ಕಾಂಗ್ರೆಸ್‍ನಿಂದ ಮುನವಳ್ಳಿ, ಬಾಬುಲಾಲ, ಸುಜಾತಾ ಉಚ್ಛಾಟನೆ

0
21

ಬೆಳಗಾವಿ:19 ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಮುಖಂಡರ ಬಗ್ಗೆ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ಪಕ್ಷದ ವರ್ಚಸಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ, ಕೆಪಿಸಿಸಿ ಸದಸ್ಯ ಬಾಬುಲಾಲ ಬಾಗವಾನ ಹಾಗೂ ಸುಜತಾ ಉಲ್ಲಾಳ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಕೆಪಿಸಿಸಿ ಪ್ರದಾನಕಾರ್ಯದರ್ಶಿ ಎನ್.ಎಸ್.ಬೋಸರಾಜು ಆದೇಶ ಮಾಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೂವರಿಗೂ ಕಳೆದ ನವಂಬರ 28 ರಂದು ಕೆಪಿಸಿಸಿಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಒಂದು ವಾರದೊಳಗೆ ಸ್ಪಷ್ಟೀಕರಣ ತಿಳಿಸುವಂತೆ ಪಕ್ಷ ಸೂಚಿಸಿತ್ತು. ಆದರೆ ಈ ಮೂವರಿಂದ ಯಾವುದೇ ಸ್ಪಷ್ಟೀಕರಣ ಬಾರದೆ ಇರುವ ಕಾರಣ ಬೋಸರಾಜು ಅವರು ಉಚ್ಛಾಟಣೆಯ ಕ್ರಮ ಕೈಗೊಂಡಿದ್ದಾರೆಂದು ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here