ಲಕ್ಷ್ಮೀ ಹೆಬ್ಬಾಳಕರರಿಂದ ಕಾಗ್ರೆಸ್ ಪಕ್ಷ ನಿರ್ಣಾಮ

0
48

ಬೆಳಗಾವಿ:2 ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರಿಂದ ಕಾಂಗ್ರೆಸ್ ಪಕ್ಷ ನಿರ್ಣಾಮವಾಗುವ ಹಂತ ತಲುಪಿದೆ. ಕುಡಲೇ ಅವರಿಗೆ ಶೋಖಾಸ್ ನೋಟೀಸ್ ನೀಡಿ ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಎಸ್ಟಿ ಎಸ್ಟಿ ರಾಜ್ಯ ಸಂಚಾಲಕ ಶಂಕರ ಮುನವಳ್ಳಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಅವರು ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಲಕ್ಷ್ಮೀ ಹೆಬ್ಬಾಳಕರ ತಮ್ಮ ವ್ಯಾಪ್ತಿ ಮೀರಿ ಕೆಪಿಸಿಸಿ ಸದಸ್ಯರ ಬಗ್ಗೆ ಉದ್ದಟತನದಿಂದ ಮಾತನಾಡಿ ಜನರ ಹಾಗೂ ಕಾರ್ಯಕರ್ತರ ಹಾಗೂ ಮಾಧ್ಯಮಗಳ ದಿಕ್ಕನ್ನು ಬದಲಾಯಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಮುಖಂಡರು ಕ್ರಮ ಕೈಗೊಳ್ಳದೇ ಇದ್ದಲ್ಲಿ ಡಿಸೆಂಬರ್ 4 ರಂದು ದೆಹಲಿಗೆ ತೆರಳಿ ಈ ವಿಷಯವನ್ನು ಹೈಕಮಾಂಡಗೆ ತಿಳಿಸಿ ವಜಾಗೊಳಿಸಬೇಕೆಂದು ಒತ್ತಾಯಿಸಲಾಗುವು ಎಂದರು.
2004 ರಲ್ಲಿ ಹೆಬ್ಬಾಳಕರ್ ಅವರಿಗೆ ಖಾನಾಪುರದಿಂದ ಬೆಳಗಾವಿಗೆ ಬರಲು ಅವರ ಹತ್ತಿರ ಹಣ ಇರುತ್ತಿರಲಿಲ್ಲ. ನಾವು ಪಕ್ಷಕ್ಕೆ ದುಡಿಯುತ್ತಿರುವುದನ್ನು ಒಂದು ಮೂಲೆಯಲ್ಲಿ ನಿಂತು ನೋಡುತ್ತಿವರು. ನಂತರ ಪಕ್ಷದ ಒಳಗೆ ಸೇರಿಕೊಂಡಿದ್ದ ತಕ್ಷಣ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಟ್ಟರು. ಈ ಹಿಂದೆ ಹಲವು ಮಹಿಳಾ ಕಾರ್ಯಕರ್ತರು ಪಕ್ಷದಲ್ಲಿ ದುಡಿಯುತ್ತಿದ್ದು ಅವರನ್ನು ಬಿಟ್ಟು ಇವರಿಗೆ ಕೊಟ್ಟಿರುವುದು ಖಂಡನೀಯ.
ಜಿಲ್ಲಾಧ್ಯಕ್ಷೆಯಾಗಿ ರಾಜ್ಯದ ಬಗ್ಗೆ ಮಾತನಾಡುವ ಅಧಿಕಾರ ಕೊಟ್ಟವರು ಯಾರು? ಇವರು ಗಳಿಸಿರುವ ಕೋಟ್ಯಾಂತರ ರೂ.ಗಳ ಹಣವನ್ನು ಭ್ರಷ್ಟತನದಿಂದ ಸಂಪಾದಿಸಿದ್ದಾರೆ ಎಂಬ ಆರೋಪವನ್ನು ಕಟ್ಟಿಕೊಂಡವರಾಗಿದ್ದಾರೆ ಕೂಡಲೇ ಅವರನ್ನು ವಜಾಗೊಳಿಸಬೇಕೆಂದು ಅವರು ಸರಕಾರಕ್ಕೆ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅನಿಲ ಸೌದಾಗರ, ಸೀಮಾ ಇನಾಂದಾರ ಸೇರಿದಂತೆ ಮೊದಲಾದವರು ಹಾಜರಿದ್ದರು.

ಬಾಕ್ಸ್

“ಅಹಿಂದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಕಾರ್ಯಕರ್ತರನ್ನು ತುಳಿಯುತ್ತಿದ್ದಾರೆ. ತಮಗೆ ಅಧಿಕಾರ ಬೇಕಾಗುವ ಆಸೆಯಿಂದ ಅಹಿಂದ ಎಂಬ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಂಡು ಜಾತಿಭೇದ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನೂ ಕೂಡಾ ಅಧಿಕಾರದಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.”

loading...

LEAVE A REPLY

Please enter your comment!
Please enter your name here