದೇ ಒಂದು  ಹೆಣ್ಣಿನ  ಮೇಲೆ ಎಂದೂ ಕೈ  ಎತ್ತಬಾರದು ಇದು ಮಹಾ ಅಪರಾಧ ಅದರಲ್ಲಿ ದರ್ಶನ ದಂಪತಿಗಳಿಂದ ಅತೀ ಸುಂದರವಾದ ಒಂದು ಮಗು ನಿಮ್ಮ ಸಂಸಾರವೆಂದರೆ, ದೃಷ್ಟಿಯಾಗಬೇಕು ಅದೆಲ್ಲಿ  ಬಿಟ್ಟು ಒಬ್ಬ ಗುಂಡಾನ ಹಾಗೆ ವತಿಒರ್ಸಿದಿರಿ, ನನಗೆ ತುಂಬಾ  ದುಃಖವಾಗುತ್ತದೆ.

ನಿಮಗೆ  ಕಲೆ ಮತ್ತು ಸಂಪತ್ತು ನಿಮ್ಮ ಪುಣ್ಯ ಬಲದಿಂದ  ಸಿಕ್ಕಿದೆ.  ಅದು  ಪ್ರಸಾದವೆಂದು ತಿಳಿಯಿರಿ ಕೋಪವನ್ನು ಮಕ್ಕಳೂ ಸಹ ಮಾಡಿಕೊಳ್ಳುತ್ತವೆ.  ಆದರೆ ಮಕ್ಕಳು ವೈರತ್ವ ಮಾಡುವದಿಲ್ಲ ಅವರು ಹೊಡೆದಾಡಿದಂತೆ ಜಗಳ  ಮಾಡಿದಂತೆ ಮುಂದಿನ ಕ್ಷಣದಲ್ಲಿಯೇ ಮತ್ತೆ ಒಂದಾಗುತ್ತಾರೆ. ಎಲ್ಲರೂ  ಮಕ್ಕಳೇ  ಆಗಿರುತ್ತಿದ್ದರೆ. ಎಷ್ಟು  ಒಳ್ಳೇಯದಾಗಿರುತ್ತಿತ್ತು. ಅಲ್ಲವೇ? ದರ್ಶನ ರವರೇ ನೀವೂ  ಮಕ್ಕಳ ಹಾಗೆ ಕೋಪ ಮಾಡಿ ಮರೆತು ಬಿಡಿ.

ನೀವೂ ಮಕ್ಕಳ ಹಾಗೆ ಕೋಪ ಮಾಡಿ ಮರೆತು ಬಿಡಿ  ನೀವು ಎಷ್ಟೇ  ಬುದ್ದಿವಂತರಾಗಿದ್ದರೂ ಸಹ  ನಿಮ್ಮ ಧರ್ಮ ಪತ್ನಿಯ  ಮುಂದೆ  ಸಮ್ಮುಖದಲ್ಲಿ ನಿಮ್ಮ ಬುದ್ದಿ ವಂತಿಕೆಯನ್ನು  ತೋರಿಸಬೇಡಿ ಏಕೆಂದರೆ ಅಲ್ಲಿ  ಬುದ್ದಿವಂತಿಕೆ ಯಾವುದಕ್ಕೂ ಪ್ರಯೋಜನವಿಲ್ಲ ಅಲ್ಲಿ ಪ್ರೀತಿಬೇಕು.  ಸಾಹಸಬೇಕು.  ತಡಕೋಬೇಕು. ಇದು ಜೀವನ. ಜೀವನ ಕೇವಲ ನಾಲ್ಕು ದಿನಗಳದ್ದು ಆ ನಾಲ್ಕು  ದಿನಗಳಲ್ಲಿ ಎರಡು ದಿನಗಳು ಅಪೇಕ್ಷೆಗಾಗಿ  ಇನ್ನೆರಡು  ದಿನಗಳು ನೀರೀಕ್ಷಣೆಗಾಗಿ  ಇರುತ್ತವೆ. ಇನ್ನೂ ಯೋಜನೆ ಮಾಡಿದರೆ ಮನುಷ್ಯನ ಜೀವನ  ಇರುವದು  ಎರಡೇ ದಿನಗಳು ಈ ಎರಡು ದಿನಗಳಲ್ಲಿ  ಒಂದು ದಿನ  ಸಾವಿನದು ಇನ್ನೂ ಉಳಯುವುದು   ಒಂದೇ ದಿನ ಈ ಪಂದು ದಿನದ ಜೀವನಕ್ಕಾಗಿ  ಮನುಷ್ಯನೇಕೆ ಇಷ್ಟೊಂದು  ಮೆರೆದಾಡುತ್ತಾನೆ, ಜೀವನದ ಬೆಲೆ ಒಂದು ಮುಷ್ಟಿ ಬೂದಿಗಿಂತ ಹೆಚ್ಚೇನು ಇಲ್ಲ. ನೀವು ಮನೆಯ ಹೊರಗೆ  ನೀವು ಜನರಿಗೆ  ನಿಮ್ಮ ಕಲೆಯನ್ನು ತೋರಿಸಿರಿ   ಹಾಗೂ ಬುದ್ದಿ ಜೀವಿಗಳಾಗಿರಿ ಆದರೆ ನಿಮ್ಮ ನಟನೆ ಮುಗಿಸಿ ಮನೆಗೆ  ಬಂದಾಗ  ನಿಮ್ಮ ವೃತ್ತಿಯನ್ನು ಹೊರಗೆ ಬಿಟ್ಟು ಮನೆಯನ್ನು ಪ್ರವೇಶಿಸಿ, ಏಕೆಂದರೆ  ಅಲ್ಲಿ  ನಿಮ್ಮ ಬುದ್ದಿಗಿಂತ  ಪ್ರೀತಿಯ  ಅವಧ್ಯಕತೆ ಇದೆ. ಪುರುಷರು ಸಿಟ್ಟಿನಿಂದ  ಆತಂಕ ಗೊಂಡಿದ್ದರೆ.  ಮಹಿಳೆಯರು  ಹಟದಿಂದ  ದುಃಖಿಗಳಾಗಿದ್ದಾರೆ.  ದರ್ಶನ ಇವರೇ  ನಾನೂ ಅಭಿಮಾನಿ ಒಂದು ಮಾತು ನೆನಪಿನಲ್ಲಿ ಇಡಿ  ಮಿ,, ಸುಂದರವಾದ  ಬದುಕನ್ನು ನರಕವನ್ನಾಗಿ ಮಾಡಿಕೊಳ್ಳಬೇಡಿ

loading...

LEAVE A REPLY

Please enter your comment!
Please enter your name here