ಕೆಎಟಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ವಕೀಲರು

0
26

ಅಧಿವೇಶನದಲ್ಲಿ ಜನಪ್ರತಿನಿಧಿಗಳು ಕೆಎಟಿಗಾಗಿ ಪಟ್ಟು ಹಿಡಿಯಬೇಕು : ಪಾಟೀಲ
ಬೆಳಗಾವಿ:2 ಚಳಿಗಾಲ ಅಧಿವೇಶನದ ಮೊದಲದಿನದಂದೆ ಜಿಲ್ಲೆಯ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಕೆಎಟಿ ಪೀಠ ಬೆಳಗಾವಿಯಲ್ಲಿ ಸ್ಥಾಪಿಸಬೇಕೆಂದು ಸರಕಾರಕ್ಕೆ ಪಟ್ಟು ಹಿಡಿಯಬೇಕು ಅಂದಾಗ ಮಾತ್ರ ವಕೀಲರ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ನಗರದ ಕೋರ್ಟ ಆವರಣದಲ್ಲಿ ಕೆಎಟಿ ಪೀಠಕ್ಕಾಗಿ ವಕೀಲರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದದಲ್ಲಿ ಭಾಗವಹಿಸಿ ಮಾತನಾಡಿದರು, ಕಳೆದ 15 ದಿನಗಳಿಂದ ವಕೀಲರು ಕೆಎಟಿ ಪೀಠಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಸರಕಾರದಿಂದ ಯಾವುದೇ ಸ್ಪಂದನೆಗಳು ಬಾರದಿರುವುದರಿಂದ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಲೇ ಸಾಗುತ್ತಿದೆ. ಬರುವ ಅಧಿವೇಶನದ ಮೊದಲ ದಿನದಂದೆ ಶಾಸಕ, ಸಚಿವರುಗಳು ಸರಕಾರದ ಮೇಲೆ ಒತ್ತಡ ಹಾಕಿದರೆ ಮಾತ್ರ ಸರಕಾರದ ನಿಲುವ ಪ್ರಕಟಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕೆಎಟಿ ಪೀಠದ ಬೇಡಿಕೆ ಕೇವಲ ವಕೀಲರದ್ದಾಗಿಲ್ಲ ಬೆಳಗಾವಿ ಸಮಸ್ತ ಸಾರ್ವಜನಿಕರ ಆಗ್ರಹವಾಗಿದೆ. ಈ ಹೋರಾಟ ಸಾರ್ವಜನಿಕರ ಪರವಾಗಿ ನಡೆಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಇದರ ಬಗ್ಗೆ ಸ್ಪಷ್ಟ ನಿಲುವ ತೆಗೆದುಕೊಂಡು ಕೆಎಟಿ ಪೀಠವನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಒತ್ತಡ ಹಾಕಬೇಕಿದೆ ಎಂದು ಸಂಜಯ ಪಾಟೀಲ ಹೇಳಿದರು.
ಈ ಹೋರಾಟ ಗೆಲುವು ಸಿಗುವವರೆಗೂ ಹೀಗೆ ಮುಂದುವರೆಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಇರುವುದರಿಂದ ಇಲ್ಲಿನ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಬೇಟಿಯಾಗಿ ಕೆಎಟಿ ಪೀಠದ ಹೋರಾಟದ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಈರಣ್ಣಾ ಕಡಾಡಿ ಮಾತನಾಡಿ, ದಿನದಿಂದ ದಿನಕ್ಕೆ ಕೆಎಟಿ ಪೀಠ ಹೋರಾಟದ ಕೂಗು ಜೊರಾಗುತ್ತಿದ್ದರು ಸರಕಾರ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತ್ತಿದೆ. ಡಿಸೆಂಬರ 3 ರಂದು ವಕೀಲರು ನೀಡಿರುವ ಬೆಳಗಾವಿ ಬಂದ್ ಕರೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಹೇಳಿದರು.
ವಕೀಲರಿಂದ ಉಪವಾಸ ಸತ್ಯಾಗ್ರಹ: ಎ.ಜಿ.ಮುಳವಾಡಮಠ ನೇತೃತ್ವದಲ್ಲಿ ಕೆಎಟಿ ಪೀಠಕ್ಕಾಗಿ ಅನಿರ್ದಿಷ್ಟಾವದಿಯ ವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ನ್ಯಾಯವಾದಿ ಎ.ಜಿ.ಮುಳವಾಡಮಠ ವಕೀಲರು ನಡೆಸುತ್ತಿರುವ ಈ ಹೋರಾಟ ಬೆಳಗಾವಿ ನಾಗರಿಕರ ಸಲುವಾಗಿ ಸರಕಾರಕ್ಕೆ ಕೇಲವರು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲು ಹಿಂದೆಟ್ಟು ಹಾಕುತ್ತಿದೆ. ಅಲ್ಲದೆ ಕೇಲವರು ಹೈಕೋರ್ಟ ಪೀಠ ಎಲ್ಲಿ ಸ್ಥಾಪನೆಯಾಗಿದೆಯೋ ಅಲ್ಲೇ ಕೆಎಟಿ ಪೀಠ ಸ್ಥಾಪಿಸಬೇಕೆಂದು ಹೇಳುತ್ತಿರುವುದು ಖಂಡನೀಯ. ಯಾವುದೇ ಕಾನೂನಿನಲ್ಲಿ ಈ ರೀತಿ ಇಲ್ಲ ಸರಕಾರದ ದಿಕ್ಕು ತಪ್ಪಿಸಲು ಇಂಥ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಉಪವಾಸ ಸತ್ಯಾಗ್ರಹದಲ್ಲಿ ನ್ಯಾಯವಾದಿಗಳಾದ ಬಿ.ಎಸ್.ಹಿರೇಮಠ, ರಮೇಶ ದೇಶಪಾಂಡೆ, ಮುರಗೇಂದ್ರಗೌಡಾ ಪಾಟೀಲ ಹಾಗೂ ವ್ಯಾಪಾರಿ ಸಚಿನ ಮುಳಗುಂದ ಕೆಎಟಿ ಪೀಠ ಸ್ಥಾಪನೆಯಾಗುವವರೆಗೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳಕರ, ಪ್ರವೀಣ ಮೋತಿಮಠ ರವೀಂದ್ರ ತೋಟಗೆ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here