ಪ್ರವಾದಿ ಮೊಹಮ್ಮದ್‍ರವರ ಜನ್ಮೋತ್ಸವ ಉತ್ಸವ ಸಮೀತಿ ಅಸ್ಥಿತ್ವಕ್ಕೆ

0
57

ಬಾಗಲಕೋಟೆ 18: ನವನಗರದ ಅಂಜುಮನ್ ರಿಪಾಹೆ ಆಮ್ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ದಿನಾಂಕ:17-12-2014ರಂದು ಪ್ರವಾದಿ ಮೊಹಮ್ಮದ್(ಸ್ವ)ರವರ ಜನ್ಮೋತ್ಸವದ £ಮಿತ್ಯ ಸೀರತ್ ಕಮೀಟಿ(ಉತ್ಸವ ಸಮೀತಿ)ರಚನೆ ಮಾಡಲಾಯಿತು.
ಕಳೆದ ದಿನಾಂಕ:15-12-2014ರಂದು ನಡೆದ ಸರ್ವ ಸದಸ್ಯರ ಸಮಾನ್ಯ ಸಭೆಯಲ್ಲಿ ಸೀರತ್ ಕಮೀಟಿಯ ರಚನೆಯಲ್ಲಿ ನಗರದ ಉಲ್ಮಾ ಹಾಗೂ ಪೇಶ ಇಮಾಮರುಗಳಿಗೆ ಆಯ್ಕೆ ಮಾಡಲು ತಿರ್ಮಾನಿಸಲಾಗಿತ್ತು ಆದರ ಪ್ರಕಾರ ಇಂದು ದಿನಾಂಕ:17-12-2014ರಂದು ಸೀರತ್ ಕಮೀಟಿ ರಚನೆಗೆ ಬಂದಿದೆ ಎಂದು ತಿಳಿಸಿದ್ದು ಅಂಜುಮನ್ ರಿಫಾಹೆ ಆಮ್ ಸಂಸ್ಥೆಯ ಅಧ್ಯಕ್ಷ ಮೈನುದ್ದೀನ ನಬಿವಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬರುವ ಜನೇವರಿ 3ಹಾಗೂ 4-2015ರಂದು ನಡೆಯಲಿರುವ ಪ್ರವಾದಿ ಮೊಹಮ್ಮದ್(ಸ್ವ)ರವರ ಜನ್ಮೋತ್ಸವದ ಅಂಗವಾಗಿ ಸೀರತ್ ಕಮೀಟಿಯ ಅಧ್ಯಕ್ಷರಾಗಿ ನಗರದ ಬಡಿ ಮಸ್ಜೀದ ಪೇಶ ಇಮಾಮರಾದ ಮಹಮ್ಮದಗೌಸ.ಕಾಜಿ, ಉಪಾಧ್ಯಕ್ಷರಾಗಿ ಜಾಮೀಯಾ ಮಸ್ಜೀದ ಪೇಶ ಇಮಾಮರಾದ ಎಸ್.ಎಸ್.ಕಂಗೈವಾಲೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೂಬಲ್ಲೀಗ ಮಹೆಬೂಬ.ಮ£ಯಾರ ಹಾಗೂ ಸದಸ್ಯರಾಗಿ ಮೌಲಾನಾ ವಸೀಅಹ್ಮದ, ಮೌಲಾನಾ ಅಮಾನುಲ್ಲಾ, ಮೌಲಾನಾ ಉಬೇದುಲ್ಲಾ ಖಾದರಿ, ಮೌಲಾನಾ ಅಬುಲ್‍ಕಲಾಮ, ಮೌಲಾನಾ ಶಮ್ಸ್‍ತಬರೇಜ್ ಆಲಂ, ಹಾಪೀಜ ಜಹಾಂಗೀರ, ಮೌಲಾನಾ ಅಬ್ದುಲ್ ಮೊಹಿನ್, ಮೌಲಾನಾ ಖಾರಿ ಸಮಿಉಲ್ಲಾ ಇವರುಗಳು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಮೈನುದ್ದೀನ ನಬಿವಾಲೆ ತಿಳಿಸಿದ್ದಾರೆ. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಬ್ಬಿರಅಹ್ಮದ.ಜಮಖಂಡಿ, ಪ್ರಧಾನ ಕಾರ್ಯದರ್ಶಿ ಮಹ್ಮದಆರೀಫ.ಢಾಲಾಯತ, ಖಜಾಂಚಿ ಇಮ್ರಾನ್ ದೊಡಮ£, ನಿರ್ದೇಶಕರಾದ ಇಮಾಮಜಾಫರ ಬೇಪಾರಿ, ಮಹಿಬೂಬ.ಬಾಗವಾನ, ಅಕ್ಬರ್ ಮುಲ್ಲಾ, ರಜಾಕ ಹಳ್ಳೂರ, ಅಬ್ದುಲ್‍ರಜಾಕ.ಬೇನೂರ, ಅಕ್ರಮ ಶಾಹಪೂರ, ಇಮಾಮಹುಸೇನ.ಅದೋನಿ, ನಗರದ ಎಲ್ಲ ಮಸ್ಜೀದಗಳ ಪೇಶ ಇಮಾಮ ಹಾಗೂ ಗಣ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here