ನಗರದ ಸಮಸ್ಯಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ವಿಫಲ:

0
40

ಕಾಂಗ್ರೆಸ್ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ಹಾವೇರಿ 22-ನಗರದ ಜನತೆಯು ಹಲವಾರು ಸಮಸ್ಯೆಗಳಿಂದ ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಸಮಸ್ಯೆಗೆ ಸ್ಪಂದಿಸ ಬೇಕಾದ ನಗರ ಸಭೆಯ ಅಧಿಕಾರಿಗಳು ನಿರ್ಲಕ್ಷ್ಯವೆ ಕಾರಣವೆಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ನಗರ ಸಭೆಯ ವಿರೋಧಿ ಕಾಂಗ್ರೆಸ್ ಸದಸ್ಯರುಗಳು ವಿರೋಧ ಪಕ್ಷದ ನಾಯಕರಾದ ಬಾಬುಸಾಬ ಮೊಮಿನಗಾರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಇಂತಹ ಮಳೆಗಾಲದಲ್ಲಿಯು ಸಾರ್ವ ಜನಿಕರಿಗೆ 10 – 15 ದಿನಕ್ಕೂಮ್ಮೆ ಕುಡಿಯುವ ನೀರನ್ನು ಒದಗಿಸ ಲಾಗುತ್ತಿದ್ದು ಜನತೆ ನೀರಿಗಾಗಿ ಸಾಕಷ್ಟು ಅಲೆದಾಡುವ ಪರಿಸ್ಥಿತಿ ಒಂದಡೆ ಆದರೆ ಇನ್ನೊಂದಡೆ ನೀರಿಗಾಗಿ ರಸ್ತೆ ತಡೆ, ಪ್ರತಿಭಟನೆ ನಡೆಯುತ್ತಿದ್ದು ದಿನ ನಿತ್ಯವು ಚುನಾಯಿತ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುವದು ಸಾಮಾನ್ಯವಾಗಿ ಹೋಗಿದೆ ಈ ಸಮಸ್ಯೆಗೆ ಅಧಿಕಾರಿಗಳ ನೇರ ಹೊಣೆಗಾರರಾಗಿದ್ದಾರೆಂದು ಜಿಲ್ಲಾ ಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಇಂತಹ ಪರಿಸ್ಥಿತಿಯಲ್ಲಿ ನಗರ ಸಭೆಗೆ ಕುಡಿಯು ನರಿನ ಕರವನ್ನು 55 ರೂ.ಯಿಂದ 120 ರೂ.ಗೆ ಏರಿಕೆ ಮಾಡಲು ಸರ್ಕಾರದ ಆದೇಶ ಬಂದಿದ್ದು ಕರ ಹೆಚ್ಚಳ ಮಾಡುವ ಮುನ್ನ ನಾವು ಜನತೆಗೆ ಎಷ್ಟು ದಿನಕ್ಕೂಮ್ಮೆ ನೀರು ಕೊಡುತ್ತಿದ್ದೇವೆ, ಎಷ್ಟು ಪ್ರಮಾಣ ದಲ್ಲಿ ಕೊಡುತ್ತಿದ್ದೇವೆ ಎಂಬುವದರ ಬಗ್ಗೆ ಆಲೋಚಿಸಿ ಎಂದು ತಿಳಿಸಿವ ಕಾಂಗ್ರೆಸ್ ಸದಸ್ಯರುಗಳು ಜನೆಗೆ 2 – 3 ದಿನ ಕ್ಕೂಮ್ಮೆ ನೀರು ಕೊಟ್ಟು ಕರ ಏರಿಕೆ ಮಾಡಿ ಈ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಕರ ಹೆಚ್ಚಳಕ್ಕೆ ನಮ್ಮದು ವಿರೋಧವಿದೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದಲ್ಲಿ ಮನವರಿಕೆ ಮಾಡಿ ದ್ದಾರೆ.

ಇನ್ನು ನಗರದಲ್ಲಿ ಕೈಗೊಳ್ಳಲಾಗಿರುವ ಯು.ಜಿ.ಡಿ. ಕಾಮಗಾರಿಯು ಆಮೆ ವೇಗದಲ್ಲಿ ನಡೆದಿದ್ದು ಇದರಿಂದ ಸಾರ್ವಜನಕರ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಿದ್ದು ನಗರದ ರಸ್ತೆಗಳು, ಹಾಗೂ ಚರಂಡಿಗಳು ಸಂಪೂರ್ಣ ಹಾಳಾಗಿ ಹೋಗಿವೆ ಈ ಬಗ್ಗೆ ಕೇಳುವವರೆ ಇಲ್ಲದಾಗಿದ್ದು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ಚರಂಡಿಗಳು ತುಂಬಿ ಹೋಗಿದ್ದು ಎಲ್ಲಿ ಬೇಕಂದರಲ್ಲಿ ಕಸದ ರಾಶಿಗಳು ನಗರದ ನೈರ್ಮಲ್ಯಿಕರಣವನೆ ಹದಗೆಟ್ಟು ಹೋಗಿದ್ದರು ಕೂಡಾ ಸಂಭಂದಿಸಿದ ಅಧಿಕಾರಿಗಳ ನಿರ್ಲಕ್ಷ್ಯವೆ ಇದಕ್ಕೆ ಕಾರಣವೆಂದು ಆರೋಪಿಸಿದ್ದು ಈ ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ನಗರ ಸಭೆಯ ಸದಸ್ಯರುಗಳಾದ ಗಣೇಶ ಭಿಷ್ಟಣ್ಣನವರ, ಪರಮೇಶ ಒಲಿ, ಅಬ್ದುಲ್ ರಜಾಕ್ ಜಮಾದರ, ಕಾಂಗ್ರೆಸ್ ಮುಖಂಡರುಗಳಾದ ರೀಯಾಜ್ ಅಹ್ಮದ್ ಶಿಡಿಗನಾಳ, ಅಬ್ದುಲ್ ವಾಹಬ್ ಮಾಣಿಕ್, ಸಿದ್ದಪ್ಪ ಬಿರಾದರ, ಎಸ್. ಎನ್. ಸುಂಕದ, ದ್ಯಾಮಣ್ಣ ಅರಸನಾಳ, ರಾಮಣ್ಣ ಅಗಡಿ, ಬಾಷಾಸಾಬ ಕಾಲಶೇಖರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು.

 

loading...

LEAVE A REPLY

Please enter your comment!
Please enter your name here