­­ಬಸ್ತವಾಡದಲ್ಲಿ ಮೆಟ್ರಿಕ್ ಮೇಳದ ಉದ್ಘಾಟನ

0
38

ಬೆಳಗಾವಿ 23- ತಾಲೂಕಿನ ಸಂತಿಬಸ್ತವಾಡ ಸಮೂಹ ಕೇಂದ್ರದಲ್ಲಿಯ ಮರಾಠಿ ಶಾಲೆ ಬಹಾದ್ದರವಾಡಿಯಲ್ಲಿ ಟಿ.ಎಲ್.ಎಮ್. ಮೇಳ ಹಾಗೂ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪಿ.ಕೆ. ಕೊಲತೆ ಡಿಡಿಪಿಆಯ್ ಇವರು ಉಪಸ್ಥಿತರಿದ್ದರು. ಇವರು ಮಕ್ಕಳ ಸರ್ವಾಂಗೀಣ ವಿಕಾಸದ ಸಲುವಾಗಿ ಸಂತಿಬಸ್ತವಾಡ ಕ್ಲಸ್ಟರದಲ್ಲಿಯ ಎಲ್ಲ ಮಕ್ಕಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ಶೈಕ್ಷಣಿಕ ಉಪಕರಣಗಳನ್ನು ತಯಾರಿಸುವುದರ ಸಲುವಾಗಿ ಸದಾ ಸಿದ್ಧರಾಗಿರುತ್ತಾರೆ ಎಂಬುದು ಈ ಕಾರ್ಯಕ್ರಮದಲ್ಲಿ ಕಂಡು ಬಂದಿದೆ ಎಂದು ತಮ್ಮ ಹಿತನುಡಿಗಳನ್ನು ತಿಳಿಸಿದರು.

ಈ ಪ್ರಕರಣದಲ್ಲಿ ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಗಳಾದ ಶ್ರೀಮತಿ ಸವದತ್ತಿ ಇವರು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದ ಜೊತೆಗೆ ಮಕ್ಕಳ ಬೌದ್ದಿಕ, ಮಾನಸಿಕ ಬೆಳವಣಿಗೆಯೂ ಆಗುತ್ತದೆ. ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿಯ ಸಪ್ತ ಗುಣಗಳನ್ನು ಖಚಿತಪಡಿಸಿ ಅದಕ್ಕೆ ಚಾಲನೆ ನೀಡಲು ಎಲ್ಲರೂ ಪ್ರಯತ್ನಿಸಬೇಕು ಎಂದು ಶ್ರೀಮತಿ ಸವದತ್ತಿ ಅವರು ಶಿಕ್ಷಕರಿಗೆ, ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಿದರು. ಇವರಿಗೆ ನೋಟಪುಸ್ತಕ, ಪೆನ್ನುಗಳನ್ನು, ಸೀಸಪೆನ್ಸಿಲ್ ಹಾಗೂ ಸರ್ಟಿಫಿಕೇಟ್ಗಳನ್ನು ಕೊಡಲಾಯಿತು. ಈ ಬಹುಮಾನ ವಿತರಣಾ ಸಮಾರಂಭಕ್ಕೆ ಮಲ್ಲಪ್ಪ ಪಾಟೀಲ ಎಸ್ಡಿಎಮ್ಸಿ ಅಧ್ಯಕ್ಷರು, ನಾನು ಪಾಟೀಲ ಮಾಜಿ ತಾ.ಪಂ. ಸದಸ್ಯರು, ಸಾತೇರಿ ಪಾಟೀಲ ಗ್ರಾ.ಪಂ. ಸದಸ್ಯರು  ಶ್ರೀಮತಿ ಗಾಯತ್ರಿ ಡುಕರೆ ಅಧ್ಯಕ್ಷರು ಗ್ರಾ.ಪಂ. ಕಿಣಯೆ, ಶ್ರೀಮತಿ ನೂರಜಹಾನ ಜಮಾದಾರ ಉಪಾಧ್ಯಕ್ಷರು ಗ್ರಾ.ಪಂ. ಕಿಣಯೆ, ಎಸ್.ಜಿ. ಭಜಂತ್ರಿ, ಸಿಆರ್ಪಿ ಮಚ್ಛೆ, ಎಚ್.ವ್ಹಿ. ಪಾಟೀಲ ಕೇಂದ್ರ ಮುಖ್ಯಾಧ್ಯಾಪಕರು ಸಂತಿ ಬಸ್ತವಾಡ ಇವರ ಅಮೃತ ಹಸ್ತದಿಂದ ಬಹುಮಾನಗಳನ್ನು ವಿತರಿಸಲಾಯಿತು.

ಎಸ್.ಜಿ. ಕರಂಬಳಕರ ಸಿಆರ್ಪಿ ಸಂತಿಬಸ್ತವಾಡ ಇವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದ ಉದ್ದೇಶವನ್ನು ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಶಾಲೆಯ ಮುಖ್ಯಾಧ್ಯಾಪಕರಾದ ಎ.ಡಿ. ಪಾಟೀಲ ಇವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಕ್ಕೆ ಬಂದ ಎಲ್ಲಾ ಮಕ್ಕಳಿಗೂ, ಶಿಕ್ಷಕರಿಗೂ ಅತಿಥಿಗಳಿಗೂ ಭೋಜನದ ವ್ಯವಸ್ಥೆ ನೀಡಿ ಪುಂಡಲೀಕ ಭುಜರಂಗ ಪಾಟೀಲ ಇವರು ಸಹಕರಿಸಿದರು.

ಈ ಕಾರ್ಯಕ್ರಮದ ಸಂಚಾಲನೆಯನ್ನು ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಎ.ಡಿ. ಪಾಟೀಲ ಇವರು ನೆರವೇರಿಸಿದರು.  ಶ್ರೀಮತಿ ಹಂಗರಗೇಕರ ಇವರು ಆಭಾರ ಮನ್ನಣೆ ಮಾಡಿದರು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಸ್ಡಿಎಮ್ಸಿ ಅಧ್ಯಕ್ಷರಾದ ಮಲ್ಲಪ್ಪಾ ಪಾಟೀಲ, ನಿಂಗಪ್ಪಾ ದೇಸೂರಕರ, ಬಾಳು ಪಾಟೀಲ, ಕೃಷ್ಣಾ ಪಾಟೀಲ, ಮಹಾದೇವ ಪಾಟೀಲ, ನಾರಾಯಣ ಪವಾರ, ಶ್ರೀಮತಿ ವಿದ್ಯಾ ಪಾಟೀಲ ಎಲ್ಲಾ ಸದಸ್ಯರು ಹಾಗೂ ಮೊನಪ್ಪಾ ಪಾಟೀಲ, ಎಪಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ, ಜೊತೆಗೆ ಕೆ.ಎಚ್. ಬೆಲಗಾವಿ ಹಾಗೂ ಆರ್.ಕೆ. ಗುರವ ಇವರೆಲ್ಲರೂ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಸಹಕರಿಸಿದರು.

loading...

LEAVE A REPLY

Please enter your comment!
Please enter your name here