ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರಮುಡಿ ಗ್ರಾಪಂ ಎದುರು ಕರವೇ ಧರಣಿ

0
68

ಯಲಬುರ್ಗಾ,ಫೆ,5;ಸಮೀಪದ ಕರಮುಡಿ ಗ್ರಾಮ ಪಂಚಾಯತಿ ಮುಂದೆ ಎಚ್ ಶಿವರಾಮೇಗೌಡ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ವಿವಿಧ ಬೇಡಿಕೆ ಈಡೆರಿಕೆಗಾಗಿ ಅಗ್ರಹಸಿ ಕಾರ್ಯಕರ್ತರು ಗ್ರಾಪಂ ಮುಂದೆ ಉಪವಾಸ ಸತ್ಯಗ್ರಾಹ ಮಾಡಿದರು.
ಗ್ರಾಪಂ ನವರು ಹಲವಾರು ಬಾರಿ ಗ್ರಾ.ಪಂ ಗೆ ಮತ್ತು ತಾಲೂಕ ಪಂಚಾಯತಿಯವರಿಗೆ ಹಲವಾರು ಭಾರಿ ಮನವಿ ಸಲ್ಲಿಸಿದರು ಕೂಡ ಯಾವುದೆ ಅಧಿಕಾರಿಗಳು ಆಗಲಿ ಮತ್ತು ಜನಪ್ರತಿ ನಿಧಿಗಳಾಗಲಿ ಯಾವುದೆ ರೀತಿ ಸ್ಪಂದಿಸಿಲ್ಲ ಆದ್ದರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಯಿತು ಎಂದು ಹೇಳಿದ ಅವರು ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಯ ಸುತ್ತ ಮುತ್ತ ತ್ಯಾಜ್ಯ ವಸ್ತುಗಳಿದ್ದು ಜನರಿಗೆ ಸಾಂಕ್ರಮಿಕ ರೋಗಬರುವ ಭೀತಿಯಿದೆ ಮತ್ತು ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಕಟ್ಟಡ ಇರುವದಿಲ್ಲ .ಮತ್ತು ಗಟಾರು ನಿರ್ಮಾಣ ಮಾಡಬೇಕು ಮತ್ತು ಗ್ರಾಮದಲ್ಲಿ ಹಲವಾರು ವಿದ್ಯುತ್ತ ಕಂಬಗಳು ಬಿಳವ ಅಪಾಯವಿದ್ದು ಸರಿಪಡಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೆರಿಸಬೇಕು ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವದಿಲ್ಲ ಎಂದು ಹೇಳಿದರು ಗ್ರಾಪಂ ಅಭಿವೃದ್ದಿ ಅಧಿಕಾರಿ ಬಸವರಾಜ ಬಡಿಗೇರ ನಿಮ್ಮ ಬೇಡಿಕೆ ಈಡೆರಿಸಲು ಪ್ರಯತ್ನಿಸಲಾಗುವದು ಎಂದು ಮನವಲಿಸಲು ಪ್ರಯ್ನಸಿದರು ಹೋರಾಟಗಾರರು ಬಗ್ಗಲಿಲ್ಲ ಮದ್ಯಾಹ್ನದ ವೇಳಿ ವಿದ್ಯುತ್ ಪ್ರಸರಣ ಅಧಿಕಾರಿಗಳು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ 15 ದಿನದಲ್ಲಿ ವಿದ್ಯತ್ತ ಕಂಬಗಳನ್ನು ಹಾಕಲಾಗುವದು ಎಂದು ಬರವಣೆಗಯ ರೂಪದಲ್ಲಿ ಬರೆದುಕೊಟ್ಟರು ರಾತ್ರಿ ವೇಳೆಗೆ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಂ ಜಯಪ್ಪ ಭೇಟಿ ನಿಮ್ಮ ಬೇಡಿಕೆಗಳನ್ನು ಶಿಘ್ರದಲ್ಲಿ ಬಗೆಹರಿಸಲಾಗುವದು ಎಂದು ಭರವಸೆ ನೀಡಿದಾಗ ಉಪವಾಸ ಸತ್ಯಾಗ್ರವನ್ನು ಹಿಂಪಡೆಯಲಾಯಿತು.
ಹೋರಾಟದಲ್ಲಿ ಗದಗ ಜಿಲ್ಲಾ ಕರವೇ ಅಧ್ಯಕ್ಷ ಕೆ.ಎಸ್.ಕೊಡತಘೇರಿ ಕರವೇ ತಾಲೂಕ ಅಧ್ಯಕ್ಷ ರಾಜಶೇಖರ ಶ್ಯಾಗೋಟಿ, ಗ್ರಾಮ ಘಟಕದ ಅಧ್ಯಕ್ಷ ಗೌಡಪ್ಪ ಶಿ ಬಲಕುಂದಿ ,ಗೌಡಪ್ಪ ಕೇಂಚgಡ್ಡಿ ಕರ್ನಾಟಕ ಯುವಕ ಮಂಡಳದ ಯಮನೂರಪ್ಪ ಪರ್ತಕರ್ತ ಸ,ಶರಣಪ್ಪ ಪಾಟೀಲ ,ಬಸವರಾಜ ತಳವಾರ,ಮೌನೇಶ,ಇಮಾಮಸಾಬ ,ತಿರುಪತಿ ರಾಠೋಡ ಸೇರಿದಂಎ ಹಲವಾರು ಜನರು ಹೋರಾಟದಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here