ಕ್ಯೂರಿಂಗ್ ಕಾಣದ ಸಿಸಿ ರಸ್ತೆ; ಪ್ರಾರಂಭದಲ್ಲಿಯೇ ಬಿರುಕು

0
24

ಯಲಬುರ್ಗಾ,ಡಿ,24;ಪಟ್ಟಣದ ಬಸ್ ನಿಲ್ದಾಣದಿಂದ ಪಶು ಆಸ್ಪತ್ರೆವರೆಗೆ ನಿರ್ಮಾಣ ಹಂತದಲ್ಲಿರುವ ಸಿಸಿ ರಸ್ತೆ ಕಾಮಗಾರಿಗೆ ಸರಿಯಾದ ಸಮಯದಲ್ಲಿ ಕ್ಯೂರಿಂಗ್ ಮಾಡದಿರುವದರಿಂದ ರಸ್ತೆ ಮಧ್ಯೆ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ.ತಾಲೂಕಿನ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿಯವರು ವಿವಿಧ ಕಾಮಗಾರಿಗಳನ್ನು ತರುತ್ತಿದ್ದಾರೆ. ಆ ಕಾಮಗಾರಿ ಮಾತ್ರ ಗುಣಮಟ್ಟದಿಂದ ಕೂಡಿರಬೇಕು ಎನ್ನುವ ಆಸೆ ಅವರದ್ದು.ಆದರೆ ಈಗಪಟ್ಟಣದಲ್ಲಿ ಆರಂಭಗೊಂಡಿರುವ ಸಿಸಿ ರಸ್ತೆ ಕಾಮಗಾರಿಯು ಪಟ್ಟಣದ ಬಸ್ ನಿಲ್ದಾಣದಿಂದ ಪಶು ಆಸ್ಪತ್ರೆವರೆಗೆ ಅರ್ಧ ಭಾಗದಲ್ಲಿ ನಿರ್ಮಾಣವಾಗಿದೆ.ಆದರೆ ಕಾಮಗಾರಿಗೆ ಸರಿಯಾದ ಸಮಯಕ್ಕೆ ನಿರ್ಮಾಣ ಮಾಡಿದ ಸಿಸಿ ರಸ್ತೆಗೆ ಸರಿಯಾದ ನೀರು ಕೂಡಾ ಹಾಕುತ್ತಿಲ್ಲ.ನೀರು ಹಾಕಿದರೂ ಕೂಡಾ ಸರಿಯಾಗಿ ಮುಟ್ಟುತ್ತಿಲ್ಲ.ಇದರಿಂದಾಗಿ ರಸ್ತೆಗೆ ನೀರು ಸಮರ್ಪಕವಾಗಿ ಕಾಣುತ್ತಿಲ್ಲ.ಅಲ್ಲದೇ ಕೆಲ ಸಮಯದಲ್ಲಿ ಈ ಸಿಸಿ ರಸ್ತೆಯನ್ನು ಸಂಬಂದಿಸಿದ ಗುತ್ತಿಗೆದಾರರು ರಾತ್ರಿ ಸಮಯದಲ್ಲಿ ನಡೆಸಿದ ಕಾಮಗಾರಿಯಿಂದ ರಸ್ತೆಯಲ್ಲಿ ಸಣ್ಣ ಪುಟ್ಟ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.ಸಿಸಿ ರಸ್ತೆ ನಿರ್ಮಾಣ ಮಾಡುವ ಹಿನ್ನಲೆಯಲ್ಲಿ ಪಟ್ಟಣ ತುಂಬಾ ಧೂಳು ನಿರ್ಮಾಣವಾಗಿದೆ.ಸಾರ್ವಜನಿಕರಿಗೆ ಮತ್ತು ವಾಹನ ಸವಾರಿಗೆ ತುಂಬಾ ತೊಂದರೆಯಾಗಿದೆ.ಅಲ್ಲದೇ ಈ ಸಿಸಿ ರಸ್ತೆ ಪಕ್ಕದಲ್ಲಿಯೇ ಕಬ್ಬಿಣದ ರಾಡು ಹೊರಕ್ಕೆ ಬಂದಿದ್ದರಿಂದ ಕೆಲವೊಮ್ಮೆ ಪಾದಚಾರಿಗಳಿಗೆ ಗಾಯವಾಗಿದ್ದಾವೆ.ಸರಕಾರದ ಯೋಜನೆಗಳು ಸರಿಯಾಗಿ ಗುಣಮಟ್ಟದಿಂದ ಕೂಡುವ ಮೂಲಕ ಕಾರ್ಯರೂಪಕ್ಕೆ ಬಂದಾಗ ಮಾತ್ರ ಆ ಯೋಜನೆಗಳು ಸದ್ಬಳಕೆಯಾಗುತ್ತಿದೆ.ಕೂಡಲೇ ಈ ಸಿಸಿ ರಸ್ತೆಗೆ ಸರಿಯಾಗಿ ಸಮಯಕ್ಕೆ ಕ್ಯೂರಿಂಗ್ ಮಾಡುವ ಮೂಲಕ ಗುಣಮಟ್ಟದಿಂದ ಕಾಮಗಾರಿಯನ್ನು ಮುಂದುವರಿಸಬೇಕೆಂದು ತಾಲೂಕಾ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ರಮೇಶ ನಾಯಕ ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here