ಮರಳು ಗಣಿಗಾರಿಕೆ ಹೆಸರಿನಲ್ಲಿ ರಾಜ್ಯಾದ್ಯಂತ ಲೂಟಿ

0
33

ಬೆಳಗಾವಿ, ಡಿ.19- ಮರಳು ಗಣಿಗಾರಿಕೆ ಹೆಸರಿನಲ್ಲಿ ರಾಜ್ಯಾದ್ಯಂತ ಲೂಟಿ ನಡೆಯುತ್ತಿದೆ ಎಂದು ವಿಧಾನಸಭೆಯಲ್ಲಿ ಶಾಸಕರು ಆಕ್ರೋಶ ವ್ಯಕ್ತ ಪಡಿಸಿದರು. ರಾಜ್ಯದಲ್ಲಿ ನಿರ್ಮಾಣ ಕಾರ್ಯಗಳಿಗೆ ಮರಳು ಸಿಗದೆ ಅಭಾವ ಎದುರಾಗಿದೆ ಆದರೆ ಗಡಿಯ ಜಿಲ್ಲೆಗಳಿಂದ ನೆರೆಯ ಕೇರಳ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಿಗೆ ಅಕ್ರಮ ಸಾಗಾಟವಾಗುತ್ತಿದೆ ಎಂದು ಆರೋಪಿಸಿದರು.
ಆರಂಭದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಅಕ್ರಮ ಮರಳು ಸಾಗಾಣಿಕೆಯ ನೈತಿಕ ಹೊಣೆಯನ್ನು ಲೋಕೋಪಯೋಗಿ ಸಚಿವರು ಹೊತ್ತುಕೊಳ್ಳಬೇಕಿದೆ ಎಂದು ಆರೋಪಿದರು.
ರಾಜ್ಯಕ್ಕೆ ಪ್ರತಿದಿನ 23 ದಶಲಕ್ಷ ಟನ್ ಮರಳಿನ ಅಗತ್ಯವಿದೆ. ಆದರೆ 8.5 ಮೆಟ್ರಿಕ್ ಟನ್ ಮರಳು ಮಾತ್ರ ಸಿಗುತ್ತಿದೆ. ಮರಳಿನ ಕೊರತೆಯಿಂದಾಗಿ ಶಂಕುಸ್ಥಾಪನೆಯಂತಹ ಸರ್ಕಾರಿ ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿವೆ. ರಾಜ್ಯದಲ್ಲಿ 1540 ಮರಳಿನ ಬ್ಲಾಕ್‍ಗಳನ್ನು ಗುರುತಿಸಲಾಗಿದೆ. 640 ಬ್ಲಾಕ್‍ಗಳಲ್ಲಿ ಮಾತ್ರ ಮರಳು ತೆಗೆಯಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಭೀಕರ ಮರಳಿನ ಕೊರತೆಯಿದ್ದರೂ ನೆರೆರಾಜ್ಯಗಳಿಗೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ಮೂಲಕ ಸಾವಿರಾರು ರೂಪಾಯಿಗಳ ಲೂಟಿ ಮಾಡಲಾಗುತ್ತಿದೆ. ಕೇರಳಕ್ಕೆ ಪ್ರತಿದಿನ ಸಾವಿರಾರು ಲಾರಿಗಳ ಮರಳು ಸಾಗಾಣಿಕೆಯಾಗುತ್ತಿದೆ. ಆದರೆ ಈ ಬಗ್ಗೆ ನಮ್ಮ ರಾಜ್ಯದ ಚೆಕ್‍ಪೆÇೀಸ್ಟ್‍ಗಳಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ. ಕೇರಳ ರಾಜ್ಯದ ಗಡಿಭಾಗದ ಚೆಕ್‍ಪೆÇೀಸ್ಟ್‍ನಲ್ಲಿ ದಂಡ ಪಾವತಿಸಿ ಅಲ್ಲಿಗೆ ಮರಳು ಸಾಗಿಸಲಾಗುತ್ತಿದೆ. ಹಿಂದಿನ ಸರ್ಕಾರ ಮಾಡಿದ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಲೂಟಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಕಂದಾಯ, ಗಣಿ, ಗೃಹ, ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆ ಸೇರಿ ಮರಳು ಗಣಿಗಾರಿಕೆಯನ್ನು ಗುರುತಿಸಬೇಕು ಮತ್ತು ಅನುಮತಿ ನೀಡಬೇಕಿದೆ. ಆದರೆ ಈ ಐದು ಇಲಾಖೆಗಳ ನಡುವೆ ಸಾಮರಸ್ಯ ಇಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ಬಿಜೆಪಿ ಬಸವರಾಜ್ ಬೊಮ್ಮಯಿ ಮಧ್ಯಪ್ರವೇಶಿಸಿ, ಐದು ಇಲಾಖೆಗಳ ನಡುವೆ ಸಿಲುಕಿದ ಮರಳು ಸ್ಥಿತಿ ಪಂಚ ಪಾಂಡವರ ನಡುವಿನ ದೌಪ್ರದಿಯಂತಾಗಿದೆ ಎಂದು ವಿಷಾದಿಸಿದರು.
ಮಾತು ಮುಂದುವರೆಸಿದ ಕುಮಾರ ಸ್ವಾಮಿಯವರು, ಮರಳು ಲೂಟಿಯಾಗುತ್ತಿದೆ. ಫಿಲ್ಟರ್ ಮರಳು ಅನಧಿಕೃತವಾಗಿ ನಡೆಯುತ್ತಿದೆ. ಇದು ಅಪಾಯಕಾರಿ ಎಂದು ಆತಂಕ ವ್ಯಕ್ತ ಪಡಿಸಿದರು.
ಮರಳಿನ ಅಕ್ರಮ ಸಾಗಾಣಿಕೆಗೆ ಲೋಕೋಪಯೋಗಿ ಸಚಿವರೆ ನೈತಿಕ ಹೊಣೆ ಹೊರಬೇಕು ಎಂದಾಗ ಆಡಳಿತ ಪಕ್ಷದ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಗದ್ದಲ ಉಂಟಾದಾಗ ಸಭಾಧ್ಯಕ್ಷರು ಕಲಾಪವನ್ನು ಬೋಜನ ವಿರಾಮಕ್ಕೆ ಮುಂದೂಡಿದರು.
ಇದಕ್ಕೂ ಮೊದಲು ಮರಳಿನ ಕುರಿತು ಗಂಭೀರ ಚರ್ಚೆ ನಡೆಯುತ್ತಿದ್ದಾಗ ಐದು ಇಲಾಖೆಗಳ ಯಾವ ಸಚಿವರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಹಾಜರಿಲ್ಲದಿರುವ ಕುರಿತು ಪ್ರತಿಪಕ್ಷಗಳ ಶಾಸಕರು ಆಕ್ರೋಶ ವ್ಯಕ್ತ ಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು ಸರ್ಕಾರಕ್ಕೆ ತೀಕ್ಷ್ಣವಾಗಿ ಸೂಚನೆ ನೀಡಿದರು.
ಬೋಜನ ವಿರಾಮದ ನಂತರ ಮಾತನಾಡಿದ ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಮರಳು ಅಕ್ರಮ ಸಾಗಾಣಿಕೆಯಿಂದ ಆರು ಸಾವಿರ ಕೋಟಿ ರೂ. ಭ್ರಷ್ಟಚಾರ ನಡೆಯುತ್ತಿದೆ. ನೆರೆಯ ಆಂಧ್ರ ಪ್ರದೇಶದಲ್ಲಿ ಮರಳು ಗಣಿಗಾರಿಕೆಯಿಂದ 3 ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸಲಾಗುತ್ತಿದೆ. ನಮ್ಮಲ್ಲಿ ಮೂರು ರೂ. ರಾಜಧನ ಮತ್ತು 200 ಕೋಟಿ ರೂ. ದಂಡ ಸೇರಿ 500 ಕೋಟಿ ರೂ. ಮಾತ್ರ ಆದಾಯ ಬರುತ್ತಿದೆ. ಸುಮಾರು ಆರು ಸಾವಿರ ಕೋಟಿ ರೂ. ಭ್ರಷ್ಟಚಾರ ಇದರಲ್ಲಿ ನಡೆಯುತ್ತಿದೆ.
ಪ್ರತಿ ಲೋಡ್‍ಗೆ 50 ರಿಂದ 80 ಸಾವಿರ ರೂ. ಮಾರಾಟವಾಗುತ್ತಿದೆ. ಆದಾಯ ಎಷ್ಟು ಬರಬೇಕು ಎಂಬ ಅಂದಾಜು ಮಾಡಿ ಎಂದ ಅವರು, 2011ರ ಮರಳು ನೀತಿಯಲ್ಲಿ ಲೋಪವಿದ್ದರೆ ಬದಲಾವಣೆ ಮಾಡಿ ನಾವು ಸಹಕರಿಸುತ್ತೇವೆ. ಒಟ್ಟಿನಲ್ಲಿ ಜನಸಾಮಾನ್ಯರಿಗೆ 3ರಿಂದ 4 ಸಾವಿರ ರೂ.ಗೆ ಒಂದು ಲೋಡು ಮರಳು ಸಿಗುವಂತೆ ಮಾಡಿ ಎಂದು ಸಲಹೆ ನೀಡಿದರು.
ಶಾಸಕರಾದ ಗೋವಿಂದ ಕಾರಜೋಳ, ಚಲುವರಾಯಸ್ವಾಮಿ, ಸಿ.ಟಿ.ರವಿ, ಜೀವರಾಜ್, ಎಂ.ಟಿ.ಕೃಷ್ಣಪ್ಪ, ನಿಂಗಯ್ಯ ಚರ್ಚೆಯಲ್ಲಿ ಭಾಗವಹಿಸಿದರು.

loading...

LEAVE A REPLY

Please enter your comment!
Please enter your name here