ಕಲಾವಿದರನ್ನು ಪ್ರೋತ್ಸಾಹಿಸುವಂತಾ ಕಾರ್ಯ ಆಗಬೇಕು-ಹನುಮಪ್ಪಜ್ಜ ಧರ್ಮರ

0
47

ಯಲಬುರ್ಗಾ17 : ನಾಡಿನುದ್ದಕ್ಕೂ ಎಲಮರೆಕಾಯಂತಿರುವ ಕಲಾವಿದರನ್ನು ಗುರ್ತಿಸಿ ಪ್ರೋತ್ಸಾಹಿಸುವಂತಾ ಕೆಲಸ ಮತ್ತು ಸೂಕ್ತ ವೇದಿಕೆ ಅವಶ್ಯ ಎಂದು ದಮ್ಮೂರಿನ ಭೀಮಾಂಭಿಕಾದೇವಿ ಮಠದ ಒಡೆಯರ ಹನುಮಪ್ಪಜ್ಜ ಧರ್ಮರ ಹೇಳಿದರು.ಮುಧೋಳದ ಸಂಗೀತ ಸಾಹಿತ್ಯ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಪ್ಪಳ ಇವರ ಆಶ್ರಯದಲ್ಲಿ ತಾಲೂಕಿನ ದಮ್ಮೂರು ಗ್ರಾಮದ ಭೀಮಾಂಭಿಕಾದೇವಿ ಮಠದ ಅವರಣದಲ್ಲಿ ಅಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು,ಈ ನಾಡಿಗೆ ಹಲವಾರು ಸುಗಮ ಸಂಗೀತ ಕಲಾವಿದರನ್ನು ನೀಡಿದ್ದು,ಇವತ್ತು ಮನುಷ್ಯನ ಆರೋಗ್ಯದಿಂದ ಇರಬೇಕಾದರೆ ಸಂಗೀತಾದಂತ ಕಲೆಯನ್ನು ದಿನಾನಿತ್ಯ ಆಲಿಸುವದರಿಂದ ಅವನ ಆರೋಗ್ಯ ಮತ್ತಷ್ಟು ವೃದ್ದಿ ಹೊಂದಲು ಸಾಧ್ಯ.ಇಂಥ ಕಲಾವಿದರನ್ನು ನಾವು ಗುರ್ತಿಸಿ ಗೌರವಿಸುವಂತಾ ಕೆಲಸ ಆಗಬೇಕಿದೆ ಎಂದರು
ಇದೇ ಸಂದರ್ಭದಲ್ಲಿ ಮುಧೋಳ ಗ್ರಾಮದ ಸಂಗೀತ ಕಲಾವಿದ ವೇ.ಮೂ.ಮಲ್ಲಯ್ಯ ಮಾದಿನೂರಮಠ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಗ್ರಾಪಂ ಅಧ್ಯಕ್ಷ ದುರ್ಗಪ್ಪ ಪೂಜಾರ,ಉಪಾಧ್ಯಕ್ಷ ಭೀಮವ್ವ ಚೌವಣ್ಣ,ಭೀಮಾಂಭಿಕಾ ಹನುಮಪ್ಪಜ್ಜ ಧರ್ಮರ,ಸದಸ್ಯರಾದ ಮಾಬುಬಿ ವಾಲಿಕಾರ,ಬಾಳಪ್ಪ ಜಕುಂಟಿ,ಹನಮಪ್ಪ ಪೂಜಾರ,ವೀರಪ್ಪ ರ್ಯಾವಣಕಿ,ಮೌನೇಶ ಬಡಿಗೇರ,ಕಮಲಪ್ಪ ನಾಯಕ,ಅನ್ನಪೂರ್ಣ ಮನ್ನಾಪೂರು,ಸೇರಿದಂತೆ ಮತ್ತಿತರರು
ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here