ಅಧಿಕಾರ ಪತ್ನಿಯರದು, ದರ್ಭಾರ ಪತಿರಾಯರದು

0
29

ಯಲಬುರ್ಗಾ,ಜ.03: ಪಟ್ಟಣದ ಪಟ್ಟಣ ಪಂಚಾಯತಿ ಸಭಾ ಭವನದಲ್ಲಿ ಗುರುವಾರ ನಡೆದ ಅಭಿವೃದ್ದಿ ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆ ಕುರಿತು ನಡೆದ ತುರ್ತು ಸಭೆಯಲ್ಲಿ ಮಹಿಳಾ ಸದಸ್ಯರ ಪತಿರಾಯರು ಸಭೆಯಲ್ಲಿ ಭಾಗವಹಿಸುವ ಮೂಲಕ ಸಭೆಯ ನಿಯಮವನ್ನು ಉಲ್ಲಂಘನೆ ಮಾಡಿದರು.
ಪಟ್ಟಣ ಪಂಚಾಯಿತಿ 7ನೇ ವಾರ್ಡಿನ ಉಪಾಧ್ಯಕ್ಷೆ ಜಯಶ್ರೀ ಅರಕೇರಿ ಇವರ ಪತಿ ಶರಣಪ್ಪ ಅರಕೇರಿ,8 ನೇ ವಾರ್ಡಿನ ಬಿಜೆಪಿ ಸದಸ್ಯೆ ಶೋಭಾ ಹುಬ್ಬಳ್ಳಿ ಪತಿ ಅಮರೇಶ ಹುಬ್ಬಳ್ಳಿ,11ನೇ ವಾರ್ಡಿನ ಬಿಎಸ್‍ಆರ್ ಕಾಂಗ್ರೆಸ್‍ನ ಸದಸ್ಯೆ ಶಾರದಾ ತಳವಾರ ಪತಿ ಕಳಕಪ್ಪ ತಳವಾರ ಸಭೆ ಪೂರ್ಣಗೊಳ್ಳುವವರೆಗೂ ಪಾಲ್ಗೊಂಡಿದ್ದರು. ಪತಿರಾಯರ ಭಾಗವಹಿಸಿದ್ದರಿಂದ ಮಹಿಳಾ ಸದಸ್ಯರು ಸಭೆಯಲ್ಲಿ ಮೂಕ ಪ್ರೇಕ್ಷರಾಗಬೇಕಾಯಿತು.
ಸಭೆಯಲ್ಲಿ ಕೈಗೊಂಡ ಬಹುತೇಕ ತಿರ್ಮಾನಗಳಲ್ಲಿ ಸದಸ್ಯರ ಪತಿರಾಯರು ಮಾತುಗಳೇ ಅಂತಿಮವಾಗಿ ನಿರ್ಣಯ ಪುಸ್ತಕದಲ್ಲಿ ದಾಖಲಾದವು. ಸಭೆಯಲ್ಲಿ ಚುನಾಯತಿ ಸದಸ್ಯರು ಮಾತ್ರ ಭಾಗವಹಿಸುವದಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಪಂಚಾಯತಿಯಲ್ಲಿ ನಡೆಯುವ ಬಹುತೇಕ ಸಭೆಗಳಲ್ಲಿ ಸದಸ್ಯೆಯರ ಪತಿರಾಯರು ಭಾಗವಹಿಸುವದು ಸಾಮಾನ್ಯವಾಗಿದೆ. ಮುಖ್ಯಾಧಿಕಾರಿ ಐ.ಕೆ ಗುಡದಾರಿ ಕೂಡಾ ಸದಸ್ಯರ ಪತಿರಾಯರು ಭಾಗವಹಿಸುವದಕ್ಕೆ ಮುಕ್ತವಾಗಿ ಅವಕಾಶ ಮಾಡಿ ಕೊಡುವ ಮೂಲಕ ಬೇಜವಬ್ದಾರಿ ತೋರುತ್ತಿದ್ದಾರೆ. ನಾಮ ನಿರ್ದೇಶಿತ ಸದಸ್ಯರು ಕೂಡಾ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುವದು ಕೂಡಾ ನಿಯಮಬಾಹಿರವಾಗಿದೆ. ತಮ್ಮ ಅನೂಕೂಲಕ್ಕೆ ತಕ್ಕಂತೆ ಸಭೆ ನಡೆಸಿ ಕಾಮಗಾರಿಗಳನ್ನು ಹಂಚಿಕೆ ಮಾಡಿಕೊಳ್ಳುತ್ತಿರುವದರಿಂದ ಸಭೆ ನಡೆಯುವ ವಿಷಯವನ್ನು ಗೌಪ್ಯವಾಗಿ ಇಡಲಾಗುತ್ತಿದೆ. ಜನ ಸಾಮಾನ್ಯರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡುವದಕ್ಕೆ ಕಾನೂನು ಎಂದು ಹೇಳುವ ಅಧಿಕಾರಿಗಳು ಈ ವಿಷಯದಲ್ಲಿ ಯಾರ ಒಳಿತಿಗಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಈ ಕುರಿತು ಪ್ರತಿಕ್ರಿಯೆ ಪಡೆಯಲು ಮುಖ್ಯಾಧಿಕಾರಿ ಐ.ಕೆ ಗುಡದಾರಿ ಮೊಬೈಲ್ ದೂರವಾಣಿ ಸ್ವೀಚ್ ಆಫ್ ಆಗಿತ್ತು. ಈ ಸಭೆಯಲ್ಲಿ ಉಪಾಧ್ಯಕ್ಷೆ ಜಯಶ್ರೀ ಅರಕೇರಿ, ಸದಸ್ಯರಾದ ಶಿದ್ರಾಮೇಶ ಬೇಲೇರಿ, ಮಲ್ಲೇಶಗೌಡ ಮಾ.ಪಾಟೀಲ್, ಮಹಬೂಬಸಾಬ ಕನಕಗಿರಿ, ವಿಜಯ ಕುಮಾರ ಕರಂಡಿ, ವಸಂತ ಕುಲಕರ್ಣಿ, ಡಾ.ನಂದಿತಾ ದಾನರಡ್ಡಿ, ಶರಣಮ್ಮ ಪೂಜಾರ, ನಾಮ ನಿರ್ದೇಶನ ಸದಸ್ಯರಾದ ಶರಣಪ್ಪ ಗಾಂಜಿ, ಈರಮ್ಮ ಛಲವಾದಿ, ಈರಪ್ಪ ಚಾಕರಿ, ಅಧಿಕಾರಿಗಳಾದ, ಅಂಬರಖಾನ, ಚೆನ್ನಪ್ಪ ಅಂಗಡಿ, ರಮೇಶ ಬೇಲೆರಿ, ರೇವಣಸಿದ್ದಯ್ಯ, ಸಭೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here