ಭಾರತದೊಂದಿಗೆ ಮಾತುಕತೆಗೆ ಉತ್ಸುಕತೆ ತೋರಿದ ಪಾಕಿಸ್ತಾನ

0
17

ಕಠ್ಮಂಡು, ನ.29- ಭಾರತದೊಂದಿಗೆ ಕಗ್ಗಂಟಾಗಿರುವ ಎಲ್ಲ ಪ್ರಚಲಿತ ವಿಷಯಗಳ ಬಗ್ಗೆ ಮಾತುಕತೆ ನಡೆಸಲು ಪಾಕಿಸ್ತಾನ ಉತ್ಸುಕತೆ ಹೊಂದಿದೆ ಎಂದು ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಮೂರು ದಿನಗಳ 18ನೆ ಸಾರ್ಕ್ ಶೃಂಗಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಕಾಶ್ಮೀರ, ವ್ಯಾಪಾರ-ವಹಿವಾಟು, ಭಯೋತ್ಪಾದನೆ, ಗಡಿ ವಿವಾದ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದು ತಿಳಿಸಿದರು.
ಕಠ್ಮಂಡುವಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಷರೀಫ್ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತುಕತೆ ನಡೆಸಿರಲಿಲ್ಲ. ಇತ್ತೀಚೆಗೆ ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರಿಂದ ನೆರೆಯ ರಾಷ್ಟ್ರದೊಂದಿಗೆ ಮಾತುಕತೆ ನಡೆಸಬಾರದೆಂಬುದು ಭಾರತದ ನಿಲುವಾಗಿತ್ತು.
ಮೋದಿ ತಮ್ಮ ಭಾಷಣದ ವೇಳೆ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸುವುದರ ಮೂಲಕ ಷರೀಫ್‍ಗೆ ಮುಜುಗರ ಉಂಟುಮಾಡಿದ್ದರು.
ಇಬ್ಬರೂ ನಾಯಕರು ಒಂದೇ ಹೊಟೇಲ್‍ನಲ್ಲಿದ್ದರೂ ಮಾತುಕತೆ ನಡೆದಿರಲಿಲ್ಲ. ಅಂತಿಮವಾಗಿ ನಿನ್ನೆ ಮೋದಿ ಷರೀಫ್ ಅವರಿಗೆ ಹಸ್ತಲಾಘವ ನೀಡಿ ವದಂತಿಗೆ ತೆರೆ ಎಳೆದಿದ್ದರು.

loading...

LEAVE A REPLY

Please enter your comment!
Please enter your name here