ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ;ಸರಕಾರ ರೈತರ ವಿರೋಧಿಯಾಗಿದೆ

0
80

ಯಲಬುರ್ಗಾ,ಡಿ,24; ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಸರಕಾರವು ರೈತರ ವಿರೋಧಿಯಾಗಿದೆ ಯಾವ ಒಬ್ಬ ಶಾಸಕರು ಕೂಡಾ ರೈತರ ಪರವಾಗಿ ಧ್ವನಿಗೂಡಿಸಿಲ್ಲ, ರಾಜ್ಯದ ಹಲವಾರು ಕಡೆ ರೈತರು ಸಾಲದಿಂದ ಆತ್ಮಹತ್ಯ ಮಾಡಿಕೊಳ್ಳೂತ್ತಿದ್ದಾರೆ. ತಾವು ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯಗೆ ಶರಣಾಗುತ್ತಿದ್ದಾರೆ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳೂ ಜನಪ್ರತಿನಿಧಿಗಳು ಮುಂದೆ ಬಂದು ರೈತರ ಸಮಸ್ಯಕ್ಕೆ ಪರಿಹಾರ ನೀಡಬೇಕಾಗಿದೆ ಎಂದು ಪ್ರಗತಿಪರ ರೈತ ಕೃಷಿ ಪ್ರಶಸ್ತಿ ವಿಜೇತ ರಸೂಲಸಾಬ ಹಿರೇಮನಿ ಒತ್ತಾಯಿಸಿದರು. ತಾಲೂಕಾ ಕೃಷಿ ಇಲಾಖೆ ಇಲ್ಲಿಯ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ರೈತರು ಹಗಲಿರುಳು ತಮ್ಮ ಜೀವನವನ್ನೇ ಕೃಷಿಗಾಗಿ ಮುಡುಪಾಗಿ ಇಟ್ಟಿದ್ದಾರೆ.ಆದರೆ ಅವರ ದುಡಿಮಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ.ಈ ಭಾಗದಲ್ಲಿ ಸಾಕಷ್ಟು ರೈತರು ದಾಳಿಂಬೆಯನ್ನು ಬೆಳೆಯುವ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನೇ ಅನುಭವಿಸಿದ್ದಾರೆ.ಅವರ ನೆರವಿಗೆ ರಾಜ್ಯ ಸರಕಾರ ಬರದಲಿಲ್ಲ.ಆದರೆ ದಕ್ಷೀಣ ಕನ್ನಡ ಜಿಲ್ಲೆಯಲ್ಲಿ ಕಾಫಿ,ಮತ್ತು ಅಡಿಕೆ ಬೆಳೆಗಾರರು ನಷ್ಟ ಅನುಭವಿಸಿದರೆ ಸರಕಾರ ಅವರ ನೆರವಿಗೆ ಪರಿಹಾರ ಕೊಡುತ್ತೆ.ಆದರೆ ನಮಗೆ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ನಿಜಕ್ಕೂ ಖೇದಕರ ಸಂಗತಿ ಎಂದರು.
ಹಿರಿಯ ರೈತ ಮುಖಂಡ ತಿರುಗುಣೇಪ್ಪ ಬೆಟಗೇರಿ ಮಾತನಾಡಿ,ರೈತರು ಎಂದಿಗೂ ಅತ್ಮಹತ್ಯೆ ಮಾಡಿಕೊಳ್ಳಬೇಡಿ.ಅತ್ಮಹತ್ಯೆ ಒಂದೇ ದಾರಿಯಲ್ಲ.ತಮ್ಮ ಜೀವನುದ್ದಕ್ಕೂ ಹೋರಾಡುವಂತಾ ಪ್ರವೃತ್ತಿಯ ಮನೋಭಾವನೆಯನ್ನು ಬೆಳೆಸಿಕೊಳ್ಳಿ.. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಸಹ ನಾಡಿಗೆ ಅನ್ನದಾತನಾಗಿರುವ ರೈತರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ.ಅವನ ಮಾತಿಗೂ ಸ್ವಾತಂತ್ರವಿಲ್ಲ.ಈ ನಾಡಿನ ಅನ್ನದಾತನಾಗಿರುವ ರೈತಾಪಿ ವರ್ಗವನ್ನು ಸರಕಾರವು ಸಂಪುರ್ಣ ನಿರ್ಲಕ್ಷ ಮನೋಭಾವನೆಯಿಂದ ನೋಡುತ್ತಿದೆ.ಅವನು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡದೆ ಅಲೆದಾಡುವಂತಾ ಸ್ಥಿತಿ ಮಾಡುತ್ತಿದ್ದಾನೆ.ಇದರಿಂದಾಗಿ ರೈತ ಬೇಸತ್ತಿದ್ದಾನೆ.ನಾಡಿಗೆ ಸ್ವಾತಂತ್ರಯ ಸಿಕ್ಕರೂ ಸಹ ಅವನಿಗೆ ಮಾತ್ರ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ.ಅವನ ಮಾತಿಗೂ ಸಹ ಬೆಲೆ ಇಲ್ಲದಂತಾಗಿದೆ.ಇದರಿಂದ ರೈತರು ಅತ್ಮಹತ್ಯಗೆ ಶರಣರಾಗುತ್ತಿದ್ದಾರೆ.ದಯಾಮಾಡಿ ರೈತರು ಯಾವುದಕ್ಕೂ ಹೆದರದೇ ಅತ್ಯಹತ್ಯೆ ಮಾಡಿಕೊಳ್ಳಬೇಡಿ.ನಮ್ಮಿಂದಲೆ ಸರಕಾರ ನಡೆಯುತ್ತಿದೆ.ರೈತರು ಹೆಡಿಯಲ್ಲ.ಅವನೊಬ್ಬ ಈ ನಾಡಿನ ಅನ್ನದಾತ.ಅನ್ನದಾತನಿಗಾಗಿ ಹನಮಂತಗೌಡ್ರ,ನಂಜುಂಡಸ್ವಾಮಿ ಸೇರಿದಂತೆ ಮತ್ತಿತರರು ಮುಖಂಡರು ತಮ್ಮ ಇಡೀ ಪ್ರಾಣವನ್ನೇ ರೈತರಿಗಾಗಿ ಮುಡುಪಾಗಿ ಇಟ್ಟ ಹೋರಾಟಗಾರರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಹೋರಾಡುವಂತಾ ಕೆಲಸ ಮಾಡಬೇಕಾಗಿದೆ ಎಂದರು.
ರೈತ ಮುಖಂಡರಾದ ಶರಣಪ್ಪ ರಾಂಪೂರು ಮಾತನಾಡಿ,ನಾಡಿನಲ್ಲಿ ರೈತರು ಹಗಲಿರುಳು ದುಡಿದರು ಸಹ ಅವನು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಕಷ್ಟಕರ ಜೀವನವನ್ನು ಸಾಗಿಸುತ್ತಿದ್ದಾನೆ.ಅವರ ನೆರವಿಗೆ ಬರಬೇಕಾದ ಸರಕಾರಗಳು ಮಾತ್ರ ರೈತಾಪಿ ವರ್ಗಕ್ಕೆ ಬೆಂಬಲವಾಗಿ ನಿಲ್ಲುತ್ತಿಲ್ಲ ಎಂದರು.
ರೈತ ಮುಖಂಡ ವೀರನಗೌಡ ಬನ್ನಪ್ಪಗೌಡ್ರ ಮಾತನಾಡಿ,ಹಿಂದುಳಿದ ಯಲಬುರ್ಗಾ ತಾಲೂಕಿನಲ್ಲಿ ಇವತ್ತಿಗೂ ನೀರಾವರಿ ಸೌಕರ್ಯವನ್ನು ಒದಗಿಸುವಲ್ಲಿ ರಾಜ್ಯ ಸರಕಾರ ಮತ್ತು ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳ ನಿರ್ಲಕ್ಷ ಮನೋಭಾವನೆಯಿಂದಾಗಿ ಸದಾ ಬರಗಾಲದಿಂದ ಬಳುತ್ತಿದೆ.ಯಲಬುರ್ಗಾ ಪಟ್ಟಣದಲ್ಲಿ ಉತ್ತಮ ಡಾಂಬರು ರಸ್ತೆಗಳು ಇದ್ದರೂ ಕೂಡಾ ಶಾಸಕರು ಸಾಕಷ್ಟು ಪ್ರಮಾಣದ ಹಣವನ್ನು ಸಿಸಿ ರಸ್ತೆಗೆ ಹಾಕಿ ದುರಸ್ತಿ ಮಾಡುತ್ತಿದ್ದಾರೆ.ಅದೇ ಹಣವನ್ನು ಈ ಭಾಗದ ಬಹು ದಿನಗಳ ಆಶಯವಾಗಿರುವ ಕೃಷ್ಣ ಬಿ ಸ್ಕಿಂ ಯೋಜನೆಗೆ ಬಳಕೆ ಮಾಡಿಕೊಂಡಿದ್ದರೆ ಆ ಯೋಜನೆಗೆ ಸಾರ್ಥಕವಾಗುತ್ತಿತ್ತು ಎಂದರು.
ತಾಲೂಕಾ ಪಂಚಾಯತಿ ಅಧ್ಯಕ್ಷೆ ಮಹಾದೇವಿ ಕಂಬಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಅರ್ಹ ರೈತರಿಗೆ ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಸೌಲಭ್ಯಗಳು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಪ್ರಮಾಣಿಕತೆಯಿಂದ ಮಾಡಿದಾಗ ಮಾತ್ರ ರೈತರಿಗೆ ಯೋಜನೆಗಳು ದೊರೆಯಲು ಸಾಧ್ಯ,ಈ ನಿಟ್ಟಿನಲ್ಲಿ ರೈತರಿಗೆ ಯೋಜನೆಯ ಬಗ್ಗೆ ಸೂಕ್ತವಾದ ಮಾರ್ಗದರ್ಶನ ನೀಡಿದಾಗ ಮಾತ್ರ ಅವರಿಗೆ ಯೋಜನೆಯ ಪರೀಕಲ್ಪನೆ ಅರಿವು ಮೂಡಲು ಸಾಧ್ಯವಾಗುತ್ತದೆ, ಅಧಿಕಾರಿಗಳು ದಕ್ಷತೆಯಿಂದ ರೈತರೊಂದಿಗೆ ಉತ್ತಮ ಭಾಂದವ್ಯದೊಂದಿಗೆ ನಡೆದುಕೊಳ್ಳುವ ಮನೋಭಾªನೆÀ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಮದ್ದಾನಯ್ಯ ಹಿರೇಮಠ,ಬಸವರಾಜ ಮಠದ ಸೇರಿದಂತೆ ಮತ್ತಿತರರು ಮಾತನಾಡಿದರು..ಸಮಾರಂಭದಲ್ಲಿ ರೈತ ಸಂಘದ ಅಧ್ಯಕ್ಷ ಶರಣಯ್ಯ ಮುಳ್ಳೂರುಮಠ,ತಾಪಂ ಉಪಾಧ್ಯಾಕ್ಷ ಶೇಖರಪ್ಪ ವಾರದ,ರೈತ ಸಂಪರ್ಕ ಕೇಂದ್ರ ಅಧಿಕಾರಿ ರಾಘವೇಂದ್ರ ಜಾದವ, ಯಂಕಪ್ಪ ರೆಡ್ಡಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.ಕೃಷಿ ಇಲಾಖೆ ಅಧಿಕಾರಿ ತುಕಾರಾಂ ಪ್ರಾಸ್ತವಿಕವಾಗಿ ಮಾತನಾಡಿ,ಸ್ವಾಗತಿಸಿದರು.ಯುವ ಮುಖಂಡ ಭೀಮಪ್ಪ ಹವಳಿ ನಿರೂಪಿಸಿ,ವಂದಿಸಿದರು.

loading...

LEAVE A REPLY

Please enter your comment!
Please enter your name here