ಕೃಷ್ಣಶರ್ಮಾರ ಸಹಿತ್ಯದ ಸಂಶೋಧನೆ ನಡೆಯಲಿ : ಡಾ. ನಾವಲಗಿ

0
84

ಬೆಳಗಾವಿ 18: ಕನ್ನಡದ ಜಾನಪದ ಸಾಹಿತ್ಯ ಅಧÀ್ಯಯನದ ಹರಿಕಾರ, ದೇಶಿ ಸಾಹಿತಿ ಬೆಟಗೇರಿ ಕೃಷ್ಣಶರ್ಮಾ ಸಾಹಿತ್ಯ ಕ್ಷೇತ್ರದಿಂದ ಅಲಕ್ಷಕ್ಕೊಳಗಾದ ಸಾಹಿತಿಯಾಗಿದ್ದು, ಕೃಷ್ಣಶರ್ಮಾರ ಸಹಿತ್ಯದ ಅಧÀ್ಯಯನ, ಸಂಶೋಧನೆ ನಡೆಯಬೇಕಿದೆ ಎಂದು ಜಾನಪದ ವಿದ್ವಾಂಸ ಡಾ.ಸಿ.ಕೆ ನಾವಲಗಿ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಕುಮಾರ ಗಂಧರ್ವ ರಂಗಮದಿರದಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮಾ ಸ್ಮ್ಮಾರಕ ಪ್ರತಿಷ್ಠಾನ, ಜಿಲ್ಲಾ ಲೇಖಕಿಯರ ಸಂಘ ಮತ್ತು ವೀರಶೈವ ಮಹಿಳಾ ಮಂಡಳ ಸಂಯುಕ್ತಾರ್ಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು.
ಬೆಟಗೇರಿ ಶರ್ಮಾ ನಾಡುಕಂಡ ಅಪರೂಪದ ದೇಶಿ ಸಾಹಿತಿ, ಇಂಗ್ಲೀಷ ಸಾಹಿತ್ಯದ ಯಾವುದೆ ಛಾಯೆ ಬೆಟಗೇರಿ ಸಾಹಿತ್ಯದಲ್ಲಿ ಕಾಣಲಾರದು, ಕನ್ನಡ, ಮರಾಠಿ, ಬೆಂಗಾಳಿ ಸಾಹಿತ್ಯಗಳ ವ್ಯಾಪಕÀ ಅರಿವು ಹಾಗೂ ದೊಡ್ಡಾಟ, ಸಣ್ಣಾಟ, ಜಾನಪದ ಕಲೆ ಅರಿವು ಗ್ರಾಮೀಣ ಕ್ರೀಡೆಗಳ ಅನುಭವ ಅವರನ್ನು ಅಪ್ರತಿಮ ದೇಶಿ ಸೊಗಡಿನ ಸಾಹಿತಿಯನ್ನಾಗಿ ನಿರ್ಮಿಸಿತು. ಬೆಟಗೇರಿ ಶರ್ಮಾರಿಗೆ ಅನೇಕ ಪ್ರಶಸ್ತಿ ಪುರಸ್ಕಾರ ದೊರೆತಿದ್ದರೂ ಕಿತ್ತೂರಿನ ನಾಗರಿಕರು ಪ್ರೀತಿಯಿಂದ ಕವಿಭೂಷಣ ಬಿರುದು ನೀಡಿದ್ದು ಅವರಿಗೆ ಹೆÉಚ್ಚು ಮೆಚ್ಚುಗೆಯದ್ದಾಗಿತ್ತು. ವಿಮರ್ಶಕರ ದಿವ್ಯನಿರ್ಲಕ್ಷ್ಯತೆಯಿಂದಾಗಿ ಬೆಟಗೇರಿ ಸಾಹಿತ್ಯ ಹೆಚ್ಚು ಬೆಳಕಿಗೆ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬೆಟಗೇರಿ ಶರ್ಮಾರು ಹಲವು ಪ್ರಥಮಗಳಿಗೆ ಸಾಕ್ಷಿಯಾದವರು, ಸಾಮಾಜಿಕ ಸಮಸ್ಯಗಳ ಎಳೆ ಇಟ್ಟುಕೊಂಡು ಕಥೆ ರಚನೆ ಮಾಡಿದರು. ಕರ್ನಾಟದಲ್ಲಿಯೇ ಸಾಮಾಜಿಕ ಕಾದಂಬರಿ ರಚನೆಮಾಡಿದವರಲ್ಲಿ ಬೆಟಗೇರಿಯವರು ಮೊದಲಿಗರಾಗಿದ್ದರು. ಜಾನಪದ ಹಾಡುಗಾರಿಗೆಯಲ್ಲಿಯೂ ತಮ್ಮ ನೈಪುಣ್ಯತೆ ಮೆರೆದಿದ್ದರು. ಹುಕ್ಕೆರಿ ಬಾಳಪ್ಪ ನವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಬೆಟಗೆರಿಯವರ ಸಾಹಿತ್ಯವೇ ಕಾರಣ. ಗಡಿನಾಡಿನ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಅವರದಾಗಿತ್ತು, ಶರ್ಮಾರು ಗಡಿನಾಡಿನಲ್ಲಿ ನಾಡಹಬ್ಬ ಆಚರಿಸುವ ಮೂಲಕ ಏಕೀಕರಣಕ್ಕೆ ಶಕ್ತಿತುಂಬಿದರು. ಗಡಿನಾಡಿನ ಘನತೆಗೆ ಧಕ್ಕೆಯಾದರೆ ಪ್ರಾಣ ತ್ಯಾಗಕ್ಕು ಸಿದ್ದ ಎನ್ನುವ ಸಂದೇಶವನ್ನು ಸರಕಾರಗಳಿಗೆ ನೀಡಿದ ಸಾಹಿತಿ. ಕನ್ನಡ ಮಕ್ಕಳ ಸಾಹಿತ್ಯಕ್ಕೂ ಇವರ ಕೊಡುಗೆ ಅಪಾರವಾಗಿದೆ. ಕರ್ನಾಟಕದ ಸಾಹಿತ್ಯ ಲೋಕಕ್ಕೆ ಮತ್ತು ಜಾನಪದಲೋಕಕ್ಕೆ ಅಪಾರ ಕೊಡುಗೆ ನೀಡಿದ ಶರ್ಮಾರ ಜೀವನ ಸಾಹಿತ್ಯದ ಬಗೆಗೆ ಹೆಚ್ಚು ಸಂಶೋಧÀನೆಯಾಗಬೇಕಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಕಾಂಗ್ರಸ್ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ ಮಾತನಾಡಿ, ಸ್ತ್ರೀಯರೇ ಸೇರಿ ಮಾಡುತ್ತಿರುವ ಸಂಕ್ರಾಂತಿ ಸಂಭ್ರಮ ಸಂತಸ ತಂದಿದೆ. ಜಿಲ್ಲೆಯ ಮಹಿಳಾ ಲೇಖಕಿಯರು ಕಡೆಗಣನೆಯಾಗುತ್ತಿದೆ. ರಾಜ್ಯ ಸರಕಾರದ ಯಾವುದೆ ಪುರಸ್ಕಾರಗಳು ಮಹಿಳಾ ಲೇಖರಿಗೆ ದೊರಕಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಅಲಕ್ಷ್ಯವೇ ಈ ಸಮಸ್ಯೆಗೆ ಕಾರಣವಾಗಿದೆ ಎಂದರು.
ಸಂಕ್ರಾಂತಿ ಸಭ್ರಮದಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾ ಕಡಪಟ್ಟಿ, ಶೈಲಾ ಬಿಂಗೆ, ಪ್ರೊ. ಗುರುದೇವಿ ಹುಲೆಪ್ಪನವರಮಠ, ವೀರಶೈವ ಮಹಿಳಾ ಮಂಡಳದ ಅಧ್ಯಕ್ಷೆ ಭಾರತಿ ಮಠದ, ಬೆಟಗೇರಿ ಕೃಷ್ಣ ಸರ್ಮಾ ಸ್ಮಾರಕ ಪ್ರತಿಷ್ಠಾನ ಅಧ್ಯಕ್ಷ ರಾಘವೇಂದ್ರ ಪಾಟೀಲ, ಜ್ಯೋತಿ ಬಾದಾಮಿ, ರೇಖಾ ಕೋರಿ ಶಟ್ಟಿ, ಸಾಹಿತಿ ಬಸವರಾಜ ಜಗಜಂಪಿ ಮೊದಲಾದವರು ಹಾಜರಿದ್ದರು ಪ್ರೊ. ಸುನಿತಾ ಪ್ರಾಥಿಸಿದರು, ಪ್ರೊ. ವಿಜಯಲಕ್ಷ್ಮೀ ಪುಟ್ಟಿ ನಿರೂಪಿಸಿದರು, ರೇಖಾ ಕೋರಿಶೆÀಟ್ಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here