ಉ.ಕ.ಅಭಿವೃದ್ಧಿ ಮರೆತ ನಮ್ಮ ಸಚಿವ, ಶಾಸಕರು ಇವರಿಗೆ ಸದನದಲ್ಲಿ ಧ್ವನಿ ಎತ್ತಲು ಏನಾಗಿತ್ತು

0
60

 

ರಾಜಶೇಖರಯ್ಯಾ ಹಿರೇಮಠ

ಬೆಳಗಾವಿ:21 ಉತ್ತರ ಕರ್ನಾಟಕದ ಅಭಿವೃದ್ಧಿ, ವಿವಿಧ ಹೊಸ ಯೋಜನೆಗಳು ಹಾಗೂ ಈ ಭಾಗದ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬೆರಳೆಣಿಕೆಯ ಶಾಸಕರನ್ನು ಬಿಟ್ಟರೇ, ಉಳಿದ ಶಾಸಕರು ಧ್ವನಿ ಎತ್ತಲೇ  ಇಲ್ಲ. ಇವರಿಗೆ ಈ ಭಾಗದ ಅಭಿವೃದ್ಧಿಯಪಡಿಸುವ ಮತ್ತು ಅವರ ಕ್ಷೇತ್ರದ ಸಮಸ್ಯೆಗಳು ಕಣ್ಣಿಗೆ ಕಾಣಲಿಲ್ಲವೇ ಎಂಬುದು ಉ.ಕ ಜನರನ್ನು ಕಾಡುತ್ತಿದೆ.

ಉತ್ತರ ಕರ್ನಾಟಕದ ಶಾಸಕರು ಸದನದಲ್ಲಿ ಸರಕಾರ ಅಧಿವೇಶನ ನಡೆಸುತ್ತಿದೇ ಯಾವ ಯಾವ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತದೆ, ಎಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತದೆ ಎಂಬುದುನ್ನು ಕಾದು ಕುಳಿತರೇ ವಿನಹ ತಮ್ಮ ಕ್ಷೇತ್ರದ ಸಮಸ್ಯೆಯನ್ನು ಸದನದಲ್ಲಿ ಚರ್ಚೆ ನಡೆಸದೇ ತೆಪ್ಪಗೆ ಕೂಳಿತುಕೊಂಡು ಕಾಲಹರಣ ಮಾಡಿದ ಇಂಥ ಶಾಸಕರು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಎಷ್ಟರ ಮಟ್ಟಿಗೆ ಉತ್ತರ ಕರ್ನಾಟಕದ ಸಮಸ್ಯೆಯ ಕುರಿತು ಚರ್ಚೆ ನಡೆಸುತ್ತಾರೆ ಎಂಬುದು ಈ ಭಾಗದ ಜನರಲ್ಲಿ ಅನುಮಾನ ಹುಟ್ಟಿಸಿದೆ.

ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವ ಮನಸ್ಸು ಈ ಭಾಗದ ಶಾಸಕರಲ್ಲಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉತ್ತರ ಕರ್ನಾಟಕದ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲ ಅಧಿವೇಶನವನ್ನು ಒಲ್ಲದ ಮನಸ್ಸಿನಿಂದ 10 ದಿನಗಳ ಕಾಲ ಕಾಟಾಚಾರದ ಅಧಿವೇಶನ ನಡೆಸಿ, ಇಲ್ಲಿಂದ ಕಾಲ್ಕೀಳಲು ನೋಡಿದರು. ಸ್ಪಷ್ಟ ನಿರ್ಧಾರದಿಂದ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಅವರ ಇಚ್ಛಾಶಕ್ತಿಯಾಗಿರಲಿಲ್ಲ.

ಅವರಿಗೆ ಬೆಂಬಲವಾಗಿ ಈ ಭಾಗದ ಶಾಸಕರುಗಳು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಹೇಳುವ ಬದಲು ನಿದ್ರೆಗೆ ಜಾರಿ ಅಭಿವೃದ್ಧಿಪಡಿಸಬೇಕಾದ ವಿಚಾರವನ್ನೇ ಮರೆತು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾನೆ ಎಂದು ನಂಬಿ ಮತ ನೀಡಿದ ಮತದಾರರಿಗೆ ಅನ್ಯಾಯ ಮಾಡಿದ್ದಾರೆ.

ಉತ್ತರ ಕರ್ನಾಟಕದ ಸಚಿವ, ಶಾಸಕರು ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂಧಿಸಬೇಕಾದ ಸಮಯದಲ್ಲಿ ಸ್ಪಂದಿಸದೇ ಹೊದರು. ಈಗಂತೂ ಅಧಿವೇಶನ ಮುಗಿಯಿತು ಇನ್ನು ಕ್ಷೇತ್ರದಲ್ಲಿ ಸುತ್ತಾಡಿ ಚರಂಡಿ, ರಸ್ತೆ ಮುಂತಾದ ಸಹಜ ಕಾರ್ಯಗಳನ್ನು ಬರುವ ಚಳಿಗಾಲದ ಅಧಿವೇಶನದ ವರೆಗೂ ಮುಂದುವರೆಸಿ ಮತ್ತೇ ಬೆಂಗಳೂರಿನ ಅಧಿವೇಶನಕ್ಕೆ ಹಾಜರಾಗುವ ನಮ್ಮ ಸಚಿವ, ಶಾಸಕರು ಕ್ಷೇತ್ರಕ್ಕೆ ಅನರ್ಹರರು ಎಂದರೆ ತಪ್ಪಾಗಲಾರದು.

ಉತ್ತರ ಕರ್ನಾಟಕದ ಸಮಸ್ಯೆ ಒಂದೇಡೆ ಇರಲಿ, ಈ ಭಾಗದ ಸಚಿವ, ಶಾಸಕರು ತಮ್ಮ ವ್ಯಾಪ್ತಿಯ ಕ್ಷೇತ್ರಗಳ ಬೇಕುಬೇಡಗಳನ್ನು ಹೇಳಿಕೊಳ್ಳಲಾಗದ ಹೇಡಿಗಳಂತೆ ಸದನದಲ್ಲಿ ವರ್ತಿಸಿದ್ದು ತಲೆತಗ್ಗಿಸುವ ಮಾತಾಗಿದೆ. ಮಠಾಧೀಶರು ಕೂಡಾ ಅಭಿವೃದ್ಧಿಯ ಕೂಗು ಹಾಕಿ ಒಂದು ದಿನ ಧರಣಿ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸಿದರೂ ಅಂಥ ಯಾವುದೇ ಬಿಸಿ ಸರಕಾರಕ್ಕೆ ತಟ್ಟದೆ ಹೋಗಿದ್ದು ಲಜ್ಯೆಗೇಡಿತನವಾಗಿದೆ.

ಬೆಳಗಾವಿಯ ಅಧಿವೇಶನ ವ್ಯರ್ಥ ಕಾಲಹರಣದ ಅಧಿವೇಶನವಾಗಿದೆ. 12 ದಿನಗಳ ಸಂತೆ ಪೂರೈಸಿಕೊಂಡ ಬೆಳಗಾವಿ ಸುವರ್ಣ ಸೌಧ ಮತ್ತೇ ಒಂದು ವರ್ಷಗಳ ಕಾಲ ಭೂತದ ಬಂಗಲೆಯಾಗಿ ಕಂಗೋಳಿಸಲಿದೆ.

 

 

ಉತ್ತರ ಕರ್ನಾಟಕದ ಸಚಿವ, ಶಾಸಕರು ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂಧಿಸಬೇಕಾದ ಸಮಯದಲ್ಲಿ ಸ್ಪಂದಿಸದೇ ಹೊದರು. ಈಗಂತೂ ಅಧಿವೇಶನ ಮುಗಿಯಿತು ಇನ್ನು ಕ್ಷೇತ್ರದಲ್ಲಿ ಸುತ್ತಾಡಿ ಚರಂಡಿ, ರಸ್ತೆ ಮುಂತಾದ ಸಹಜ ಕಾರ್ಯಗಳನ್ನು ಬರುವ ಚಳಿಗಾಲದ ಅಧಿವೇಶನದ ವರೆಗೂ ಮುಂದುವರೆಸಿ ಮತ್ತೇ ಬೆಂಗಳೂರಿನ ಅಧಿವೇಶನಕ್ಕೆ ಹಾಜರಾಗುವ ನಮ್ಮ ಸಚಿವ, ಶಾಸಕರು ಕ್ಷೇತ್ರಕ್ಕೆ ಅನರ್ಹರರು

loading...

LEAVE A REPLY

Please enter your comment!
Please enter your name here