ದೇಶದ ಬದಲು ಪಕ್ಷದ ಅಭಿವೃದ್ಧಿಯ ಬೆನ್ನು ಬಿದ್ದ ಮೋದಿ : ಖರ್ಗೆ ಲೇವಡಿ

0
51

ಬೆಳಗಾವಿ,ಆ.9: ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಯ ಬದಲು ಪಕ್ಷದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಅವರು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಅವರು ಪಾಕಿಸ್ತಾನ ಹಾಗೂ ಚೀನಾ ದೇಶಗಳು ದೇಶದ ಒಳಗೆ ನುಸಳಿ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಸಿಎಂ ಮಹಾರಾಷ್ಟ್ರ ಹಾಗೂ ಹರಿಯಾಣಾ ರಾಜ್ಯದ ಚುನಾವಣೆಯ ಮೇಲೆ ಗಮನವಹಿಸಿದ್ದಾರೆ. ಹೀಗಾಗಿ ಇವರಿಗೆ ದೇಶದ ಕೆಲಸಕ್ಕಿಂತ ಪಕ್ಷದ ಕೆಲಸ ಹೆಚ್ಚಾಗಿದೆ ಎಂದು ಆರೋಪಿಸಿದರು.
ದೇಶದ ಗಡಿಯಲ್ಲಿ ಪಾಕಿಸ್ತಾನದ ಅಟ್ಟಹಾಸದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಮೋದಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ಇಂಥ ಗಂಭೀರ ಸಮಸ್ಯೆಯಲ್ಲಾದರೂ ದೆಹಲಿಯಲ್ಲಿ ಕುಳಿತು ಸಮಸ್ಯೆ ಬಗೆ ಹರಿಸುವದರ ಬಗ್ಗೆ ಚಿಂತಿಸಬೇಕಿದೆ. ಬಿಜೆಪಿ ಪಕ್ಷ ದೇಶದಲ್ಲಿ ಸಾರ್ವಭೌಮತ್ವ ಸ್ಥಾಪನೆಯ ಕನಸು ಬಿಟ್ಟು ದೆಹಲಿಯಲ್ಲಿ ಕುಳಿತು ಕೆಲಸ ಮಾಡುವಂತೆ ಮೋದಿ ಅವರಿಗೆ ಸಲಹೆ ನೀಡಿದರು.
ನರೇಂದ್ರ ಮೋದಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವಾಗ ಮನಮೋಹನ ಸಿಂಗ್ ಅವರನ್ನು ನಿಷ್ಕ್ರೀಯ ಎಂದು ಲೇವಡಿ ಮಾಡುತ್ತಿದ್ದರು. ಬೇರೆಯವರಿಗೆ ಮಾತನಾಡುವದು ಸುಲಭ ಎಂಬುವದು ಈಗ ಮೋದಿ ಅವರಿಗೆ ತಿಳಿದಿರಬಹದು ಎಂದ ಅವರು, ಒಂದು ಸೂಜಿ ತಯಾರಾಗದ ನಮ್ಮ ದೇಶದಲ್ಲಿ ಮಂಗಳಯಾನ ಕೇವಲ 120 ದಿನಗಳಲ್ಲಿ ಯಶಸ್ಸು ಆಗಲು ಹಾಗೂ ತಂತ್ರಜ್ಞಾನ ಇಷ್ಟರ ಮಟ್ಟಿಗೆ ಬೆಳೆದಿರುವದಕ್ಕೆ ಯುಪಿಎ ಸರಕಾರ ಕಾರಣ ಎನ್ನುವದನ್ನು ಬಿಜೆಪಿ ಅರ್ಥೈಸಿಕೊಂಡು ಸುಳ್ಳು ಆರೋಪ ಮಾಡುವದನ್ನು ಬಿಡಬೇಕು ಎಂದರು.
ಹೈದರಬಾದ ಕರ್ನಾಟಕ ಪ್ರದೇಶದಲ್ಲಿ 371 ಜೆ ವಿಶೇಷ ಸ್ಥಾಮನಾನ ಅನುಷ್ಠಾನವಾಗದೇ ಇರುವದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸದ ಅವರು, ಹೊಸ ಕಾನೂನು ಅನುಷ್ಠಾನಕ್ಕೆ ಸಣ್ಣ ಪುಟ್ಟ ತೊಡಕು ಬರುತ್ತವೆ. ಈ ತೊಡಕುಗಳನ್ನು ಸರಿಪಡಿಸುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಬೇಕು. ಹೀಗಾಗಿ ಅನುಷ್ಠಾನವಾಗಿಲ್ಲ ಎಂದು ಪ್ರಚಾರಕ್ಕಾಗಿ ಮಾತನಾಡುವದನ್ನು ಬಿಟ್ಟು ವಿಶೇಷ್ ಸ್ಥಾನಮಾನ ದೊರಕಲು ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ನಿಗಮ ಮಂಡಳಿ ನೇಮಕದಲ್ಲಿ ವಿಳಂಬ ಸಂಬಂದಿಸಿದಂತೆ ಪತ್ರಕರ್ತರು ಕೇಳಿದ ಪ್ರಶೆನ ಉತ್ತರಿಸಿದ ಖರ್ಗೆ ಅವರು, 2-3 ದಿನಗಳಲ್ಲಿ ಪಟ್ಟಿ ಹೊರಬರುವ ಸಾಧ್ಯತೆಯಿದೆ. ಪಕ್ಷದಲ್ಲಿದೆ ಎನ್ನಲಾಗುತ್ತಿರುವ ಆಂತರಿಕ ಬಿಕ್ಕಟ್ಟನ್ನು ನಿವಾರಿಸುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಇದೆ ಸುಮ್ಮನಾದರು.
ಭಾಕ್ಸ್
ಅಖಂಡ ಕರ್ನಾಟಕದ ನಿರ್ಮಾಣದ ಸ್ಥಾಪನೆಗೆ ಉತ್ತರ ಕರ್ನಾಟಕದ ಜ£ತೆ ಅಪಾರವಾದ ಕೊಡುಗೆ ನೀಡಿದ್ದಾರೆ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಮಾತನಾಡಿ ಕೆಲವರು ಕೆಟ್ಟ ವಾತಾವರಣವನ್ನು ಸೃಷ್ಠಿಸುತ್ತಿದ್ದಾರೆ. ತಲೆ ನೋವು ಬಂದರೆ ಮಾತ್ರೆ ತೆಗೆದುಕೊಂಡು ಸರಿಪಡಿಸಿಕೊಳ್ಳುತ್ತೇವೆ ಹೊರತು ತಲೆ ಕಡೆದುಕೊಳ್ಳುವದಿಲ್ಲ ಹೀಗಾಇ ಈ ಭಾಗದಲ್ಲಿ ಏನೇ ನ್ಯೂನತೆಗಳಿದ್ದರೂ ಕುಳಿತುಕೊಂಡು ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಸರಿಯಾದುದಲ್ಲ ಎಂದು ಖರ್ಗೆ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಪ್ರತಿಕ್ರಿಯಿಸಿದರು.

loading...

LEAVE A REPLY

Please enter your comment!
Please enter your name here