ರೆಡ್ಡಿಗೆ ಸಿಬಿಐ ಯಡ್ಡಿಗೆ ಲೋಕಾಯುಕ್ತರ ಕಾಟ

0
45

 

ನಮ್ಮ ರಾಜ್ಯದಇಬ್ಬರು  ಹಿರಿಯ ರಾಜಕಾರಣಿಗಳಿಗೆ ಒಂದೊಂದು ಕಾಟ ಆರಂಭವಾಗಿದೆ. ಇಲ್ಲಿಯ ವರೆಗೆ ಬಳ್ಳಾರಿ ಜಿಲ್ಲೆಯನ್ನು ತಮ್ಮ ರಾಜ್ಯವನ್ನಾಗಿ  ಮಾಡಿಕೊಂಡು ಆ ಜಿಲ್ಲೆಯಲ್ಲಿ ಚಕ್ರವರ್ತಿಯಂತೆ ಆಡಳಿತ ಮಾಡುತ್ತಾ ಬಂದು ಮೆರೆಯುತ್ತಾ ಬಂದಿದ್ದ ಜನಾರ್ಧನ ರೆಡ್ಡಿ ಈಗ ಸಿಬಿಐ ಎಂದರೆ ಬೆಚ್ಚಿ ಬೀಳುವಂತೆ ಆಗಿದೆ.  ಅದೇ ರೀತಿ 40 ವರ್ಷಗಳ ವರೆಗೆ ವಿರೋಧಿ ಪಕ್ಷದಲ್ಲಿದ್ದು. ತಮ್ಮ ಹೋರಾಟದಿಂದ  ಸರಕಾರವನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದ ನಂತರ  ಮೂರು ವರ್ಷ ಕಾಲ ಮುಖ್ಯ ಮಂತ್ರಿಯಾಗಿ ಪ್ರತಿ ಪಕ್ಷದವರನ್ನು ಬೆಚ್ಚಿ ಬೀಳಿಸುತ್ತಾ ಬಂದಿದ್ದ ಯಡಿಯೂರಪ್ಪ ಈಗ ಲೋಕಾಯುಕ್ತರೆಂದರೆ ಬೆಚ್ಚಿ ಬೀಳುವಂತೆ ಆಗಿದೆ.

ನಾನು ಯಾವುದೇ ಅಕ್ರಮ ಗಣಿಗಾರಿಕೆ  ಮಾಡಿಲ್ಲ ನಾನು ಯಾವುದೇ ತನಿಖೆಗೆ ಸಿದ್ದನಿದ್ದೇನೆ.  ನಾನು ಅಪ್ಪಟ ಚಿನ್ನವಾಗಿದ್ದೇನೆ 24 ಕ್ಯಾರೆಟ ಚಿನ್ನ ನನ್ನದಾಗಿದೆ. ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದ ಜನಾರ್ಧನ ರೆಡ್ಡಿ ಈಗ 15 ದಿನಗಳ ಜೈಲು ವಾಸ ಅನುಭವಿಸಿದ ನಂತರ ಸಿಬಿಐ ಎಂದರೆ ಕನಸ್ಸಿನಲ್ಲಿಯೂ ಸಹ ಬೆಚ್ಚಿ ಬೀಳುವಂತೆ ಆಗಿದೆ.

ಸಿಬಿಐ ಅಧಿಕಾರಿಗಳು ಕಳೆದ 5 ರಂದು ಜನಾರ್ಧನ ರೆಡ್ಡಿ ಹಾಗೂ ಓಎಂಸಿ  ಎಂ. ಡಿ. ಶ್ರೀನಿವಾಸ ರೆಡ್ಡಿ ಅವರನ್ನು  ಬಂಧಿಸಿ ಹೈದ್ರಾಬಾದದ  ಚಂಚಲಗೂಡ ಕಾರಾಗ್ರಹಕ್ಕೆ ಅಟ್ಟಿದ ಮೇಲೆ  ಜನಾರ್ಧನ ರೆಡ್ಡಿ  ಹಾಗೂ ಶ್ರೀನಿವಾಸ ರೆಡ್ಡಿ ನಿವಾಸಗಳ ಮೇಲೆ  ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಅವರಿಬ್ಬರ ಮನೆಗಳಲ್ಲಿ ಇದ್ದು ಬಿದ್ದ  ಎಲ್ಲ ಸಂಪತ್ತನ್ನು ದೋಚಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲ ಶ್ರೀನಿವಾದ ತೆಡ್ಡಿ ಅವರು ಬ್ಯಾಂಕ ಲಾಕರ್ಗಳನ್ನು ತೆರೆಸಿ ಅಲ್ಲಿ ಇದ್ದ ಎಲ್ಲ ಸಂಪತ್ತನ್ನು ತೆಗೆದುಕೊಂಡು ಹೋಗಿದ್ದಾರೆ.

ಜನಾರ್ಧನ ರೆಡ್ಡಿಯ ಅವರ ಹೆಲಿಕ್ಯಾಪಟರ ಮತ್ತು ಎಂಟು ಐಶಾರಾಮಿ ಕಾರುಗಳನ್ನು ಈಗ ಸಿಬಿಐದವರು ವಶಪಡಿಸಿಕೊಂಡಿದ್ದಾರೆ. ಈಗ ಸಿಬಿಐ ಅಧಿಕಾರಿಗಳು ರೆಡ್ಡಿಯವರ ಆಪ್ತರ ಮತ್ತು ಸ್ನೇಹಿತರ ಮನೆಗಳನ್ನು ಜಾಲಾತೊಡಗಿದ್ದಾರೆ.  ಹೀಗಾಗಿ ಸಿಬಿಐ ಅಂದರೆ ರೆಡ್ಡಿಗಳು ಬೆಚ್ಚಿ ಬೀಳುವಂತೆ ಆಗಿದೆ.

ರೆಡ್ಡಿಗಳ ಕತೆ ಈ ರೀತಿಯಾದರೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಕತೆ ಮತ್ತೊಂದು ರೀತಿಯಾಗಿದೆ. ಶಿವಮೊಗ್ಗಾದ ವಕೀಲರಾದ ಶಿರಾಜಿನ ಭಾಷಾ ಮತ್ತು ಬಾಲರಾಜ್  ಅವರು ಯಡಿಯೂರಪ್ಪ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ಮೂರು ಮೂರು ಪ್ರಕರಣಗಳನ್ನು ಒಳಗೊಂಡಿರುವ ಒಟ್ಟು 15 ಪ್ರಕರಣಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.  ಇದರ ಜೊತೆಗೆ ಜೆಡಿಎಸ್ ಪಕ್ಷದ ವಕ್ತಾರ  ವೈ. ಎಸ್. ವಿ. ದತ್ತಾ ಅವರು ಭದ್ರಾ ಮೇಲ್ದಂಡೆ ಯೋಜನೆಯ ಗುತ್ತಿಗೆಯ ವ್ಯವಹಾರದಲ್ಲಿ ಯಡಿಯೂರಪ್ಪ 13 ಕೋಟಿ ರೂಪಾಯಿ ಲಂಚ ಪಡೆದಿರುವ ಆಪಾದನೆ ಮಾಡಿರುವ ಪ್ರಕರಣ ಸಹ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿದೆ. ಈ ಎಲ್ಲ ಪ್ರಕರಣಗಳ ತನಿಖೆಗಳನ್ನು ಲೋಕಾಯುಕ್ತ ಅಧಿಖಾರಿಗಳು ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುತ್ತಿದ್ದಾರೆ. ಅಲ್ಲದೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅಕ್ರಮ ಗಣಿಗಾರಿಕೆಯ ಕುರಿತು ಯಡಿಯೂರಪ್ಪ 30 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ವರದಿ ನೀಡಿದ್ದರ ಹಿನ್ನೆಲೆಯಲ್ಲಿ ಯಡಿಯೂರಪ್ಪ ತಮ್ಮ ಮುಖ್ಯ ಮಂತ್ರಿ ಸ್ಥಾನಕ್ಕರ ರಾಜೀನಾಮೆಯನ್ನು ನೀಡಬೇಕಾಗಿ ಬಂದಿತ್ತು.  ಈಗ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಯಡಿಯೂರಪ್ಪನವರ ಅಳಿಯ ಸೋಹನ ಕುಮಾರ ನಿವಾಸದ ಮೇಲೆ ದಾಳಿ ಮಾಡಿ ದಾಖಲೆಗಳ ಹುಡುಕಾಟದಲ್ಲಿ  ತೊಡಗಿದ್ದಾರೆ. ಇದರಿಂದ ಯಡಿಯೂರಪ್ಪ ಅವರು ಈಗ ಲೋಕಾಯುಕ್ತರ ಹೆಸರು ಕೇಲಿಸ ಕೂಡಲೇ ಬೆಚ್ಚಿ ಬೀಳುವಂತೆ ಆಗಿದೆ.

ಅಕ್ರಮ ಗಣಿಗಾರಿಕೆಯ ಪ್ರಕರನದಲ್ಲಿ ಜನಾರ್ಧನ ರೆಡ್ಡಿ ಸಿಕ್ಕಿ ಬೀಳಲು ಹೋಗಿದ್ದರೆ ಅವರ ಬಳ್ಳಾರಿ ಜಿಲ್ಲೆಯ ಸಾಮ್ರಾಜ್ಯಕ್ಕೆ  ಯಾವುದೇ  ರೀತಿಯ ತೊಂದರೆ ಬರುತ್ತಿರಲಿಲ್ಲ ಜೊತೆಗೆ ಅವರು ರಾಜಕೀಯ ಅಧಿಖಾರವನ್ನು ಕಳೆದು ಕೊಳ್ಳುವ ಯಾವುದೇ  ರೀತಿಯ ತೊಂದರೆ ಇರಲಿಲ್ಲ. ಅದೇ ರೀತಿ ಯಡಿಯೂರಪ್ಪ ನವರು ಈ ರೀತಿ ಭ್ರಷ್ಟಾಚಾರ ಭೂ ಹಗರಣ  ಡಿ- ನೋಟಿಫಿಕೇಶನ್ ಸ್ವಜನಪಕ್ಷಪಾತ ಮಾಡದೇ ಹೋಗಿದ್ದರೆ ಅವರ ಅಧಿಕಾರದ ಅವಧಿ ಮುಗಿಯುವ ವರೆಗೆ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಅಲ್ಲಾಡಿಸುವ ಶಕ್ತಿ ಯಾರಲ್ಲಿಯೂ ಇರುತ್ತಿರಲಿಲ್ಲ  ಜೊತೆಗೆ ಮುಂದಿನ  ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷಕ್ಕಿಲ್ಲ ಅವರ ನಾಯಕತ್ವವನ್ನು ಪ್ರಶ್ನೆ ಮಾಡುವ ಯಾರು ಇರುತ್ತಿರಲಿಲ್ಲ. ಆದರೆ ರೆಡ್ಡಿಗಳು ಮತ್ತು ಯಡಿಯೂರಪ್ಪ ತಾವಾಗಿಯೇ ತೋಡಿ ಕೊಂಡಿರುವ ಹಳ್ಳಗಳಲ್ಲಿ ತಾವೇ ಬಿದ್ದು ಒದ್ದಾಡುವಂತೆ ಆಗಿದೆ. ಇದಕ್ಕೆ ಅವರು ಬೇರೆ ಯಾರ ಕಡೆಗೂ ಬೆರಳು  ಮಾಡಿ ತೋರಿಸುವುದಕ್ಕೆ ಸಾಧ್ಯವಾಗು ವುದಿಲ್ಲ. ಈ ಮೊದಲು ತಮ್ಮ ಮೇಲಿನ  ರಾಜಕೀಯ ದ್ವೇಷದಿಂದ ತಮ್ಮ ಮೇಲೆ ತಮ್ಮ ಕುಟುಂಬದ ಮೇಲೆ ವ್ಯವಸ್ಥಿತವಾದ ಅಪಪ್ರಚಾರಗಳು ಮಾಡಲಾಗುತ್ತಿದೆ. ಎಂದು ಜನಾರ್ಧನ ರೆಡ್ಡಿ ಮತ್ತು ಯಡಿಯೂರಪ್ಪ ಹೇಳುತ್ತಾ ಬಂದಿದ್ದರು. ಆದರೆ ಈಗ ನ್ಯಾಯಾಲಯಗಳಲ್ಲಿ ಮತ್ತು ಅಧಿಕಾರಿಗಳ  ತನಿಖೆಯ  ಸಮಯದಲ್ಲಿ ಅವರ ಬಣ್ಣ ಬಯಲಾಗುತ್ತಾ  ನಡೆದಿರುವುದನ್ನು ನೋಡಿದರೆ  ಬೇರೆಯವರ  ಯಾವುದೇ ರೀತಿಯ ಅಪಪ್ರಚಾರವನ್ನು ಮಾಡಿಲ್ಲ ಅವರು ತಾವೇ ತೋಡಿಕೊಂಡ  ಹಳ್ಳಗಳಲ್ಲಿ ತಾವೇ ಬಿದ್ದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.  ಆದ್ದರಿಂದ  ಅವರು ಬೇರೆಯವರ ಮೇಲೆ ಗೂಬೆ ಕೂಡ್ರಿಸುವ ಕಾರ್ಯವನ್ನು ಮಾಡದೆ ತಮ್ಮ ತಮ್ಮ ಆತ್ಮಾವಲೋಕನಗಳನ್ನು ಮಾಡಿ ಕೊಂಡು ತಮ್ಮ ಆತ್ಮ ಸಾಕ್ಷಿಯ ಮುಂದೆ ತಮ್ಮಷ್ಟಕ್ಕೆ ತಾವೇ  ವಿಮರ್ಶೆ ಮಾಡಿಕೊಂಡರೆ ತಾವು ಮಾಡಿರುವುದು ಎಷ್ಟರ ಮಟ್ಟಿಗೆ  ಸರಿ ಎಂಬುದು ಅವರಿಗೆ ಗೊತ್ತಾಗುವುದಕ್ಕೆ ಸಾಧ್ಯವಾಗುತ್ತದೆ. ಮನುಷ್ಯ ಜೀವನದಲ್ಲಿ ಎಡವುವದು ಸ್ವಾಭಾವಿಕವಾಗಿದೆ. ಆದರೆ ಪದೇ ಪದೇ ಎಡವುವದು ಅವರ ಬೇಜವಾಬ್ದಾರಿತನಕ್ಕೆ ಮತ್ತು ಹೊಣೆಗೇಡಿತನಕ್ಕೆ ಸಾಕ್ಷಿಯಾಗುತ್ತದೆ. ಆದ್ದರಿಂದ ಜನಾರ್ಧನ ರೆಡ್ಡಿ ಮತ್ತು ಯಡಿಯೂರಪ್ಪ  ಅವರು ತಾವು ಮಾಡಿದ ತಪ್ಪುಗಳ ಬಗ್ಗೆ ವಿಮರ್ಶೆಯನ್ನು ಮಾಡಿಕೊಂಡು  ಮುಂದೆ ಆ ರೀತಿಯ ತಪ್ಪುಗಳು ತಮ್ಮ ಜೀವನದಲ್ಲಿ  ನಡೆಯುವಂತೆ  ನೋಡಿಕೊಂಡರೆ ಮಾತ್ರ ಅವರು ಮುಂದಿನ  ಜೀವನದಲ್ಲಿ ಒಳ್ಳೆಯ ಮನುಷ್ಯರಾಗಿ ಬದುಕು ಸಾಗಿಸಿಕೊಂಡು  ಹೋಗುವುದಕ್ಕೆ ಸಾಧ್ಯವಾಗುತ್ತದೆ.  ಇಲ್ಲದಿದ್ದರೆ. ಈಗ ಉಂಟಾದ ಅವರ ಅವನತಿ ಇದೇ ರೀತಿ ಮುಂದು ವರೆಯುತ್ತಾ ಹೋಗುತ್ತದೆ.  ಎಂಬುದರಲ್ಲಿ ಯಾವುದೇ  ರೀತಿಯ ಸಂದೇಹ ಇರುವದಿಲ್ಲ ಆದ್ದರಿಂದ ಈಗಲಾದರೂ  ಅವರು ಎಚ್ಚೆತ್ತುಕೊಂಡು ತಮ್ಮ ಬಾಳನ್ನು ಹಸನು ಮಾಡಿಕೊಳ್ಳುವ ಕಾರ್ಯವನ್ನು ಮಾಡಬೇಕಾಗಿ ಇರುವದು ಅನಿವಾರ್ಯವಾದ ಮತ್ತು  ಅಗತ್ಯವಾದ  ಸಂಗತಿಆಗಿದೆ. ಎಂಬುದನ್ನು ಅವರು ಅರಿತು ಕೊಳ್ಳಬೇಕು.

 

loading...

LEAVE A REPLY

Please enter your comment!
Please enter your name here