ಜನಮನದ ಆಕರ್ಷಣೆ ಕೇಂದ್ರವಾದ ನಾನಾವಾಡಿ

0
30

ಬೆಳಗಾವಿ:18 ನಗರಕ್ಕೆ ಸಮೀಪದ ನಾನಾವಾಡಿಯ ಅಂಗಡಿ ತಾಂತ್ರಿಕ ಕಾಲೇಜಿನ ವಿಶಾಲ ಮೈದಾನದಲ್ಲಿ ಶನಿವಾರದಿಂದ ಆರಂಭಗೊಂಡ ಅಂತಾರಾಷ್ಟ್ರೀಯ ಪತಂಗೋತ್ಸವ ಜನಮದ ಆಕರ್ಷಣೆಯಾಗಿ ರಜಾ ದಿನವಾದ ರವಿವಾರದಂದು ಲಕ್ಷಾಂತರ ಪತಂಗಪ್ರೀಯರ ತಾಣವಾಗಿ ಕಂಗೊಳಿಸಿತು.
ಮಾಜಿ ಶಾಸಕ ಅಭಯ ಪಾಟೀಲ ಸಾರಥ್ಯದಲ್ಲಿ ನಡೆಯುತ್ತಿರುವ ಪತಂಗೋತ್ಸವದಲ್ಲಿ 20ಕ್ಕೂ ಹೆಚ್ಚು ವಿದೇಶಿಗರು ಪಾಲ್ಗೊಂಡು ಉತ್ಸವಕ್ಕೆ ಹೊಸ ಮೆರಗು ನೀಡಿದ್ದಾರೆ. ಹಲವು ಬಣ್ಣ, ವಿವಿಧ ರೂಪ, ಆಕಾರಗಳ ಗಾಳಿಪಟಗಳು ಬಾನೆತ್ತರಕ್ಕೆ ಚಿಮ್ಮಿ ನೋಡುಗರನ್ನು ರೋಮಾಂಚನಗೊಳಿಸುತ್ತಿವೆ.
ನಾನಾವಾಡಿಗೆ ತೆರಳು ಮಿಲೀಟರಿ ಮಹಾದೇವದಿಂದ ಉಚಿತ ವಾಹನಗಳ ಸೇವೆ ಕಲ್ಪಿಸಲಾಗಿದೆ. ರವಿವಾರ ರಜಾದಿನದ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಪತಂಗೋತ್ಸದಲ್ಲಿ ಆನಂದಿಸಿದ್ದು ಒಂದು ಹೊಸ ಅನುಭವವಾಗಿತ್ತು. ಸೋಮವಾರ ಪತಂಗೋತ್ಸವಕ್ಕೆ ತೆರೆ ಬಿಳಲಿದೆ.

loading...

LEAVE A REPLY

Please enter your comment!
Please enter your name here