ಪುಣ್ಯಪುರುಷರು ಜನಿಸಿದ ದೇಶದಲ್ಲಿ ಕ್ರೂರತ್ವ : ಶ್ರೀಗಳ ವಿಷಾದ

0
21

ಬೆಳಗಾವಿ:18 ಸ್ವಾಮಿ ವಿವೇಕಾನಂದರಂಥ ಶ್ರೇಷ್ಠರು ಜನಿಸಿದ ಭಾರತದಲ್ಲಿ ಪ್ರತಿದಿನ ಮೋಸ, ಅನ್ಯಾಯ ನಡೆಯುತ್ತಿದೆ. ಮಕ್ಕಳು, ವಯೋವೃದ್ಧರು, ಅಂಗವಿಕಲರ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ಸಂತರು ಹಾಗೂ ಪ್ರಾಚೀನ ಧರ್ಮ ಸಂಸ್ಕøತಿಯನ್ನು ಹೊಂದಿದ್ದ ಈ ದೇಶ ಈಗ ಅಂಥ ಶ್ರೇಷ್ಠ ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯವೋ ಎಂಬ ಪ್ರಶ್ನೆ ಎದುರಾಗಿದೆ ಎಂದು ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಸಾಣೇಹಳ್ಳಿ ಶ್ರೀ ತರಳಬಾಳು ಜಗದ್ಗುರು ಪಟ್ಟಾಧ್ಯಕ್ಷ ಡಾ.ಪಂಡಿತಾಚಾರ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ರವಿವಾರ ನಗರದ ಕೋಟೆ ಆವರಣದ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ 11 ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಸರ್ವಧರ್ಮ ಸಮ್ಮೇಳನಕ್ಕೆ ಅವರು ಅಮೇರಿಕಾಕ್ಕೆ ತೆರಳುವಾಗ ಅನಾಮಧೇಯ ವ್ಯಕ್ತಿಯಾಗಿದ್ದರು. ಭಾಷಣ ಮಾಡುವ ಸರದಿಯಲ್ಲೂ ಕೊನೆಯಲ್ಲಿ ಅವರಿಗೆ ಅವಕಾಶ ನೀಡಲಾಯಿತು. ಆದರೆ ಅವರು ಆಡಿದ ಪ್ರೀತಿಯ ಸಹೋದರರೇ-ಸಹೋದರಿಯರೇ ಎಂಬ ಅವರ ಕಂಚಿನ ಕಂಠದ ಮಾತುಗಳು ಎಲ್ಲರ ಮನಮಿಡಿಯುವಂತಾಯಿತು. ಎಲ್ಲಾ ಕಾಮನೆಗಳನ್ನು ಗೆದ್ದು ಮಹಾನ್ ವ್ಯಕ್ತಿಯಾಗಿ ಜಗತ್ತಿನಲ್ಲಿ ಗುರುತಿಸಲ್ಪಟ್ಟರು. ವಿವೇಕಾನಂದರು ಒಂದರ್ಥದಲ್ಲಿ ಲೋಕಕ್ಕೆ ತಂದೆ-ತಾಯಿಯಂತಿದ್ದರು.
ಆದರೆ, ಇಂದು ಅವರು ಜನಿಸಿದ ಈ ಭಾರತ ದೇಶದಲ್ಲಿ ನಡೆಯುತ್ತಿರುವ ಸಮಾಜಘಾತುಕ ಚಟುವಟಿಕೆಗಳಿಂದ ದೇಶ ಕೆಟ್ಟ ಹೆಸರು ಪಡೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲಿ ವಿವೇಕ ಇರುತ್ತದೋ ಅಲ್ಲಿ ಆನಂದ ಇರುತ್ತದೆ. ವಿವೇಕ ಮತ್ತು ಆನಂದ ಎಲ್ಲಿರುತ್ತದೋ ಆತ ಮಾತ್ರ ಸ್ವಾಮಿಯಾಗಲು ಸಾಧ್ಯ ಅಂಥ ವ್ಯಕ್ತಿತ್ವ ಹೊಂದಿದ್ದ ಸ್ವಾಮಿ ವಿವೇಕಾನಂದರು ದೇಶಭÀಕ್ತಿ, ಬಡವರ ಮೇಲಿನ ಅನುಕಂಪ, ಮಾತೃಪ್ರೇಮ ಮುಂತಾದ ದೊಡ್ಡ ಗುಣಗಳ ಸದ್ಗುಣಿಯಾಗಿದ್ದರು ಎಂದು ಬಣ್ಣಿಸಿದರು.
ದರಿದ್ರರಲ್ಲೇ ದೇವರನ್ನು ಕಾಣುವ ವ್ಯಕ್ತಿತ್ವ ಅವರದ್ದಾಗಿತ್ತು. ಅವರು ಕೇವಲ ಶಾಸ್ತ್ರಗಳನ್ನು ಜ್ಞಾನ ಮಾಡಿಕೊಳ್ಳದೇ ಜೀವನದ ಕಷ್ಟಗಳನ್ನು ಅನುಭವಿಸಿದವರಾಗಿದ್ದರು ಎಂದರು.
ನಟನೆಯ ಜೀವನ ವ್ಯಕ್ತಿಗೆ ಶಕ್ತಿ ತರಲು ಸಾಧ್ಯವಿಲ್ಲ. ವಿವೇಕಾನಂದರು ಎಂದೂ ನಟನೆಯ ಜೀವನ ನಡೆಸದೇ ಪ್ರತಿಯೊಂದರ ಅನು`Àವವನ್ನು ಪಡೆದುಕೊಂಡಿದ್ದರು. ಅವರ ಬದುಕೇ ಒಂದು ರೋಮಾಂಚಕಾರಿ ಎಂದು ಹೇಳಿದರು.
ನಿತ್ಯ ಜೀವನದಲ್ಲಿ ಆಧ್ಯಾತ್ಮಿಕತೆ ವಿಷಯವಾಗಿ ಮಾತನಾಡಿದ ನಿಡಸೋಸಿ ಶ್ರೀ ಸಿದ್ದ ಸಂಸ್ಥಾನಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಸ್ವಾಮೀಜಿ ಮಾತನಾಡಿ, ಅಪ್ರತಿಮವಾದ ದೇಶಾಭಿಮಾನವನ್ನು ಸ್ವಾಮಿ ವಿವೇಕಾನಂದರು ನಮಗೆ ನೀಡಿದ್ದಾರೆ. ವಿವೇಕಾನಂದರು ತೋರಿದ ಮಾರ್ಗದಲ್ಲಿ ಅಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ನಡೆದರೆ ಎಲ್ಲವೂ ಸುಖಮಯವಾಗುತ್ತದೆ ಎಂದು ಅವರು ಹೇಳಿದರು.
ಸ್ವಾಮಿ ತದ್ಯುಕ್ತಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

loading...

LEAVE A REPLY

Please enter your comment!
Please enter your name here