ದೇಶದಲ್ಲಿ ಜನಪರ ಬಜೆಟ್ ಮಂಡಿಸಿದ ಬಿಜೆಪಿ ಸರಕಾರ ಕೇಂದ್ರದ ಪ್ರಸಕ್ತ ಎರಡೂ ಬಜೆಟ್‍ನಲ್ಲಿ ಬೆಳಗಾವಿಗೆ ಏನೂ ಇಲ್ಲ • ರಾಜಶೇಖರಯ್ಯಾ ಹಿರೇಮಠ

0
71

ಬೆಳಗಾವಿ:28 ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿ ಅಚ್ಚೇ ದಿನ, ಅಚ್ಚೇ ದಿನ ಎನ್ನುತ್ತಲೇ ಕೇಂದ್ರ ಬಜೆಟ್‍ನಲ್ಲಿ ಮಂಡಿಸಲಾದ ಎರಡೂ ಬಜೆಟ್‍ನಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ್ಕೆ ಬರೆ ಎಳೆದಿದೆ.
ಹಣಕಾಸು ಸಚಿವ ಅರುಣ ಜೆಟ್ಲಿ ಶನಿವಾರ ಮಂಡಿಸಲಾದ ಹಣಕಾಸು ಬಜೆಟ್‍ನಲ್ಲಿ ಸಾರ್ವಜನಿರ ಹಿತಾದೃಷ್ಠಿಯಿಂದ ಬಜೆಟ್ ಮಂಡಿಸಲಾಗುವುದು ಎಂದು ಹೇಳಿ ಸಾರ್ವಜನಿಕರ ಹೆಸರಿನಲ್ಲಿ ಮೋದಿ ಸರಕಾರ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜನತೆಯ ಮೇಲೆ ಬರೆ ಎಳೆದಿದೆ ಎಂದು ಸಾರ್ವಜನಿಕರು ಮೋದಿ ಸರಕಾರಕ್ಕೆ ಅಚ್ಚೇ ದಿನ ಎಲ್ಲಿ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶೇ.12.36 ರಷ್ಠಿದ್ದ ಸೇವಾ ತೆರಿಗೆಯನ್ನು 14 ಪ್ರತಿಶತಕ್ಕೆ ಏರಿಸಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ 15 ಸಾವಿರ ಕೋಟಿ ಲಭ್ಯವಾಗುತ್ತದೆ. ಆದರೆ ಸೇವಾ ತೆರಿಗೆ ಹೆಚ್ಚಳದಿಂದ ಸಾರ್ವಜನಿಕರಿಗೆ ಲಭ್ಯವಾಘುವ ಸೇವೆಗಳು ಇನ್ನು ಮುಂದೆ ದುಬಾರಿಯಾಗಲಿವೆ. ಉದ್ಯೋಗಿಗಳಿಗೆ ನಿರೀಕ್ಷಿಸಿದಷ್ಟು ಆದಾಯ ತೆರಿಗೆ ವಿನಾಯತಿಯತ ಅರುಣ ಜೆಟ್ಲಿ ಮನಸ್ಸು ಮಾಡಿಲ್ಲ. ಆದರೆ ಟ್ರಾನ್ಸಪೊರ್ಟ ಭತ್ಯೆಯನ್ನು 800 ರಿಂದ 1600 ರೂಗೆ ಏರಿಸಿರುವುದು ಸಮಾಧಾನಕರ ಸಂಗತಿಯಾಗಿದೆ.
ಪ್ರಧಾನ ಮಂತ್ರಿ ಜನ್‍ಧನ ಯೋಜನೆ ಯಶಸ್ವಿಯಾದ ಹಿನ್ನೆಯಲ್ಲಿ ಕೇಂದ್ರ ಸರಕಾರ ಪ್ರಧಾನಿ ಮಂತ್ರಿ ಜೀವನ ಜ್ಯೋತಿ ಹೆಸರಿನಡಿ ಬಡವರಿಗೆ ವಿಮಾಯೋಜನೆಯನ್ನು ತರಲು ಮುಂದಾಗಿದೆ. ಈ ಯೋಜನೆಯಡಿ 12 ರೂ. ಪ್ರೀಮಿಯಂ ಪಾವತಿಸಿದರೆ ಬಡವರಿಗೆ 2 ಲಕ್ಷ ರೂ. ಲಭ್ಯವಾಗಲಿದೆ. ಅಟಲ್ ಪಿಂಚಣಿಯ ಹೆಸರಿನಲ್ಲಿ ಬಡವರು, ದುರ್ಬಲ ವರ್ಗಗಳಿಗೆ ಪಿಂಚಣಿ ನೀಡಲು ಕೇಂದ್ರ ಸರಕಾರ ಮುಂದಾಗಿದರುವುದು ರಾಜ್ಯದ ಹಾಗೂ ಉತ್ತರ ಕರ್ನಾಟಕದ ಜನರಿಗೂ ಲಾಭವಾಲಿದೆ.
ಇನ್ನು ಎಂದಿನಂತೆ ಸಿಗರೇಟ್ ಸುಂಕ ಹೆಚ್ಚಿಸಲಾಗಿದೆ. ಜೊತೆಗೆ ಬಜೆಟ್‍ನಲ್ಲಿ ಕಾರ್ಪೋರೇಟ್ ಸಂಸ್ಥೆಗಳಿಗೆ ರತ್ನಗಂಬಳಿ ಗೌರವ ಲಭಿಸಿದೆ. ಕಾರ್ಪೊರೇಟ್ ತೆರಿಗೆಯನ್ನು ಶೇ.30 ರಿಂದ 25ಕ್ಕೆ ಇಳಿಸಲಾಗಿದೆ. ಸರಕಾರದ ಅವಧಿ ಮುಗಿಯುವ ವರೇಗೂ ಸಿಗರೇಟ್ ಸುಂಕವನ್ನು ಇಳಿಸುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿದೆ.
ರೇಲ್ವೆ ಬಜೆಟ್‍ನಲ್ಲೂ ಬೆಳಗಾವಿಗೆ ಏನೂ ಇಲ್ಲ : ಕಳೆದೆರಡು ದಿನಗಳ ಹಿಂದೆ ರೈಲ್ವೇ ಸಚಿವ ಸುರೇಶ ಪ್ರಭು ಅವರು ಮಂಡಿಸಿದ ಬಜೆಟ್‍ನಲ್ಲಿ ಯಾವುದೇ ಹುರುಳಿರಲಿಲ್ಲ. ಯಾವುದೊಂದು ಹೊಸ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ಸೂಚಿಸಲಿಲ್ಲ. ಈ ಹಿಂದಿನ ಬಜೆಟ್‍ನಲ್ಲಿ ಸಚಿವ ಸದಾನಂದಗೌಡ ಅವರು ಬೆಳಗಾವಿ – ಕೊಲ್ಲಾಪುರ ಮಾರ್ಗವಾಗಿ ಸವದತ್ತಿಗೆ ಹೊಸ ರೈಲು ಮಾರ್ಗ ಹಾಗೂ ಬೆಳಗಾವಿ – ಕಿತ್ತೂರ ಮಾರ್ಗವಾಗಿ ಧಾರವಾಡಕ್ಕೆ ಹೊಸ ಮಾರ್ಗಕ್ಕೆ ಹಸಿರು ನಿಶಾನೆ ತೊರಿಸಿದ್ದರು ಆದರೆ ಈ ಬಾರಿ ಸುರೇಶ ಪ್ರಭು ಅವರು ಮಂಡಿಸಿದ ಬಜೆಟ್‍ನಲ್ಲಿ ಯಾವುದೇ ಹುರುಳಿರಲಿಲ್ಲ ಎಂದು ಈ ಭಾಗದ ಜನರು ಆರೋಪಿಸುತ್ತಿದ್ದಾರೆ.

ಬಾಕ್ಸ್

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಬಜೆಟ್‍ನಲ್ಲಿ ದೇಶದ ಜನತೆ ಹೇಳಿದಂತೆ ನಡೆದಂತೆ ನುಡಿದ ಸರಕಾರವೆಂದರೆ ಬಿಜೆಪಿ. ಕೇಂದ್ರ ಸಚಿವ ಅರುಣ ಜಟ್ಲಿ ಅವರು ಮಂಡಿಸಿರುವ ಬಜೆಟ್‍ನಲ್ಲಿ ದೇಶದ ಜನರ ಆಶ್ವಾಸನೆಗಳು ಹೆಚ್ಚಿಸಿದೆ. ಶಿಕ್ಷಣ, ಪ್ರವಾಸೋಧ್ಯಮ, ನೀರಾವರಿ, ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಮೂಲಭೂತ ಸೌಕರ್ಯಕ್ಕೆ ಈ ಬಜೆಟ್ ಸ್ವಾಗತಾರ್ಹವಾಗಿದೆ.
ಕೇಂದ್ರ ಸರಕಾರದಲ್ಲಿ ಕರ್ನಾಟಕ್ಕೆ ಐಐಟಿ ಬರುವಂತೆ ಸಂಸದರು ಹಾಗೂ ಬಿಜೆಪಿ ಮುಖಂಡರ ಶ್ರಮವಿದೆ. ಕರ್ನಾಟಕದವರೆಗೂ ತಂದ ಐಐಟಿಯನ್ನು ಬೆಳಗಾವಿಯಲ್ಲಿಯೇ ಸ್ಥಾಪಿಸುವಂತೆ ಮಾಡುತ್ತೇವೆ.
ಮಹಾಂತೇಶ ಕವಟಗಿಮಠ
ಬಾಕ್ಸ್
ಕರ್ನಾಟಕದಲ್ಲಿ ಐಐಟಿ :
ಕೇಂದ್ರ ಸರಕಾರದ ಬಜೆಟ್‍ನಲ್ಲಿ ಐಐಟಿ ಸ್ಥಾಪಿಸುವಂತೆ ಮಂಡನೆ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೆಳಗಾವಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಅಲ್ಲದೆ ಮಾಜಿ ಶಾಸಕ ಅಭಯ ಪಾಟೀಲ ಅವರು ಹಲವು ವರ್ಷಗಳಿಂದ ಐಐಟಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕು ಬೆಳಗಾವಿ ನಿರುದ್ಯೋಗಿಗಳಿಗೆ ನೌಕರಿಸಿಗುವಂತಾಗಬೇಕು ಆದ್ದರಿಂದ ಕೇಂದ್ರದ ಬಜೆಟ್‍ನಲ್ಲಿ ಪ್ರಸ್ತಾಪವಾದ ಐಐಟಿ ಬೆಳಗಾವಿಯಲ್ಲಿ ಸ್ಥಾಪಿಸಬೇಕು.
ಫೋಟೊ
ಅಭಯ ಪಾಟೀಲ
ಮಾಜಿ ಶಾಸಕ
——
ಫೋಟೊ
ಬಾಕ್ಸ
ಕೇಂದ್ರ ಸರಕಾರದ ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಬೆಳಗಾವಿಗೆ ಹೇಳಿಕೊಳ್ಳುವಂತ ಕೊಡುಗೆಗಳನ್ನು ನೀಡಿಲ್ಲ ಎಂಬ ಅಸಮಾಧಾನ ಜನರಲ್ಲಿ ಕಾಡುತ್ತಿದೆ. ಮುಂಬರುವ ರಾಜ್ಯ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಬಜೆಟ್‍ನಲ್ಲಿ ಬೆಳಗಾವಿಗೆ ಅಭಿವೃದ್ಧಿಗೆ ವಿಶೇಷ ಅನುಧಾನ ಬಿಡುಗಡೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಜಯರಾಮ್
ಸಾರ್ವಜನಿಕರು
ಬುಲ್ಯೇಟ್
• ಸಂಸದ ಹಾಗೂ ಬಿಜೆಪಿ ಮುಖಂಡರಿಂದ ಕರ್ನಾಟಕಕ್ಕೆ ಐಐಟಿ.
• ಕರ್ನಾಟಕಕ್ಕೆ ಬಂದ ಐಐಟಿ ಬೆಳಗಾವಿಗೆ ತರಲು ಪ್ರಯತ್ನ.
• ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರಕಾರದ ಬಜೆಟ್‍ನಲ್ಲಿ ಸಿಗುವುದೆ ಅನುಧಾನ.
• ಶೇ.12.36 ರಷ್ಠಿದ್ದ ಸೇವಾ ತೆರಿಗೆಯನ್ನು 14 ಪ್ರತಿಶತಕ್ಕೆ ಏರಿಕೆ.
• ಸರಕಾರದ ಬೊಕ್ಕಸಕ್ಕೆ 15 ಸಾವಿರ ಕೋಟಿ ಲಭ್ಯವಾಗುತ್ತದೆ.

ಇಂದು ವಿರಾಟ ಹಿಂದೂ ಸಮಾವೇಶ, ನಗರದಲ್ಲಿ ಪಾದಯಾತ್ರೆ

loading...

LEAVE A REPLY

Please enter your comment!
Please enter your name here